Skip to main content

Posts

Showing posts with the label There was rumours on Janardhan Pujari biography containing controversial things of S.Bangarappa.

Blog number 1356. ಆನಂದಪುರಂ ಇತಿಹಾಸ ಸಂಖ್ಯೆ - 90. ಆನಂದಪುರಂ ಪಂಚಾಯತ್ ಕಛೇರಿಯಲ್ಲಿ ಸಾಲಮೇಳ ಕಾರ್ಯಕ್ರಮ ನಡೆಸಿದ ಆಗಿನ ಕೇಂದ್ರ ಹಣಕಾಸು ಮಂತ್ರಿ ಜನಾರ್ದನ ಪೂಜಾರರು. ಜನಾರ್ದನ ಪೂಜಾರರ ಆತ್ಮಚರಿತ್ರೆ ಸಾಲ ಮೇಳದ ಸಂಗ್ರಾಮದಲ್ಲಿ ಬ೦ಗಾರಪ್ಪರ ತೇಜೋವಧೆ ಮಾಡುವ ಅಧ್ಯಾಯ ಇದೆ ಎಂಬ ಗಾಳಿಸುದ್ದಿ ಹಬ್ಬಿತ್ತು.

  ಜನಾರ್ದನ ಪೂಜಾರಿ ಅವರು ಬರೆದ ಅವರ ಆತ್ಮಚರಿತ್ರೆಯಲ್ಲಿ ಬಂಗಾರಪ್ಪರ ತೇಜೋವಧೆ ಮಾಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು.  ಬಂಗಾರಪ್ಪರ ಕುಟುಂಬದಲ್ಲಿ ಅವರ ಪುತ್ರರೋರ್ವರು ಜನಾರ್ದನ ಪೂಜಾರರ ಈ ಆತ್ಮಚರಿತ್ರೆ ಸುಡುವ ಬೆದರಿಕೆ ಪತ್ರಿಕೆಗಳಲ್ಲಿ ವರದಿ ಆಗಿತ್ತು.   ಪೂಜಾರರು ತಮ್ಮ ಆತ ಚರಿತ್ರೆಯಲ್ಲಿ ಮೂರು ಪುಟಗಳಲ್ಲಿ ಬಂಗಾರಪ್ಪರ ಬಗ್ಗೆ ಉಲ್ಲೇಖ ಮಾಡಿದ್ದಾರೆ.   ಈ ಮೂರು ಪುಟಗಳಲ್ಲಿ ಜನಾದ೯ನ ಪೂಜಾರರ ಆತ್ಮಚರಿತ್ರೆಯಲ್ಲಿ S. ಬಂಗಾರಪ್ಪರ ಬಗ್ಗೆ ಏನು ಬರೆದಿದ್ದಾರೆ ನೋಡಿ   ಜನಾದ೯ನ ಪೂಜಾರರ ಆತ್ಮಚರಿತ್ರೆಯನ್ನ ಸಂಪಾದಿಸಿದವರು ಶ್ರೀ ಲಕ್ಷ್ಮಣ ಕೊಡಸೆ ಪ್ರಜಾವಾಣಿಯ ಹಿರಿಯ ವರದಿಗಾರರು ಮತ್ತು ನಮ್ಮ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಸೆಯವರು.       ಇದರಲ್ಲಿ ನನಗೇನು ವಿವಾದ ಅನ್ನಿಸಲಿಲ್ಲ ಮತ್ತು ಜನಾದ೯ನ ಪೂಜಾರರು ಎಲ್ಲಿಯೂ ಬಂಗಾರಪ್ಪನವರನ್ನ ತೇಜೋವದೆ ಮಾಡಿಲ್ಲ.   ನಿಮ್ಮ ಅಭಿಪ್ರಾಯ?