ಅಶೋಕವರ್ದನ್_ದೇವಕಿ_ದಂಪತಿಗಳ_ಜೊತೆ
#ಎರೆಡು_ವರ್ಷದ_ನಂತರ_ಪುನಃ_ಬೇಟಿ.
ಮೊದಲ ಬೇಟಿ 2024ರ ಅಕ್ಟೋಬರ್ 8 ಕ್ಕೆ ಆಗಿತ್ತು ಅವತ್ತು ಹೆಗ್ಗೋಡಿನಲ್ಲಿ ನಿನಾಸಂ ಸಂಸ್ಥೆಯ ವಾರ್ಷಿಕ ಶಿಬಿರ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ವಾಪಾಸಾಗುವ ಬೆಳಿಗ್ಗೆ ಅಶೋಕವರ್ದನ್ ಮತ್ತು ದೇವಕಿ ದಂಪತಿ ನನ್ನ ಆಫೀಸಿಗೆ ಬಂದಿದ್ದರು.
ಈ ಬಾರಿ ದಿನಾಂಕ 6- ಅಕ್ಟೋಬರ್ - 2026 ರ ಬೆಳಿಗ್ಗೆ ಈ ವರ್ಷದ ನೀನಾಸಂ ಸಂಸ್ಥೆಯ ವಾರ್ಷಿಕ ಶಿಬಿರ ಕಾರ್ಯಕ್ರಮ ಮುಗಿಸಿ ಬೆಳಿಗ್ಗೆ ವಾಪಾಸಾಗುವಾಗ ಯಾವುದೇ ಸುಳಿವು ನೀಡದೆ ಬೇಟಿ ಆಯಿತು.
ಅದೂ ನಮ್ಮ ಮಲ್ಲಿಕಾ ವೆಜ್ ನಲ್ಲಿ ಉಪಹಾರ ಸೇವಿಸಿ ಬಿಲ್ ಪಾವತಿಸಿ ನಂತರ ಬೇಟಿ,ಕಾರಣ ಅವರ ಉಪಹಾರದ ಬಿಲ್ ನಾನು ತೆಗೆದುಕೊಳ್ಳಬಾರದಾಗಿ ನನ್ನ ಮ್ಯಾನೇಜರ್ ಗೆ ಹೇಳುತ್ತೇನೆ ಎಂದು.
ಈ ಬಾರಿ ಅವರ ಜೊತೆ ಬಂದ ಇಬ್ಬರು ಹೊಸ ಅತಿಥಿಗಳ ಪರಿಚಯ ಆಯಿತು ( ನೀನಾಸಂ ಸಂಸ್ಥೆಗೆ ಕೆ. ವಿ. ಸುಬ್ಬಣ್ಣರ ಕಾಲದಿಂದ ಹಳಬರು) ಕಾಸರಗೋಡಿನ ನಿವೃತ್ತ ಇಂಗ್ಲೀಷ್ ಪ್ರಾದ್ಯಾಪಕರಾದ #ನರೇಂದ್ರನಾಥ್ ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿ #ಸುಧಾಕರ್.
ಮುಂದೆ ಕವಲೆದುರ್ಗದ ವೀಕ್ಷಣೆ ಅವರ ಕಾರ್ಯಕ್ರಮದಲ್ಲಿ ಇದ್ದಿದ್ದರಿಂದ ಅಶೋಕ ವರ್ಧನ ದಂಪತಿಗಳ ಈ ವರ್ಷದ ಹಿಮಾಲಯದ ಪ್ರವಾಸದ ಬಗ್ಗೆ ಮಾತಾಡಲು ಸಾಧ್ಯವಾಗಲಿಲ್ಲ.
ಒಂದು ಬೇಸರ ಏನೆಂದರೆ ನಾನು ಪ್ರೀತಿಯಿಂದ ಇವರಿಗೆ ನೀಡಿದ ಕರ್ಜೂರದ ಪೊಟ್ಟಣ ಅವರು ಸ್ವೀಕರಿಸದೇ ವಾಪಾಸು ಕೊಟ್ಟಿದ್ದಾರೆ ಬೇಸರ ಅನ್ನಿಸಿತು.
ಎನ್.ಅಶೋಕ ವರ್ದನ್ ಅವರು ಮಂಗಳೂರಿನ ABC ಅಂದ್ರೆ #ಅತ್ರಿ_ಬುಕ್_ಸೆಂಟರ್ ಮಾಲಿಕರಾಗಿದ್ದವರು.
2012ರಲ್ಲಿಯೇ ತಮ್ಮ ಬುಕ್ ಸೆಂಟರ್ ನ್ನು ಕನ್ನಡ ಪುಸ್ತಕ ಓದುವ ಕೊಳ್ಳುವ ಹವ್ಯಾಸ ಜನರಲ್ಲಿ ಕಡಿಮೆ ಆದ್ದರಿಂದ ಮುಚ್ಚಿದ್ದಾರೆ.
ಇವರ ಹವ್ಯಾಸ ಪ್ರವಾಸ - ಡ್ರೈವಿಂಗ್ - ಓದು -ಪೋಟೋಗ್ರಪಿ - ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
ಜೊತೆಗೆ ಖಾಸಾಗಿ ವನ್ಯ ಸಂರಕ್ಷಣೆ ಕೂಡ, ಇದಕ್ಕಾಗಿ ಬಿಸಲೆ ಸಮೀಪ ಇವರ ಖಾಸಾಗಿ ಜಮೀನಿನ ವನ್ಯ ಸಂರಕ್ಷಣೆಗಾಗಿ ಇವರು #ಅಶೋಕವನ ಹೆಸರಿನಲ್ಲಿ ಕಾಡು ಬೆಳೆಸಿದ್ದಾರೆ.
ಇವರ ಬ್ಲಾಗ್ ಗಳು ಆಕಷ೯ಕ ಬರವಣಿಗೆ ಮತ್ತು ಚಿತ್ರಗಳಿಂದ ಎಲ್ಲರಿಗೂ ಆಕಷಿ೯ಸುತ್ತದೆ.
ಅದರಲ್ಲಿ ಇವರ ಅಶೋಕವನದಲ್ಲಿ ನಿರ್ಮಿಸಿದ #ಕಪ್ಪೆಗೂಡಿನ ಬಗ್ಗೆ ಬರೆದಿರುವ ಲೇಖನ ನನಗೆ ತುಂಬಾ ಇಷ್ಟ.
ಇವರ ಪುತ್ರ ಚಲನ ಚಿತ್ರ ನಿದೇ೯ಶಕ ವೃತ್ತಿ ಮಾಡುತ್ತಿದ್ದಾರೆ.
#abcbooks #mangalore #ashokvardan #devaki #atribooks #ninasam #heggodu #sagar
Comments
Post a Comment