4708. ಸತ್ಯವತಿ (ಮತ್ಸ್ಯಗಂಧಿ) ಭಾರತೀಯ ಮಹಾಕಾವ್ಯ ಮಹಾಭಾರತದ ಕಥೆಗೆ ಬಹುದೊಡ್ಡ ತಿರುವು ನೀಡಿದ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ಪಾತ್ರಗಳಲ್ಲಿ ಒಬ್ಬರು.
ಸತ್ಯವತಿ_ಮತ್ಯಗಂಧಿ ..
ಸತ್ಯವತಿ (ಮತ್ಸ್ಯಗಂಧಿ) ಭಾರತೀಯ ಮಹಾಕಾವ್ಯ ಮಹಾಭಾರತದ ಕಥೆಗೆ ಬಹುದೊಡ್ಡ ತಿರುವು ನೀಡಿದ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ಪಾತ್ರಗಳಲ್ಲಿ ಒಬ್ಬರು.
ಮಹಾಭಾರತದ ಕಥೆಯಲ್ಲಿ ಸತ್ಯವತಿಯ ಪಾತ್ರ ಅತ್ಯಂತ ನಿರ್ಣಾಯಕವಾದದ್ದು.
ಒಂದು ವೇಳೆ ಮಹಾಭಾರತದಲ್ಲಿ ಸತ್ಯವತಿಯೇ ಇಲ್ಲದಿದ್ದರೆ ಅಥವಾ ಆಕೆಯ ಪ್ರವೇಶವಾಗದಿದ್ದರೆ ಕಥೆಯ ತಿರುವು ಸಂಪೂರ್ಣವಾಗಿ ಬದಲಾಗುತ್ತಿತ್ತು.
ಸತ್ಯವತಿ ಇಲ್ಲದಿದ್ದರೆ ಏನೇನು ಆಗುತ್ತಿತ್ತೆಂದರೆ....
ಭೀಷ್ಮನ ಪ್ರತಿಜ್ಞೆ ನಡೆಯುತ್ತಿರಲಿಲ್ಲ,ಶಂತನು ಮಹಾರಾಜನು ಸತ್ಯವತಿಯನ್ನು ಮದುವೆಯಾಗಲು ಬಯಸಿದ್ದರಿಂದಲೇ ದೇವವ್ರತನು (ಭೀಷ್ಮ) ತಂದೆಯ ಸಂತೋಷಕ್ಕಾಗಿ ರಾಜ್ಯತ್ಯಾಗ ಮಾಡಿ, ಆಜೀವನ ಬ್ರಹ್ಮಚಾರಿಯಾಗಿ ಉಳಿಯುವ ಭೀಕರ ಪ್ರತಿಜ್ಞೆ ಮಾಡಿದನು.
ಸತ್ಯವತಿ ಇಲ್ಲದಿದ್ದರೆ, ದೇವವ್ರತನೇ ಹಸ್ತಿನಾಪುರದ ಅರಸನಾಗಿ ಸಿಂಹಾಸನ ಏರುತ್ತಿದ್ದ, ಭೀಷ್ಮ' ಎಂಬ ಹೆಸರು ಮತ್ತು ಆತನ ಕಠಿಣ ಪ್ರತಿಜ್ಞೆಯೇ ಇರುತ್ತಿರಲಿಲ್ಲ.
ಮಹರ್ಷಿ ವೇದವ್ಯಾಸರ ಜನನವಾಗುತ್ತಿರಲಿಲ್ಲ ...ಸತ್ಯವತಿಗೆ ಪರಾಶರ ಮುನಿಯಿಂದ ವೇದವ್ಯಾಸರು (ಕೃಷ್ಣದ್ವೈಪಾಯನ) ಜನಿಸಿದರು,ವೇದವ್ಯಾಸರಿಲ್ಲದಿದ್ದರೆ ನಾಲ್ಕು ವೇದಗಳ ವಿಂಗಡಣೆ, ಮಹಾಭಾರತ ಗ್ರಂಥದ ರಚನೆ ಮತ್ತು ಶ್ರೀಮದ್ಭಾಗವತದಂತಹ ಮಹಾನ್ ಗ್ರಂಥಗಳು ನಮಗೆ ಸಿಗುತ್ತಿರಲಿಲ್ಲ.
