ಪಟಮಕ್ಕಿ ರತ್ನಕರ್ ಸಣ್ಣ ವಯಸ್ಸಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆದು ತೀಥ೯ಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿ ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದು ಬಿಟ್ಟರೆ ಅವರೊಂದಿಗೆ ನನ್ನ ಒಡನಾಟ ಇರಲಿಲ್ಲ. ಶಿವಮೊಗ್ ಜಿಲ್ಲಾ ಪಂಚಾಯತ್ ಲ್ಲಿ ಸದಸ್ಯನಾದಾಗ ಒಮ್ಮೆ ಅಧ್ಯಕ್ಷನಾಗುವಂತ ಅವಕಾಶ ಉಂಟಾಗಿತ್ತು ಆಗ ಸಂಸದರಾದ ಮಾಜಿ ಮುಖ್ಯಮಂತ್ರಿ ಬಂಗಾರಪನವರು ನನಗೆ ಈ ಬಗ್ಗೆ ಮು೦ದುವರಿಯಲು ಹೇಳಿದ್ದರು ಆಗ ಮಾಜಿ ಶಾಸಕರಾಗಿದ್ದ ಸ್ವಾಮಿ ರಾವ್, ಕರಿಯಣ್ಣ ಮತ್ತು ಪಟ ಮಕ್ಕಿಯವರ ಒಂದು ಸಮಿತಿ ಮಾಡಿ ಬೇರೆ ಪಕ್ಷ ಮತ್ತು ನಾಯಕರ ಜೊತೆ ಮಾತುಕತೆ ಮಾಡಲು ಜವಾಬ್ದಾರಿ ನೀಡಿದ್ದರು. ಹಾಗಾಗಿ ನನಗೆ ಈ ಮೂವರು ಮಾಜಿ ಶಾಸಕರ ಒಡನಾಟ ಹೆಚ್ಚಾಗಿ ಆಯಿತು ಸುಮಾರು ಒಂದು ತಿಂಗಳು ತಿರುಗಾಟದಲ್ಲಿ ಅವರ ಅನುಭವಗಳು ನನಗೆ ತಿಳಿಯಲು ಸಾಧ್ಯವಾಯಿತು.ಮೂವರೂ ಸಜ್ಜನರು, ಮಧ್ಯಪಾನ ಮಾಡುವವರಲ್ಲ ಅದರಲ್ಲಿ ಕರಿಯಣ್ಣ ಮತ್ತು ಸ್ವಾಮಿ ರಾಯರು ಮಾಂಸಹಾರ ಪ್ರಿಯರು ಆದರೆ ಪಟಮಕ್ಕಿ ಮಾತ್ರ ಶುದ್ದ ಸಸ್ಯಹಾರಿ ಮತ್ತು ದೇವರು ಧ್ಯಾನ ಮತ್ತು ನಿರ೦ತರ ಓದು ಅವರ ಹವ್ಯಾಸವಾಗಿತ್ತು. ಕೆಲವು ಹಿತ ಶತೃಗಳು, ಪಟ್ಟ ಬದ್ರ ಹಿತಾಸಕ್ತಿಗಳು ಕೊ...