Skip to main content

Posts

Showing posts with the label Yesterday Mr Sunder Famous writer and columist 14 th President of Prestigious Shimoga Karnataka sanga visited My office

Blog number 886.ನಿನ್ನೆಯ ನನ್ನ ಅತಿಥಿಗಳು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಹದಿನಾಲ್ಕನೆ ಅಧ್ಯಕ್ಷರಾದ ಖ್ಯಾತ ಸಾಹಿತಿ, ಅಂಕಣಕಾರ ಸುಂದರ್ ನಮ್ಮ ಊರಿನಲ್ಲಿರುವ ಕೆಳದಿ ಅರಸ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಚಂಪಕ ಸರಸ್ಸು ನೋಡಲು ಬಂದಿದ್ದರು.

ನಿನ್ನೆ_ನನ್ನ_ಅತಿಥಿಗಳು_ಶಿವಮೊಗ್ಗದ_ಪ್ರತಿಷ್ಟಿತ_ಕನಾ೯ಟಕ_ಸಂಘದ_ಅಧ್ಯಕ್ಷರಾದ_ಸುಂದರ್. #ಕುವೆಂಪುರವರು_1930ರಲ್ಲಿ_ಉದ್ಘಾಟಿಸಿದ_ಕರ್ನಾಟಕ_ಸಂಘಕ್ಕೆ_ದಾರಾ_ಬೇಂದ್ರೆ_ಮಾಸ್ತಿವೆಂಕಟೇಶ್ಅಯ್ಯಂಗಾರರ_ಪ್ರೇರಣೆ #ಹಸೋಡಿವೆ0ಕಟಶಾಸ್ತ್ರಿಗಳು_ಆಗ_ನೀಡಿದ_ದೇಣಿಗೆ_30_ಸಾವಿರ_ಈಗಿನ_ಲೆಖ್ಖದಲ್ಲಿ_30_ಕೋಟಿಗೂ_ಮಿಕ್ಕಿದ_ಮೌಲ್ಯ. #ಸುಂದರ್_ಅವರ_ಸಂದರ್ಶನದಲ್ಲಿ_ಕರ್ನಾಟಕಸಂಘದ_ಹೆಚ್ಚಿನ_ಮಾಹಿತಿ_ಇದೆ.   ಸುಂದರ್ ಅವರು ಪ್ರತಿಷ್ಠಿತ ಶಿವಮೊಗ್ಗ ಕನ್ನಡ ಸಂಘದ 14ನೇ ಅದ್ಯಕ್ಷರಾಗಿ ಚುನಾವಣೆ ಮೂಲಕ ಆಯ್ಕೆ ಆದವರು, ಶಿವಮೊಗ್ಗ ಜಿಲ್ಲೆಯ ಖ್ಯಾತ ಸಾಹಿತಿ ಮತ್ತು ಅಂಕಣಗಾರರಾದ ಸುಂದರ್ ವೃತ್ತಿಯಲ್ಲಿ ಕಾಲೇಜ್ ಪ್ರಿನ್ಸಿಪಾಲರಾಗಿ ನಿವೃತ್ತರಾದವರು.   ನಿನ್ನೆ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯ ಮತ್ತು ಇನ್ನೊಬ್ಬ ಖ್ಯಾತ ಸಾಹಿತಿ, ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಜಿಲ್ಲೆಗೆ ಕುವೆಂಪು ವಿಶ್ವವಿದ್ಯಾಲಯ ತರಲು ಕಾರಣರಾಗಿದ್ದ ಶ್ರೀಕಂಠ ಕೂಡಿಗೆ ಒಟ್ಟಾಗಿ ಬಂದಿದ್ದರು.   ಅವರು ಬಂದ ಉದ್ದೇಶ ನಾನು ಕಳೆದ ವರ್ಷ ಬರೆದು ಪ್ರಕಟಿಸಿದ್ದ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕಾ ಇವರೆಲ್ಲರೂ ಓದಿದ್ದರಿಂದ ಆನಂದಪುರಂನಲ್ಲಿರುವ ಸುಮಾರು ನಾಲ್ಕುನೂರು ವರ್ಷದ ಸ್ಮಾರಕ #ಚಂಪಕ_ಸರಸ್ಸು ನೋಡುವುದು, ಹಾಗೆಯ ನಮ್ಮ ಊರಿನಲ್ಲಿ ಪ್ರಾರಂಭ ಆಗಿರುವ #ಶಿವಪ್ಪ...