ಹಳ್ಳಿ_ಪೈಟ್_ಪ್ರಾರಂಭ.
ಗೆದ್ದಾಗ_ಬೀರುವ_ಮಂದಿ. #ಬಿದ್ದಾಗ_ಓಡುವ_ಜನ. ಅಧಿಕಾರದ_ನಿಜವಾದ_ಮುಖವಾಡ!.
ಪ್ರತಿ ಚುನಾವಣೆಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸುವ ತನಕ ಹೋರಾಡುವವರೇ ಬೇರೆ ಗೆದ್ದ ನಂತರ ಅಲ್ಲಿ ಮುತ್ತಿಕೊಳ್ಳುವವರೇ ಬೇರೆ.
#ಸೋಲು ಎನ್ನುವುದು ಎಷ್ಟು ಕ್ರೂರವೋ, ಯಾರು ನಮ್ಮವರು ಮತ್ತು ಯಾರು ಕೇವಲ ಅಧಿಕಾರದ ಹಸಿದ ತೋಳಗಳು ಎಂದು ಅಳೆಯುವ ಅಷ್ಟೇ ನಿಖರವಾದ ಒರೆಗಲ್ಲು.
ಇವೆಲ್ಲದರ ನಡುವೆ ಕಾಡುವ ಅತಿ ದೊಡ್ಡ ಪ್ರಶ್ನೆಯೆಂದರೆ #ಕೈಯಲ್ಲಿ_ಅಧಿಕಾರವಿದ್ದಾಗ, ತಮ್ಮ ಕಷ್ಟದ ದಿನಗಳಲ್ಲಿ ಜೊತೆ ನಿಂತವರನ್ನು, ನಂಬಿ ಬೆಂಬಲಿಸಿದ ಜನಸಾಮಾನ್ಯರನ್ನು ಮರೆತುಬಿಡುವವರ ಆ ‘ಅಧಿಕಾರ’ಕ್ಕೇನು ಬೆಲೆ?.
ಇದೆಲ್ಲ ಈಗ ನೆನಪು ಮಾಡಿಕೊಳ್ಳುವ ಕಾಲ ಬರುವುದು ಚುನಾವಣೆಗೆ ನಿಂತು ಗೆದ್ದಾಗ ಮತ್ತು ಸೋತಾಗ ಮಾತ್ರ.
ಈಗ #ಹಳ್ಳಿ_ಫೈಟ್ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಣೆ ಆಗಿದೆ.
ದೇಶದ ಲೋಕಸಭೆ ಅಥವ ವಿದಾನಸಭಾ ಚುನಾವಣೆಯಲ್ಲಿ ಆಗುವ ಖರ್ಚಿನ ಹತ್ತು ಪಟ್ಟು ಹಣ ಈ ಚುನಾವಣೆಗೆ ಅಭ್ಯರ್ಥಿಗಳೆಲ್ಲ ಸೇರಿ ಮಾಡುತ್ತಾರೆ.
ಹಳ್ಳಿಗಳ ಪ್ರತಿ ಬೂತಿನಲ್ಲಿ ಲೋಕ ಸಭೆ ಅಥವ ವಿದಾನ ಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಕನಿಷ್ಟ 1ರಿಂದ ಗರಿಷ್ಟ 5 ಲಕ್ಷ ಖರ್ಚು ಮಾಡಿದರೆ ( ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚು ಖರ್ಚು ಮಾಡಬೇಕು) ಈ ಹಳ್ಳಿ ಫೈಟ್ ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ( ಪಕ್ಷದ ಚಿನ್ಹೆ ಇರುವುದಿಲ್ಲ) ಪ್ರತಿ ಬೂತಿನಲ್ಲಿ ಕನಿಷ್ಟ 5 ರಿಂದ 10 ಲಕ್ಷ ಒಬ್ಬಬ್ಬ ಅಭ್ಯರ್ಥಿ ಖರ್ಚು ಮಾಡುತ್ತಾರೆ ಇಂತವರು ಪ್ರತಿ ಬೂತಿನಲ್ಲಿ ಹತ್ತಾರು ಜನ ಸ್ಪರ್ದೆಗಿಳಿದಿರುತ್ತಾರೆ .
ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಸ್ಪರ್ದೆ ಮಾಡುತ್ತಾರೆ ಅಲ್ಲಿಯೂ ಹಣದ ಹೊಳೆ ಹರಿಯುತ್ತದೆ, ಆರ್ಥಿಕವಾಗಿ ಇಂತಹ ಸಭಲರನ್ನೇ ಪಕ್ಷಗಳು ಕಣಕ್ಕೆ ಇಳಿಸುತ್ತದೆ.
ಈ ಸಂದರ್ಭದಲ್ಲೇ ಮತದಾರರು ಹಿಂದೆ ಅಧಿಕಾರಕ್ಕೆ ತಂದವರು ಗೆದ್ದ ನಂತರ ಈ ಮತದಾರರನ್ನೆ ಮರೆತದ್ದು ಮತ್ತು ಪುನಃ ಇವರೇ ಚುನಾವಣೆಗೆ ಪುನಃ ನಿಂತಾಗ ಮತದಾರ ಸೇಡು ತೀರಿಸಿಕೊಳ್ಳುವ ಪ್ರಸಂಗ ಬರುತ್ತದೆ.
