Skip to main content

Posts

Showing posts with the label Mr T.R.Krishnappa always struggle for general public problem now his new agitation against Mask wearing

ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪರ ಮಾಸ್ಕ್ ವಿರೋದ ಚಳವಳಿ

#ರಿಪ್ಪನಪೇಟೆ_ಟಿ_ಆರ್_ಕೃಷ್ಣಪ್ಪರ_ಮಾಸ್ಕ್_ವಿರೋದಿ_ಹೋರಾಟ_ಬಂದನ   ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ವಾಸಿ ಟಿ.ಆರ್.ಕೃಷ್ಣಪ್ಪ ಜನಪರ ಹೋರಾಟಗಾರರು ಯಾವುದೇ ಪಕ್ಷ ಅಥವ ನಾಯಕರ ನಿಯಂತ್ರಣದಲ್ಲಿ ಇರದ ಏಕಾಂಗಿ ಹೋರಾಟ ಇವರದ್ದು.  ಸುಮಾರು ಹತ್ತಿರ ಹತ್ತಿರ 65 ವರ್ಷದ ವೃದ್ದಾಪ್ಯದ ಹೊಸ್ತಿಲಲ್ಲಿದ್ದರೂ ಇವರ ಉತ್ಸಾಹ ಮತ್ತು ಪಿಟ್ ನೆಸ್ 20 ರಿಂದ 30 ವರ್ಷದ ಯುವಕರೂ ನಾಚುವಂತಹದ್ದು ಇವರ ಪೆವರಿಟ್ ವಾಹನ ಸ್ಯೆಕಲ್, ಇವರ ಖಾಯಂ ಡ್ರೆಸ್ ಬಾಬಾ ಅಮ್ಟೆಯವರಂತೆ ಕಾಕಿ ಚೆಡ್ಡಿ ಮತ್ತು ಅರ್ದ ತೋಳಿನ ಅಂಗಿ.   ಜನ ಸಾಮಾನ್ಯರ, ಅತ್ಯಂತ ಬಡವರಲ್ಲಿ ಇವರ ಬಗ್ಗೆ ತುಂಬಾ ದೊಡ್ಡ ಅಭಿಮಾನ ಇದೆ, ಅವರ ಕೆಲಸ ಮಾಡಿಸಿ ಕೊಡದೆ ವಿರಮಿಸಿದ ಕೃಷ್ಣಣ್ಣ ಅಂತ ತುಂಬು ಬಾಯಿಯಿಂದ ಹರಿಸುತ್ತಾರೆ ಇದು ಸತ್ಯ ಕೂಡ.    ಇವರ ಪ್ರತಿಭಟನೆ ಚಳವಳಿ ಮಾರ್ಗ ಕೂಡ ವಿಶಿಷ್ಟ.   ಕಳೆದ ವಷ೯ ಕೊರಾನಾ ಮೊದಲ ಅಲೆಯ ಲಾಕ್ ಡೌನ್ ನಲ್ಲಿ ಇವರು ಸಾಗರದಿಂದ ಬರುವಾಗ ಆನಂದಪುರಂ ನಲ್ಲಿ ಇವರನ್ನು ಪೋಲಿಸರು ತಡೆದು ಮಾಸ್ಕ್ ಹಾಕದ ಬಗ್ಗೆ ತಕರಾರು ಮಾಡಿದಾಗ ಇವರು ಸದಾ ಜೇಬಲ್ಲಿ ಇಟ್ಟುಕೊಂಡಿರುವ ಪತ್ರಿಕಾ ತುಣುಕು ತೆಗೆದು ತೋರಿಸಿ ಮಾಸ್ಕ ಕಡ್ಡಾಯ ಅಲ್ಲ ಅಂತ ವಾದಿಸಲು ಶುರು ಮಾಡಿದಾಗ ಪೋಲಿಸರು ತಮ್ಮ ಕೆಲಸಕ್ಕೆ ವಿನಾಃ ಕಾರಣ ತೊಂದರೆ ಅಂತ ಇವರನ್ನು ಬಿಟ್ಟು ಕಳಿಸಿದ್ದರು.   ಇವತ್ತು ರಿಪ್ಪನ...