Skip to main content

Posts

Showing posts with the label Every 12 Years once from Nasik to Mangalore longway cover Sadhus called Bhara panth yatre

Blog number 1248. ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿಯೇ ನಾಸಿಕ್ ನಿಂದ ಮ೦ಗಳೂರಿಗೆ ನಡೆದು ಬರುವ ಸಾದು ಸಂತರ ನಿಗೂಡವಾದ ಬಾರಾಪಂಥ್ ಯಾತ್ರೆ

#ಬಾರಾಪಂಥ್ ಯಾತ್ರೆ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕು೦ಬ ಮೇಳ ಮುಗಿದ ಮರುದಿನ ಪ್ರಾರಂಭ ಆಗುವ ಈ ಯಾತ್ರೆ ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಬರುವ ನೂರಾರು ಸಾಧು ಸಂತರ ಐದು ಸಾವಿರ ವಷ೯ದಿOದ ನಿರಂತರವಾಗಿ ನಡೆದು ಬರುತ್ತಿರುವ ವಿಸ್ಮಯ ನಿಗೂಡ ಯಾತ್ರೆ#            ನಾಲ್ಕು ವಷ೯ದ ಹಿಂದೆ ಇದೇ ದಿನ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ನಿಂದ ಕುಂಬಮೇಳ ಮುಗಿದ ಮರುದಿನ ಹೊರಡುವ ಈ ಬಾರ ಪ೦ಥ್ ಯಾತ್ರೆಯಲ್ಲಿ ನೂರಾರು ಸಾದು ಸಂತರು ಹೊಸ ನಗರದ ಆಲಗೇರಿ ಮಂಡ್ರಿ ಎಂಬ ಹಳ್ಳಿಯಲ್ಲಿ ತಂಗಿದ್ದರು.   ಸುಮಾರು 6 ತಿಂಗಳು ಕಾಲ ಪಶ್ಚಿಮ ಘಟ್ಟದ ನಿಧಿ೯ಷ್ಟ ಮಾಗ೯ದಲ್ಲಿ ನಿಧಿ೯ಷ್ಟ ಸ್ಥಳದಲ್ಲಿ ತಂಗುತ್ತಾ ನಿಧಿ೯ಷ್ಟ ದಿನ ಮಂಗಳೂರಿನ ಕದ್ರಿ ಮಠಕ್ಕೆ ತಲುಪುತ್ತಾರೆ.   ಇದು 5000 ವಷ೯ಕ್ಕೂ ಹಿಂದಿನಿಂದ ತಪ್ಪದೇ ನಡೆದು ಬಂದಿರುವ ವಿಸ್ಮಯ, ಇಲ್ಲಿನ ಬಾರಾ ಪಂತ್ ಯಾತ್ರೆಯಲ್ಲಿ ಭಾಗವಹಿಸುವ ಸಾಧು ಸಂತರಲ್ಲಿರುವ ನಂಬಿಕೆ ಸನ್ಯಾಸಿ ಆಗಿ 70 ಜನ್ಮ ಆದಮೇಲೆ ಈ ಯಾತ್ರೆ ಲಭ್ಯ ಎಂಬ ನಂಬಿಕೆ.   ಗೋರಕ್ ಪುರದ (ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ) ಸ್ವಾಮಿ ಆದಿತ್ಯ ನಾಥ್ ಜೋಗಿ ಇದರ ಮಹಾಂತರಾಗಿದ್ದಾರೆ.   2016ರಲ್ಲಿ ಈ ಯಾತ್ರೆ ಆಗಮನದ ಬಗ್ಗೆ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ನನ್ನ ಲೇಖನ ಮುಖಪುಟದ ಲೇಖನವಾಗಿ ಪ್ರಕಟಿಸಿತ್ತು.   ಬಾರಾ ಪoತ್ ಯಾತ್ರೆ ಹೊಸನ...