Blog number 1287.ನರ್ಸಿಂಗ್ ಹೊಂಗಳಲ್ಲಿ ಸಿಜೇರಿಯನ್ ಹೆರಿಗೆಗೆ ಪುರೋಹಿತರ ಮುಹೂರ್ತ!! ಶಾಸ್ತ್ರ ಸಮ್ಮತವಾ?... ಗೊತ್ತಿಲ್ಲ
# ಹೆರಿಗೆ ಮಾಡಿಸಲು ಮಹೂತ೯ ಇಡಿಸುವ ಕೆಟ್ಟ ಪದ್ದತಿ # ಶಿವಮೊಗ್ಗ ಮಹಿಳಾ ಸಮಾವೇಶ 2008ರಲ್ಲಿ ಈ ವಿಷಯ ಚಚೆ೯ ಆಗಲಿ "ಜಾಗತಿಕ ತಾಯ್ತನದತ್ತ ನಮ್ಮೆಲ್ಲರ ಪಯಣ"ಎ0ಬ ನುಡಿ ಸೂಕ್ತಿಯೋoದಿಗೆ ದಿನಾ0ಕ 8 ಮಾಚ್೯ರಂದು ಶಿವಮೊಗ್ಗದಲ್ಲಿ ಮಹಿಳಾ ದಿನಾಚಾರಣೆಯನ್ನ ವಿಶಿಷ್ಟವಾಗಿ ಮಹಿಳಾ ಸಮಾವೇಶವಾಗಿ ಆಚರಿಸಲಾಗುತ್ತಿದ್ದು ಇದಕ್ಕೆ ಅನೇಕ ಜಾಗೃತ ಮಹಿಳೆಯರು ಮುಂದಾಗಿದ್ದಾರೆ. ಅಲ್ಲಿ ಅನೇಕ ಮಹಿಳಾ ಸಮಸ್ಯೆಗಳು, ನಂಬಿಕೆ ಮತ್ತು ಮೂಡನಂಬಿಕೆಯ ಚೌಕಟ್ಟಿನಲ್ಲಿ ಆಚರಣೆಯ ಅನಾಗರೀಕ ಪದ್ದತಿ, ಸರಳ ವಿವಾಹ, ವರದಕ್ಷಿಣೆ, ಮಹಿಳಾ ಮೀಸಲಾತಿ ಬಗ್ಗೆ ಚಚೆ೯ ತೀಮಾ೯ನ ನಡೆಯಲಿದೆ ಎಂದು ಅವರ ಪ್ರಕಟನೆಯಲ್ಲಿ ಓದಿದೆ. ಇಲ್ಲಿ ನನ್ನದೊಂದು ನಿವೇದನೆ ಇದೆ ಇದು ಇತ್ತೀಚಿನ ದಿನದಲ್ಲಿ ಪ್ರಾರಂಭವಾಗಿದ್ದು ಮುಂದೆ ಇದೊಂದು ಗೀಳಾಗಿ ಸವ೯ ಸಾದಾರಣ ಎಂಬಂತೆ ಒಂದು ಪದ್ದತಿ ಆಗುವ ಸಾಧ್ಯತೆ ಇದೆ. ಇದು ಹೆರಿಗೆ ಮಾಡಿಸಲು ಮಹೂತ೯ ಇಡುವ ಕೆಟ್ಟ ಪದ್ದತಿ ಬಗ್ಗೆ. ಪುರೋಹಿತರೊಬ್ಬರು ನನ್ನ ಹತ್ತಿರ ಎನೋ ಚಚಿ೯ಸಲು ಬಂದಿದ್ದರು ಅವರಿಗೆ ನಿರಂತರವಾಗಿ ಒಂದು ಕುಟುಂಬದಿಂದ ಕಾಲ್ ಗಳು ಬರುತ್ತಿತ್ತು, ಅವರಿಬ್ಬರ ಸಂಬಾಷಣೆಯಿ೦ದ ತಿಳಿದಿದ್ದು ಆ ಕುಟುಂಬದ ಮಹಿಳೆ ಶಿವಮೊಗ್ಗದ ಪ್ರತಿಷ್ಟಿತ ನಸಿ೯೦ಗ್ ಹೊಂ ಒಂದರಲ್ಲಿ ಹೆರಿಗೆಗಾಗಿ ಸೇರಿಸಿದ್ದಾರೆ ಅವರ ಕುಟುoಬದವರಿಗೆ ಹುಟ್ಟುವ ಮಗು ಒಳ್ಳ...