Skip to main content

Posts

Showing posts with the label My father cancelled selling of agriculture land because of my word

Blog number 1193. ನಮ್ಮ ತಂದೆ ಮಾರಾಟ ರದ್ದು ಮಾಡಿ ನನಗೆ ನೀಡಿದ ಜಮೀನು

1972ರಲ್ಲಿ ನಮ್ಮ ತಂದೆಗೆ ದರಕಾಸ್ತುನಲ್ಲಿ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ತಾವರೇಹಳ್ಳಿ ಗ್ರಾಮದ ಸ.ನಂ.44ರಲ್ಲಿ 6 ಎಕರೆ ಖುಷ್ಕಿ ಜಮೀನು ಮಂಜೂರಾಗಿತ್ತು, ಆ ಸ್ಥ೪ದ ಹೆಸರು ಜೇಡಿ ಸರ ಯಾಕೆಂದರೆ ಅಲ್ಲಿನ ಮಣ್ಣಿನಲ್ಲಿ ಜೇಡಿ ಜಾಸ್ತಿ ಹಾಗಾಗಿ ಇದು ಫಲವತ್ತಾದ ಜಮೀನಲ್ಲ ಬೇರೆ ಕಡೆ ಜಮೀನು ಮಂಜೂರು ಮಾಡಿ ಅಂತ ನಮ್ಮ ತಂದೆ ಮತ್ತು ಅನೇಕರು ಸಕಾ೯ರಕ್ಕೆ ಅಜಿ೯ ಸಲ್ಲಿಸಿ ಈ ಜಮೀನು ಬೇಡ ಅಂತ ತೀಮಾ೯ನಿಸಿದ್ದರು.        ಸಕಾ೯ರ ಇವರ ಅಜಿ೯ ಪುರಸ್ಕರಿಸಲಿಲ್ಲ, ನಾನು ಚಿಕ್ಕವನಿದ್ದಾಗ ಈ ಜಮೀನು ಖರೀದಿಸಲು ಆನಂದಪುರದ ಟಿಂಬರ್ ಕಂಟ್ರಾಕ್ಟರ್ ಚಂದ್ರಹಾಸ ಶೇಟ್ ಮತ್ತು ಮಧ್ಯಸ್ಥಿಕೆಗಾಗಿ ಗ್ರಾಮ ಪಂಚಾಯತ್ ನೌಕರರಾದ ಪ್ರತಾಪ್ ಸಿಂಗ್ ಮತ್ತು ಬಳೆಗಾರ್ ಸುಬ್ಬಣ್ಣ ಬಂದಿದ್ದರು.        ಒಳಗಿನ ಕೋಣೆಯಲ್ಲಿ ಮಾರಾಟದ ಮಾತುಕಥೆ ಅಂತಿಮ ಹಂತಕ್ಕೆ ಬರುತ್ತಿತ್ತು. ಹೊರಗಿನ ಕೋಣೆಯಲ್ಲಿ ಬುಗುರಿಯನ್ನ ಗಾಳಿಯಲ್ಲಿ ಹಾರಿಸಿ ಅಂಗೈ ಮೇಲೆ ತಿರುಗಿಸುತ್ತಾ ಒಳಗಿನ ವ್ಯವಹಾರ ಆಲೈಸುತ್ತಿದ್ದೆ.            ಎಕರೆಗೆ ಅಂತಿಮವಾಗಿ ನಮ್ಮ ತಂದೆ 2500 ರಂತೆ 6 ಎಕರೆಗೆ 15000 ಕೇಳುತ್ತಿದ್ದರು ಆದರೆ ಚಂದ್ರಹಾಸ ಶೇಟ್ರವರು 12000ಕ್ಕೆ ಪಟ್ಟು ಹಿಡಿದಿದ್ದರು ಅಷ್ಟರಲ್ಲಿ ಒಳಕ್ಕೆ ಇಣುಕಿದ ನಾನು ಅಪ್ಪಯ್ಯ ಆ ಜಮೀನು ನನಗೆ ಇರಲಿ ಅಂದೆ, ನನಗೆ ಬೇಕೆ ಬೇಕು ಎನ್ನುವ ಹಟವಾಗಲಿ ಅ...