ಕೌರವರು ಮತ್ತು ಪಾಂಡವರ ಉಗಮವೇ ಆಗುತ್ತಿರಲಿಲ್ಲ...ಈಕೆಯು ಕೌರವರು ಮತ್ತು ಪಾಂಡವರ ವಂಶವೃಕ್ಷದ ಪ್ರಮುಖ ಕೊಂಡಿಯಾಗಿದ್ದಾರೆ.
ಈಕೆಯ ಹುಟ್ಟಿನ ಹೆಸರು 'ಮತ್ಸ್ಯಗಂಧಿ' (ದೇಹದಿಂದ ಮೀನಿನ ವಾಸನೆ ಬರುತ್ತಿದ್ದ ಕಾರಣಕ್ಕಾಗಿ ಬಂದ ಹೆಸರು).
ಈಕೆ ಚೇದಿ ರಾಜ ಉಪರಿಚರ ವಸು ಮತ್ತು ಅದ್ರಿಕೆ ಎಂಬ ಅಪ್ಸರೆಯ ಮಗಳು ಆದರೆ ಈಕೆಯನ್ನು ನದಿ ದಂಡೆಯಲ್ಲಿ ಕಂಡುಕೊಂಡ ದಾಸರಾಜ (ಬೆಸ್ತ ನಾಯಕ) ಎಂಬ ಮೀನುಗಾರರ ನಾಯಕ ಪ್ರೀತಿಯಿಂದ ಸಾಕಿ ಬೆಳೆಸಿದನು.
ಒಮ್ಮೆ ಮಹರ್ಷಿ ಪರಾಶರರು ಯಮುನಾ ನದಿಯನ್ನು ದಾಟಲು ಸತ್ಯವತಿಯ ದೋಣಿಯನ್ನು ಏರುತ್ತಾರೆ,ಪರಾಶರರು ತಮ್ಮ ದಿವ್ಯಜ್ಞಾನದಿಂದ ಈಕೆಯ ಗರ್ಭದಲ್ಲಿ ಜಗತ್ತಿಗೆ ಬೆಳಕು ನೀಡುವ ಜ್ಞಾನಿ ಹುಟ್ಟಲಿದ್ದಾನೆ ಎಂದು ತಿಳಿದುಈಕೆಗೆ ಅನುಗ್ರಹ ನೀಡುತ್ತಾರೆ.
ಈ ಅನುಗ್ರಹದಿಂದ ಸತ್ಯವತಿಯ ಮೈಯಿಂದ ಮೀನಿನ ದುರ್ಗಂಧ ಹೋಗಿ ಅತ್ಯಂತ ಸುಗಂಧ (ಯೋಜನಗಂಧಿ) ಬರತೊಡಗುತ್ತದೆ.
ತಾಯಂದಿರ ಮದುವೆಯ ಮುಂಚೆಯೇ ಪರಾಶರರ ಅನುಗ್ರಹದಿಂದ ಸತ್ಯವತಿಯ ಗರ್ಭದಲ್ಲಿ ವೇದವ್ಯಾಸರು (ಕೃಷ್ಣ ದ್ವೈಪಾಯನ) ಜನ್ಮತಾಳುತ್ತಾರೆ.
ಶಂತನು ಮಹಾರಾಜನೊಡನೆ ವಿವಾಹ ಮತ್ತು ಭೀಷ್ಮನ ಪ್ರತಿಜ್ಞೆ
ಹಸ್ತಿನಾಪುರದ ರಾಜ ಶಂತನು ಸತ್ಯವತಿಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಮದುವೆಯಾಗಲು ಬಯಸುತ್ತಾನೆ.
