4248.ಕರ್ನಾಟಕ_ಹಾಗೂ_ಭಾರತದ_ಬಹುತೇಕ_ಭಾಗಗಳಲ್ಲಿ_ಉತ್ತರ_ಗೋಳಾರ್ಧದಲ್ಲಿ#ಅತಿ_ಬೇಗ_ಸೂರ್ಯೋದಯ_ಮತ್ತು_ಅತಿ_ತಡವಾಗಿ_ಸೂರ್ಯೋದಯ_ಯಾವಾಗ?...
ಕರ್ನಾಟಕ_ಹಾಗೂ_ಭಾರತದ_ಬಹುತೇಕ_ಭಾಗಗಳಲ್ಲಿ_ಉತ್ತರ_ಗೋಳಾರ್ಧದಲ್ಲಿ
#ಅತಿ_ಬೇಗ_ಸೂರ್ಯೋದಯ_ಮತ್ತು_ಅತಿ_ತಡವಾಗಿ_ಸೂರ್ಯೋದಯ_ಯಾವಾಗ?...
ಇಂದು 11 ಅಕ್ಟೋಬರ್ ಕರ್ನಾಟಕದ ಮಲೆನಾಡು/ಶಿವಮೊಗ್ಗ-ಉತ್ತರ ಕನ್ನಡ ಭಾಗದಲ್ಲಿ ಸೂರ್ಯೋದಯದ ಸಮಯ ಬೆಳಿಗ್ಗೆ 6:18 ರಿಂದ 6:20 ರ ಸುಮಾರಿಗೆ.
ಸೂರ್ಯಾಸ್ತ ಸಂಜೆ 6:08 ರಿಂದ 6:10 ರ ಸುಮಾರಿಗೆ.
ಅತಿ ಬೇಗ ಸೂರ್ಯೋದಯ ಭಾರತದಲ್ಲಿ #ಮೇ_ಅಂತ್ಯದಿಂದ_ಜೂನ್ ಮೊದಲ ವಾರ ಸಾಮಾನ್ಯವಾಗಿ ಬೆಳಿಗ್ಗೆ 5:50 ರಿಂದ 6:00 ರ ಸುಮಾರಿಗೆ ಆಗುತ್ತದೆ.
ಅತಿ ತಡವಾಗಿ ಸೂರ್ಯೋದಯ #ಜನವರಿ_ಮೊದಲ_ವಾರದಿಂದ ಮಧ್ಯದವರೆಗೆ ಸಾಮಾನ್ಯವಾಗಿ ಬೆಳಿಗ್ಗೆ 6:45 ರಿಂದ 6:55 ರ ಸುಮಾರಿಗೆ ಆಗುತ್ತದೆ.
ಇದು ಏಕೆ ಸಂಭವಿಸುತ್ತದೆ? ...
ಸಾಮಾನ್ಯವಾಗಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21 ಬೇಸಿಗೆ ಅಯನ ಸಂಕ್ರಾಂತಿ ಮತ್ತು ಅತಿ ಚಿಕ್ಕ ದಿನವಾದ ಡಿಸೆಂಬರ್ 21/22 ಚಳಿಗಾಲದ ಅಯನ ಸಂಕ್ರಾಂತಿಯ೦ದೇ ಸೂರ್ಯೋದಯದ ಗರಿಷ್ಠ ಸಮಯವಿರಬಹುದು ಎಂದು ಭಾವಿಸಲಾಗುತ್ತದೆ ಆದರೆ ಪ್ರಾಯೋಗಿಕವಾಗಿ ಹಾಗಾಗುವುದಿಲ್ಲ.
ಇದಕ್ಕೆ ಮುಖ್ಯ ಕಾರಣ 'ಸಮಯದ ಸಮೀಕರಣ'
ಭೂಮಿಯ ಅಕ್ಷದ ಓರೆ, ಭೂಮಿಯು ತನ್ನ ಅಕ್ಷದಲ್ಲಿ 23.5 ಡಿಗ್ರಿ ಬಾಗಿದೆ.
ಭೂಮಿಯು ಸೂರ್ಯನ ಸುತ್ತ ಸಂಪೂರ್ಣ ವೃತ್ತಾಕಾರದಲ್ಲಿ ಸುತ್ತುತ್ತದೆ ಮತ್ತು ಅಂಡಾಕಾರದ ಕಕ್ಷೆಯಲ್ಲಿ ಚಲಿಸುತ್ತದೆ.
ಜನವರಿಯಲ್ಲಿ ಭೂಮಿಯು ಸೂರ್ಯನಿಗೆ ಹತ್ತಿರವಿರುವುದರಿಂದ ಅದರ ಕಕ್ಷೀಯ ವೇಗ ಹೆಚ್ಚಿರುತ್ತದೆ.
ಈ ಎರಡು ಕಾರಣಗಳಿಂದಾಗಿ ನೈಜ ಸೌರ ಸಮಯ ಮತ್ತು ಗಡಿಯಾರದ ನಿಖರ ಸಮಯದ ನಡುವೆ ವ್ಯತ್ಯಾಸ ಉಂಟಾಗುತ್ತದೆ ಆದ್ದರಿಂದ
ಅತಿ ಮುಂಚಿನ ಸೂರ್ಯೋದಯವು ಜೂನ್ 21 ಕ್ಕಿಂತ ಸುಮಾರು 2 ವಾರ ಮೊದಲೇ (ಮೇ ಅಂತ್ಯ/ಜೂನ್ ಆರಂಭ) ಆಗುತ್ತದೆ.
ಅತಿ ತಡವಾದ ಸೂರ್ಯೋದಯವು ಡಿಸೆಂಬರ್ 21 ರ ನಂತರ ಅಂದರೆ ಜನವರಿ ಮೊದಲ/ಎರಡನೇ ವಾರದಲ್ಲಿ ಸಂಭವಿಸುತ್ತದೆ.
#sunrise #sunset #yadehalli #anandapuram #shivamogga
Comments
Post a Comment