ಆಷಾಢ_ಮುಗಿದು_ಶ್ರಾವಣ_ಬಂತು! ಏನಿದು_ಗಟಾರಿ_ಅಮಾವಾಸ್ಯೆ ಇಲ್ಲಿದೆ ಕುತೂಹಲಕಾರಿ ಮಾಹಿತಿ! ಓದಿ... ಆಷಾಢ ಮಾಸದ ಕೊನೆಯ ದಿನ ಅಂದರೆ ಅಮಾವಾಸ್ಯೆಯಂದು ಕರ್ನಾಟಕದಲ್ಲಿ 'ಭೀಮನ ಅಮಾವಾಸ್ಯೆ'ಯನ್ನು ಸಾಂಪ್ರದಾಯಿಕವಾಗಿ ಆಚರಿಸಿದರೆ ನೆರೆಯ ಮಹಾರಾಷ್ಟ್ರ ಹಾಗೂ ಗಡಿ ಭಾಗಗಳಲ್ಲಿ ಗಟಾರಿ ಅಮಾವಾಸ್ಯೆ ಎಂದು ವಿಶಿಷ್ಟವಾಗಿ ಸಂಭ್ರಮಿಸಲಾಗುತ್ತದೆ. ಈ ವರ್ಷದ ಭೀಮನ ಅಮಾವಾಸ್ಯೆ ದಿನಾಂಕ 12 - ಆಗಸ್ಟ್-2026 ಬುಧವಾರ ಬಂದಿದೆ. ದಿನಾಂಕ 13 - ಆಗಸ್ಟ್-2026 ಗುರುವಾರದಿಂದ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. #ಶ್ರಾವಣ_ಮಾಸ ಎಂಬ ಹೆಸರು ಬರಲು ಮುಖ್ಯವಾಗಿ ಖಗೋಳಶಾಸ್ತ್ರ (ನಕ್ಷತ್ರ) ಮತ್ತು ವೇದ-ಸಂಸ್ಕೃತಿಯ ಪ್ರಭಾವವಿದೆ. ಹಿಂದೂ ಪಂಚಾಂಗದ ಪ್ರಕಾರ ತಿಂಗಳಿಗೆ ಹೆಸರು ಇಡುವುದು ಆ ತಿಂಗಳ ಹುಣ್ಣಿಮೆಯ ದಿನದಂದು ಚಂದ್ರನು ಯಾವ ನಕ್ಷತ್ರದ ಬಳಿ ಇರುತ್ತಾನೋ ಆ ಆಧಾರದ ಮೇಲೆ, ಶ್ರಾವಣ ಮಾಸದ ಹುಣ್ಣಿಮೆಯಂದು ಚಂದ್ರನು 'ಶ್ರವಣ' ನಕ್ಷತ್ರದ ನಿಕಟವಾಗಿ ಇರುತ್ತಾನೆ ಹೀಗಾಗಿ ಈ ಮಾಸಕ್ಕೆ ಶ್ರಾವಣ ಎಂದು ಹೆಸರು ಬಂದಿದೆ. ಸಂಸ್ಕೃತದಲ್ಲಿ 'ಶ್ರವಣ' ಎಂದರೆ ಕೇಳುವುದು ಅಥವಾ ಆಲಿಸುವುದು ಎಂದರ್ಥ ಈ ಮಾಸದಲ್ಲಿ ವೇದಗಳು, ಪುರಾಣಗಳು, ಶಿವಕಥೆ ಹಾಗೂ ಧಾರ್ಮಿಕ ಪ್ರವಚನಗಳನ್ನು ಕಿವಿಯಾರೆ ಆಲಿಸುವುದು ಅತ್ಯಂತ ಶ್ರೇಷ್ಠ ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ಗುರುಕುಲಗಳ...