ಅಡಿಕೆ_ವಿಶ್ವ_ಆರೋಗ್ಯ_ಸಂಸ್ಥೆ
ಕ್ಯಾನ್ಸರ್_ಕಾರಕ_ಪಟ್ಟಿಗೆ_ಸೇರಿಸಿದ್ದರಿಂದ.
ವಿಶ್ವದ ಯಾವ ಯಾವ ದೇಶದಲ್ಲಿ #ಅಡಿಕೆ_ನಿಷೇದ ಮಾಡಲಾಗಿದೆ ಗೊತ್ತಾ...
ವಿಶ್ವದ ಹಲವು ದೇಶಗಳಲ್ಲಿ ಆರೋಗ್ಯ ಹಾಗೂ ಸುರಕ್ಷತಾ ಕಾರಣಗಳಿಗಾಗಿ ಅಡಿಕೆ ಆಮದು, ಮಾರಾಟ ಮತ್ತು ಸೇವನೆಯ ಮೇಲೆ ಕಠಿಣ ನಿಷೇಧ ಅಥವಾ ನಿರ್ಬಂಧಗಳನ್ನು ವಿಧಿಸಲಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (UAE / ದುಬೈ)
ದೇಶದಲ್ಲಿ ಅಡಿಕೆ (ಹಸಿ ಅಥವಾ ಒಣ ಅಡಿಕೆ) ಮತ್ತು ಅಡಿಕೆ ಸಂಬಂಧಿತ ಉತ್ಪನ್ನಗಳ ಆಮದು, ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ದುಬೈ ಅಥವಾ ಇತರೆ ಎಮಿರೇಟ್ಸ್‌ಗಳ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಅಡಿಕೆಯನ್ನು ಹೊಂದಿದ್ದರೆ ಅದನ್ನು ವಶಪಡಿಸಿಕೊಳ್ಳುವುದಲ್ಲದೆ ಕಠಿಣ ದಂಡ ಅಥವಾ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಆಸ್ಟ್ರೇಲಿಯಾ ಸರ್ಕಾರವು ಅಡಿಕೆಯನ್ನು ದೇಶಕ್ಕೆ ಆಮದು ಮಾಡಿಕೊಳ್ಳುವುದನ್ನು ಕಾನೂನುಬಾಹಿರ ಎಂದು ಘೋಷಿಸಿದೆ.
ಆರೋಗ್ಯ ಸಮಸ್ಯೆಗಳು ಮತ್ತು ಜೀವಸುರಕ್ಷತಾ ಕಾರಣಗಳಿಂದಾಗಿ ವ್ಯಕ್ತಿಗತವಾಗಿ ಅಥವಾ ವ್ಯಾಪಾರಕ್ಕಾಗಿ ಅಡಿಕೆಯನ್ನು ಆಸ್ಟ್ರೇಲಿಯಾ ದೇಶದೊಳಗೆ ತರುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ.
ಅಮೆರಿಕದ ಆಹಾರ ಮತ್ತು ಔಷಧಿ ನಿಯಂತ್ರಣ ಮಂಡಳಿ (US FDA) ಅಡಿಕೆ ಮತ್ತು ಅದರ ಉತ್ಪನ್ನಗಳ ಆಮದು ಮೇಲೆ ಕಠಿಣ ನಿರ್ಬಂಧಗಳನ್ನು (Import Alerts) ವಿಧಿಸಿದೆ.
ಇದನ್ನು ಅಧಿಕೃತ ಆಹಾರ ಪದಾರ್ಥವಾಗಿ ಮುಕ್ತವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ.
ಕೆನಡಾದ ಆರೋಗ್ಯ ಇಲಾಖೆ (Health Canada) ಅಡಿಕೆಯ ಸೇವನೆಯಿಂದ ಬಾಯಿಯ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಕೆ ನೀಡಿ ಇದರ ವಾಣಿಜ್ಯ ಮಾರಾಟ ಹಾಗೂ ಆಮbabದುಗಳ ಮೇಲೆ ಕಠಿಣ ತಡೆ ಹೇರಿದೆ.
ಸಿಂಗಾಪುರ್ ಸೇರಿದಂತೆ ಕೆಲವು ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಡಿಕೆ ಅಥವಾ ಪಾನ್ ಜಗಿಯುವುದು ಹಾಗೂ ಸಂಬಂಧಿತ ವಸ್ತುಗಳ ಆಮದು ಮತ್ತು ಮಾರಾಟದ ಮೇಲೆ ಕಾನೂನುಬದ್ಧ ನಿರ್ಬಂಧಗಳಿವೆ.
ಭಾರತದಲ್ಲಿ ಅಡಿಕೆ ಕೃಷಿ ಮಾಡುವುದಕ್ಕಾಗಲೀ ಅಥವಾ ಒಣ ಅಡಿಕೆ (ಸವೀ ಅಡಿಕೆ) ಮಾರಾಟಕ್ಕಾಗಲೀ ಯಾವುದೇ ರಾಷ್ಟ್ರೀಯ ನಿಷೇಧವಿಲ್ಲ.
ಆದರೆ ಆಹಾರ ಸುರಕ್ಷತಾ ಮಾನದಂಡಗಳ (FSSAI) ಅಡಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುಟ್ಕಾ ಮತ್ತು ತಂಬಾಕು ಬೆರೆಸಿದ ಪಾನ್ ಮಸಾಲಾಗಳ ಮಾರಾಟವನ್ನು ಮಾತ್ರ ನಿಷೇಧಿಸಿವೆ.
ಹಸಿ ಅಡಿಕೆ ಮತ್ತು ಒಣ ಅಡಿಕೆ ಮಾರಾಟಕ್ಕೆ ಮತ್ತು ಬಳಕೆಗೆ ಯಾವುದೆ ನಿರ್ಬಂಧವಿಲ್ಲ.
#areca #gutka #tobaco #cologian #suprimcourtofindia #campco #farmers
#suprimcourtofindia #ban
Comments
Post a Comment