Skip to main content

Posts

Showing posts with the label Ramachandrappa desided to quit Grampanchayat presidentship and joined as school teacher post

Blog number 1191. ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ತ್ಯಜಿಸಿ ಶಾಲಾ ಶಿಕ್ಷಕರಾದ ರಾಮಚಂದ್ರಪ್ಪ ಈಗ ಆದರ್ಶ ಶಿಕ್ಷಕರಾಗಿದ್ದಾರೆ

#ಅವತ್ತು_ಸಾಗರ_ತಾಲ್ಲೂಕಿನಲ್ಲಿ_ಇದು_ಸೆನ್ಸೇಷನಲ್_ಸುದ್ದಿ    1993ರಲ್ಲಿ ಸಾಗರ ತಾಲ್ಲೂಕಿನ ಉತ್ತರ ಕನ್ನಡ ಜಿಲ್ಲೆಯ ಗಡಿ ಬಾಗದ ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದವರು ಪೈರ್ ಬ್ರಾಂಡ್ ರಾಮಚಂದ್ರಪ್ಪ ಯುವಕರು ಮತ್ತು ಪದವೀದರರು ಅಷ್ಟೇ ಅಲ್ಲ ಲಂಚ ವಿರೋದಿ ಆಗಿ ನ್ಯಾಯದ ಪರವಾಗಿ ಅತ್ಯುತ್ತಮ ವಾಗ್ಮಿ ಆಗಿದ್ದರು.   ಆಗ ನಾನು ನಮ್ಮ ಊರಿನ ಗ್ರಾಮ ಪಂಚಾಯತ್ ಉಪಾದ್ಯಕ್ಷನಾಗಿದ್ದೆ ನಾವೆಲ್ಲ ಸೇರಿ ಸಾಗರ ತಾಲ್ಲೂಕ್ ಗ್ರಾಮ ಪಂಚಾಯತನ ಅಧ್ಯಕ್ಷ ಉಪಾಧ್ಯಕ್ಷರ ವೇದಿಕೆ ಕೂಡ ಮಾಡಿದ್ದೆವು.   ಈಡಿಗ ಸಮಾಜದ ವಿದ್ಯಾವಂತ, ಕೆಲಸಗಾರ,ವಾಗ್ಮಿ ಆಗಿದ್ದ ರಾಮಚಂದ್ರರನ್ನ ರಾಜಕೀಯವಾಗಿ ಬೆಳೆಸಬಹುದಾದ ಸಂದಭ೯ದಲ್ಲಿ ಅವರನ್ನ ಎಲ್ಲಾ ರೀತಿಯಲ್ಲೂ ಹಣಿಯಲು ಅವರ ಪಕ್ಷದವರೇ ಮುಂದಾಗಿದ್ದು ವಿಪಯಾ೯ಸ.   ಇದೇ ಸಂದರ್ಭದಲ್ಲಿ ಇವರು ಶಿಕ್ಷಕರಾಗಿ ಆಯ್ಕೆ ಆದರು, ಎಲ್ಲರೂ ಬಾವಿಸಿದ್ದು ಶಿಕ್ಷಕರ ವೃತ್ತಿ ತಿರಸ್ಕರಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಆದರೆ ರಾಮಚಂದ್ರಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಶಿಕ್ಷಕರಾಗಿ ನಮ್ಮ ಊರಿನ ಸಮೀಪದ ಹೊಸನಗರ ತಾಲ್ಲೂಕಿನ ಹರತಾಳು ಶಾಲೆಗೆ ಕರ್ತವ್ಯಕ್ಕೆ ಬಂದರು.    ಈ ಸುದ್ದಿ ಆ ಕಾಲದಲ್ಲಿ ತುಂಬಾ ಸೋಜಿಗದ ಸುದ್ದಿ, ಈ ಕಾಲದಲ್ಲೂ ಕೂಡ ಏಕೆಂದರೆ ಸಕಾ೯ರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬರುವವರೇ ಹೆಚ್ಚು ...