ದಸರಾ.
#ನವರಾತ್ರಿ
#ನವರಾತ್ರಿಯ_ಮೊದಲನೆಯ_ದಿನ
#ದಿನಾಂಕ_11_ಅಕ್ಟೋಬರ್_2026_ಭಾನುವಾರ
#ಶೈಲಪುತ್ರಿ
ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ‘ಶೈಲಪುತ್ರಿ’. ನಂದಿ (ವೃಷಭ) ವಾಹನಾರೂಢೆಯಾದ ಈಕೆಗೆ ಎರಡು ಕೈಗಳಿದ್ದು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲದ ಹೂವನ್ನು ಧರಿಸಿರುತ್ತಾಳೆ.
ಈಕೆ ಯೋಗದ ಮೊದಲ ಹಂತವಾದ ‘ಮೂಲಾಧಾರ ಚಕ್ರ’ದ ಅಧಿದೇವತೆ.
ಆಧ್ಯಾತ್ಮಿಕ ಸಾಧನೆಗೆ ಅಗತ್ಯವಾದ ಅಚಲವಾದ ದೃಢತೆ, ಸ್ಥಿರತೆ ಮತ್ತು ಸಂಕಲ್ಪ ಶಕ್ತಿಯನ್ನು ಈಕೆ ಕರುಣಿಸುತ್ತಾಳೆ.
#ಹಳದಿ
ಹಿಮವಂತನ ಪುತ್ರಿಯಾಗಿ ಪರ್ವತದಿಂದ ಉದಯಿಸಿದ ತಾಯಿ. ಹಳದಿ ಬಣ್ಣವು ಸೂರ್ಯನ ಪ್ರಕಾಶ, ನವ ಚೈತನ್ಯ, ಉಲ್ಲಾಸ ಮತ್ತು ಹೊಸ ಪಯಣಕ್ಕೆ ಅಗತ್ಯವಾದ ಮಂಗಳಕರ ಆರಂಭವನ್ನು ಸೂಚಿಸುತ್ತದೆ.
#dasara #navaratri #mysore #palace #yellow
#shailaputri
Comments
Post a Comment