ಸ್ಕಂದಮಾತಾ.
ಐದನೆಯ_ದಿನದ_ನವರಾತ್ರಿ.
ದಿನಾಂಕ_15_ಅಕ್ಟೋಬರ್_2026_ಗುರುವಾರ.
ಯುದ್ಧದೇವತೆ ಕಾರ್ತಿಕೇಯನ (ಸ್ಕಂದನ) ತಾಯಿಯಾದ್ದರಿಂದ ‘ಸ್ಕಂದಮಾತಾ’. ಸಿಂಹದ ಮೇಲೆ ಕುಳಿತಿರುವ ಈಕೆಗೆ ನಾಲ್ಕು ಕೈಗಳಿದ್ದು, ಮಡಿಲಿನಲ್ಲಿ ಬಾಲ ಮುರುಗನ್ (ಸ್ಕಂದ) ಕುಳಿತಿರುತ್ತಾನೆ.
ಎರಡು ಕೈಗಳಲ್ಲಿ ಕಮಲ ಹಿಡಿದಿರುತ್ತಾಳೆ.
‘ವಿಶುದ್ಧಿ ಚಕ್ರ’ವನ್ನು ಆಳುವ ತಾಯಿ.
ವಾತ್ಸಲ್ಯ, ಮಾತೃತ್ವ ಮತ್ತು ರಕ್ಷಣೆಯ ಪ್ರತೀಕ.
ಭಕ್ತರಿಗೆ ಮೋಕ್ಷ ಮತ್ತು ಇಷ್ಟಾರ್ಥಗಳನ್ನು ಸಿದ್ಧಿಸುವ ಕರುಣಾಮಯಿ.
#ಸ್ಕಂದಮಾತಾಬಿಳಿ
ಯುದ್ಧದೇವತೆ ಮುರುಗನ್ನನ್ನು (ಸ್ಕಂದ) ಮಡಿಲಲ್ಲಿ ಹೊತ್ತ ವಾತ್ಸಲ್ಯಮಯಿ ತಾಯಿ.
ಶ್ವೇತವರ್ಣವು ನಿಷ್ಕಲ್ಮಷ ಪ್ರೀತಿ, ಮಾತೃತ್ವದ ಶುದ್ಧತೆ, ಪಾವಿತ್ರ್ಯ ಮತ್ತು ಆಂತರಿಕ ಶಾಂತಿಯನ್ನು ಬಿಂಬಿಸುತ್ತದೆ.
#dassara #whitecolor #navaratri #skundadevi
Comments
Post a Comment