ಭಾರತೀಯ ಆಯುವೇ೯ದ ಚಿಕಿತ್ಸಾ ಕ್ರಮದಿಂದ ವಿಶ್ವ ವಿಖ್ಯಾತರಾಗಿದ್ದ ವೈದ್ಯ ನಾರಾಯಣ ಮೂತಿ೯ ನರಸೀಪುರ ಇನ್ನಿಲ್ಲ ( 24- ಜೂನ್ -2020)
*ವೈದ್ಯ ನಾರಾಯಣ ಮೂತಿ೯ ನರಸೀಪುರ ಎನ್ನುವ ಹೆಸರು ಎಷ್ಟು ಪ್ರಸಿದ್ದಿ ಅಂದರೆ ಅದು ನಮ್ಮ ದೇಶದ ಗಡಿ ದಾಟಿ ಪಸರಿತ್ತು* ಸರಳ ಜೀವನದ, ಅಹಂಕಾರದ ಲವಲೇಶವೇ ಇಲ್ಲದ ಬಂದವರಿಗೆಲ್ಲ ತಮ್ಮ ವಂಶ ಪಾರಂಪರ್ಯವಾಗಿ ಬಂದ ನಾಟಿ ವೈದ್ಯ ಚಿಕಿತ್ಸೆ ನೀಡುತ್ತಿದ್ದ ವೈದ್ಯನಾರಾಯಣ ಮೂತಿ೯ಯವರಿಗೆ ಇತ್ತೀಚಿನ ವರ್ಷದಲ್ಲಿ ವಿಪರೀತ ಸಂಖ್ಯೆಯಲ್ಲಿ ಬರುವ ರೋಗಿಗಳಿಂದ ಅನೇಕ ಕಷ್ಟಗಳೂ ಎದುರಿಸುವಂತಾಯಿತು. *ಅವರ ಔಷದಕ್ಕೆ ಬೇಕಾಗುತ್ತಿದ್ದದ್ದು ದೊಡ್ಡ ಮರಗಳಲ್ಲ ಸಣ್ಣ ಕುರುಚಲು ಔಷದ ಅಂಶದ ಸಸ್ಯಗಳು ಮಾತ್ರ, ಅವರು ಹೇಳುತ್ತಿದ್ದಂತೆ ಇಡೀ ವಿಶ್ವದ ಜನರಿಗೂ ಕೊಟ್ಟರೂ ಖಾಲಿ ಆಗದಷ್ಟು ನಮ್ಮ ಪಶ್ಚಿಮ ಘಟ್ಟದ ಅಂಚಿನಲ್ಲಿದೆ ಎನ್ನುತ್ತಿದ್ದರು.* ಆದರೆ ಇವರಿಂದ ಅರಣ್ಯ ನಾಶ, ಪರಿಸರ ನಾಶ ಎಂದೆಲ್ಲ ಹಸಿರು ನ್ಯಾಯಾಲಯದಲ್ಲಿ ಇವರ ವಿರುದ್ದ ಹಾಕಿದ್ದ ಕೇಸ್ ನ್ಯಾಯಾದೀಶರು ಸತ್ಯಾಂಶ ಪರಾಮರಿಸಿ ವಜಾ ಮಾಡಿದ್ದರು. ಅನೇಕ ಸುಳ್ಳು ಕೇಸುಗಳು ಇವರ ಮೇಲೆ ಇವರನ್ನ ದ್ವೇಷಿಸುವವರು ದಾಖಲಿಸಿದ್ದು ಕೂಡ ಇವರನ್ನ ಅನಾವಶ್ಯಕ ತೊಂದರೆಗೆ ಕಾರಣ ಆಗಿತ್ತು. ಇವರ ಚಿಕಿತ್ಸೆಯಿಂದ ಯಾರಿಗೂ ಗುಣ ಆಗಿಲ್ಲ ಅಂತೆಲ್ಲ ಹೇಳುವವರೇ ಇದ್ದಾರೆ ಆದರೆ *ಅಲೋಪತಿಯಲ್ಲಿಯೂ ಗುಣ ಆಗದೆ ಅಂತಿಮ ಹಂತದಲ್ಲಿ ಇವರಲ್ಲಿಗೆ ಬಂದು ಗುಣ ಆದ ಸಾವಿರಾರು ದಾಖಲೆ ನಾನೇ ಸಂಗ್ರಹಿಸಿದ್ದೇನೆ.* ಇವರು ಮತ್ತು ನನ್ನ ತಂದ...