Skip to main content

Posts

Showing posts with the label Khashim belong to Barood family of ANANDAPURAM

Blog number 1860.ಆನಂದಪುರಂನ ಮೂಲ ನಿವಾಸಿಗಳಾದ ಬಾರೂದ್ (ಸಿಡಿಮದ್ದು ತಯಾರಿಸುವ) ಮನೆತನದ ಖಾಸೀಮಣ್ಣರ ಮುವ್ವತ್ತು ವರ್ಷದ ನಂತರದ ನಿನ್ನೆಯ ಬೇಟಿ

#ಮುವ್ವತ್ತು_ವರ್ಷದ_ನಂತರದ_ಮುಖಃತಃ_ಬೇಟಿ #ಆನಂದಪುರಂನ_ಬಾರೂದ್_ಮನೆತನದ_ಖಾಸಿಮಣ್ಣ #ಮಗನ_ಮದುವೆಗೆ_ಆಹ್ವಾನಿಸಲು_ಬಂದಿದ್ದರು. #ಮೋಣು_ಸಾಹೇಬರ_ದ್ವಿತಿಯ_ಪುತ್ರ #ಆನಂದಪುರಂನ_ಕನ್ನಡ_ಸಂಘದ_ಹಾಮೋ_ಭಾಷಾರ_ಅಣ್ಣ.    ಆನಂದಪುರಂನ ಗರ್ನಾಲ್ ಮೋಣು ಸಾಹೇಬರು ಆ ಕಾಲದ ಸಿಡಿಮದ್ದು - ಕೋವಿ ಮಸಿ ತಯಾರಿಸಿ ಮಾರಾಟ ಮಾಡುವ ಬಾರೂದ್ ಮನೆತನದವರು ಇವರು ನಮ್ಮ ಊರಿನ ಮೂಲ ನಿವಾಸಿಗಳು ಇವರ ಪುತ್ರ ಹಾ.ಮೊ. ಭಾಷಾ ಕನ್ನಡದ ಕಟ್ಟಾಳು ಅವರು ನಡೆಸಿದ ಸಾಂಸ್ಕೃೃತಿಕ ಚಟುವಟಿಕೆಗಳು ಆನಂದಪುರ೦ಗೆ ಹೆಚ್ಚಿನ ಪ್ರಾಮುಖ್ಯತೆ ತಂದು ಕೊಟ್ಟಿತ್ತು.   ಇಂತಹ ಕಲಾವಿದ ಸಂಘಟಕ ಹಾ.ಮೊ. ಭಾಷಾ ನಾಗರ ಹಾವು ಹಿಡಿಯಲು ಹೋಗಿ ಮೃತರಾದರು, ಇವರ ತಮ್ಮ ಶಂಷು KMF ಹಾಲಿನ ಸಾಗಾಣಿಕೆ ವಾಹನದ ಉದ್ಯೋಗದಲ್ಲಿ ಅಪಘಾತದಲ್ಲಿ ಮೃತಪಟ್ಟರು, ಕೆಲವು ವರ್ಷದ ಹಿಂದೆ ಇವರ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ಮದ್ಯಾಹ್ನ ಆನಂದಪುರಂ ಬಿಟ್ಟು ರಾತ್ರಿ ಗೋವಾದಲ್ಲಿ ವಿವಾಹ ಮುಗಿಸಿ ಅವತ್ತೇ ವಾಪಾಸು ಬರುವಾಗ ಮಧ್ಯರಾತ್ರಿ ಹೊನ್ನಾವರದಿಂದ ಗೇರುಸೊಪ್ಪೆ ಮಾರ್ಗಕ್ಕೆ ತಿರುಗಿ ಮುಂದಿನ  ತಿರುವಿನಲ್ಲಿ ಇವರ ಸ್ಕಾರ್ಪಿಯೋ ವಾಹನ ಅಪಘಾತಕ್ಕೆ ಈಡಾಗಿ ಹಾ.ಮೊ. ಭಾಷಾರ ಮಡದಿ, ಹಾ.ಮೋ. ಭಾಷಾರ ಸಹೋದರಿ, ಇವರ ಬಾವಾ ಟೈಲರ್ ಚಾಬು ಸಾಹೇಬರು ಸ್ಥಳದಲ್ಲೇ ಸಾವನ್ನಪ್ಪಿದರು ಉಳಿದವರು ವರ್ಷಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿ ಬಂದವರಲ್ಲಿ ಖಾಸಿಮಣ್ಣರೂ...