ಆದರೆ ಸತ್ಯವತಿಯ ತಂದೆ ದಾಸರಾಜನು "ನನ್ನ ಮಗಳಿಗೆ ಹುಟ್ಟುವ ಗಂಡುಮಗನೇ ಮುಂದೆ ಹಸ್ತಿನಾಪುರದ ಸಿಂಹಾಸನವನ್ನು ಏರಬೇಕು" ಎಂಬ ಕಠಿಣ ಷರತ್ತನ್ನು ವಿಧಿಸುತ್ತಾನೆ.
ಶಂತನು ಅದಕ್ಕೆ ಒಪ್ಪದಿದ್ದಾಗ ತಂದೆಯ ದುಃಖವನ್ನು ಕಂಡ ರಾಜಕುಮಾರ ದೇವವ್ರತನು (ಶಂತನು ಮತ್ತು ಗಂಗಾದೇವಿಯ ಮಗ) ಆಜೀವ ಪರ್ಯಂತ ಬ್ರಹ್ಮಚಾರಿಯಾಗಿ ಉಳಿಯುವ ಮತ್ತು ಸಿಂಹಾಸನ ತ್ಯಜಿಸುವ 'ಭೀಷ್ಮ ಪ್ರತಿಜ್ಞೆ' ಮಾಡುತ್ತಾನೆ.
ಶಂತನು ಮತ್ತು ಸತ್ಯವತಿಗೆ ಇಬ್ಬರು ಗಂಡು ಮಕ್ಕಳಾದರು.
ಚಿತ್ರಾಂಗದ ಚಿಕ್ಕ ವಯಸ್ಸಿನಲ್ಲೇ ಯುದ್ಧದಲ್ಲಿ ಮರಣ ಹೊಂದಿದನು.
ವಿಚಿತ್ರವೀರ್ಯ ಈತನಿಗೆ ಅಂಬಿಕಾ ಮತ್ತು ಅಂಬಾಲಿಕಾ ಎಂಬ ಇಬ್ಬರು ಹೆಂಡತಿಯರಿದ್ದರು ಆದರೆ ಈತನೂ ಸಹ ಮಕ್ಕಳಿಲ್ಲದೆ ಅಕಾಲಿಕ ಮರಣ ಹೊಂದಿದನು.
ಹಸ್ತಿನಾಪುರದ ವಂಶ ಬೆಳೆಯಲು ಉತ್ತರಾಧಿಕಾರಿಗಳೇ ಇಲ್ಲದಾಗ, ಸತ್ಯವತಿಯು ತನ್ನ ಹಿರಿಯ ಮಗನಾದ ವೇದವ್ಯಾಸರ ಸಹಾಯ ಪಡೆಯುತ್ತಾಳೆ.
ವ್ಯಾಸರ ದಿವ್ಯ ಶಕ್ತಿಯಿಂದ (ನಿಯೋಗ ಪದ್ಧತಿಯ ಮೂಲಕ)
ಅಂಬಿಕೆಗೆ — ಧೃತರಾಷ್ಟ್ರ (ಕೌರವರ ತಂದೆ)
ಅಂಬಾಲಿಕೆಗೆ — ಪಾಂಡು (ಪಾಂಡವರ ತಂದೆ)
ದಾಸಿಗೆ — ವಿದುರ ಜನ್ಮತಾಳುತ್ತಾರೆ.
ಸತ್ಯವತಿಯು ಕೇವಲ ಒಬ್ಬ ರಾಣಿಯಾಗಷ್ಟೇ ಅಲ್ಲದೆ ವೇದವ್ಯಾಸರ ತಾಯಿ, ಭೀಷ್ಮರ ಮಲತಾಯಿ, ಹಾಗೂ ಧೃತರಾಷ್ಟ್ರ, ಪಾಂಡು ಮತ್ತು ವಿದುರರ ಅಜ್ಜಿಯಾಗಿದ್ದು ಮಹಾಭಾರತದ ವಂಶವೃಕ್ಷವನ್ನೇ ರೂಪಿಸಿದ ಪ್ರಮುಖ ಶಕ್ತಿಯಾಗಿದ್ದಾರೆ.
#satyavathi #mahabarat
#vedavyasa #parashara #bhishma #pandava #kourava
Comments
Post a Comment