ಚುನಾವಣೆ ಪಲಿತಾಂಶಗಳು ಸೋತವರಿಗೆ ನೀತಿ ಪಾಠ ಹೇಳಿದರೆ, ಗೆದ್ದವರಿಗೆ ಅಹಂಕಾರ ತರುತ್ತದೆ.
ಜಗತ್ತಿನ ಅತ್ಯಂತ ಹಳೆಯ ಮತ್ತು ಕಟು ಸತ್ಯವೆಂದರೆ ಇಲ್ಲಿ ಜನ ಮನುಷ್ಯನನ್ನಲ್ಲ, ಆತನ ಕೈಯಲ್ಲಿರುವ ಗೆಲುವು, ಹಣ ಮತ್ತು ಅಧಿಕಾರವನ್ನು ಮಾತ್ರ ಪ್ರೀತಿಸುತ್ತಾರೆ.
ನೀವು ಅಧಿಕಾರದಲ್ಲಿದ್ದಾಗ, ಕೈತುಂಬ ಹಣವಿದ್ದಾಗ, ವೇದಿಕೆಯ ಮೇಲೆ ವಿಜಯಮಾಲೆ ಕೊರಳಿಗೆ ಬಿದ್ದಾಗ ನಿಮ್ಮನ್ನು ಸುತ್ತುವರಿಯಲು ನೂರಾರು ಜನ ಬರುತ್ತಾರೆ.
ನಿಮ್ಮ ಮುಖದ ಸಣ್ಣ ನಗೆಗೂ ಜೈಕಾರ ಹಾಕುವವರು, ನಿಮ್ಮ ಪ್ರತಿಯೊಂದು ಸಾಧಾರಣ ಮಾತಿಗೂ ಚಪ್ಪಾಳೆ ತಟ್ಟುವವರು, "ನಾನೇ ನಿಮ್ಮ ಆಪ್ತ, ನಾನೇ ನಿಮ್ಮ ಪ್ರಾಣ" ಎಂದು ಬೆನ್ನು ತಟ್ಟುವ ಮುಖಸ್ತುತಿ ಕೋರರ ದೊಡ್ಡ ದಂಡೇ ನೆರೆದುಬಿಡುತ್ತದೆ.
. ನೊಣಗಳು ಬೆಲ್ಲದ ಸುತ್ತ ಮುಸುರುವಂತೆ, ಅಧಿಕಾರದ ಆಸೆಗೆ ಇವರೆಲ್ಲ ಮುತ್ತಿಕೊಳ್ಳುತ್ತಾರೆ.
ಆದರೆ ಅದೇ ಕಾಲದ ಚಕ್ರ ಉರುಳಿ, ಕುರ್ಚಿಯ ಅಧಿಕಾರ ಕಳಚಿ, ಸೋಲು ಅಥವಾ ಸಂಕಷ್ಟ ಎದುರಾದಾಗ?...
ನಿನ್ನೆಯವರೆಗೆ ನಿಮ್ಮ ಮುಂದೆ ಕೈಮುಗಿದು ನಿಂತಿದ್ದ ಅದೇ ಜನ ಅಡ್ಡರಸ್ತೆಯಲ್ಲಿ ನಿಮ್ಮನ್ನು ನೋಡಿದರೂ ಅಪರಿಚಿತರಂತೆ ಮುಖ ತಿರುಗಿಸಿಕೊಂಡು ಹೋಗುತ್ತಾರೆ.
ನಿಮ್ಮ ನೆರಳು ಕೂಡ ತಮ್ಮ ಮೇಲೆ ಬೀಳಬಾರದು ಎಂಬಂತೆ ದೂರ ಓಡುತ್ತಾರೆ.
ಫೋನ್ ಮಾಡಿದರೆ ರಿಂಗ್ ಆಗಿ ಕಟ್ ಆಗುತ್ತದೆ, ಸಂದೇಶ ಕಳಿಸಿದರೆ ನೀಲಿ ಗೆರೆ ಬಿದ್ದರೂ ಉತ್ತರ ಬರುವುದಿಲ್ಲ.
ಸೋತಾಗ ಒಂಟಿಯಾಗುವುದು ಕೇವಲ ವ್ಯಕ್ತಿಯಲ್ಲ, ಆತನ ಸುತ್ತಲಿನ ಸುಳ್ಳು ಜಗತ್ತು ಕೂಡ ಕಳಚಿಬೀಳುತ್ತದೆ.
ಸೋಲು ಎನ್ನುವುದು ಎಷ್ಟು ಕ್ರೂರವೋ, ಯಾರು ನಮ್ಮವರು ಮತ್ತು ಯಾರು ಕೇವಲ ಅಧಿಕಾರದ ಹಸಿದ ತೋಳಗಳು ಎಂದು ಅಳೆಯುವ ಅಷ್ಟೇ ನಿಖರವಾದ ಒರೆಗಲ್ಲು.
ಇವೆಲ್ಲದರ ನಡುವೆ ಕಾಡುವ ಅತಿ ದೊಡ್ಡ ಪ್ರಶ್ನೆಯೆಂದರೆ ಕೈಯಲ್ಲಿ ಅಧಿಕಾರವಿದ್ದಾಗ, ತಮ್ಮ ಕಷ್ಟದ ದಿನಗಳಲ್ಲಿ ಜೊತೆ ನಿಂತವರನ್ನು, ನಂಬಿ ಬೆಂಬಲಿಸಿದ ಜನಸಾಮಾನ್ಯರನ್ನು ಮರೆತುಬಿಡುವವರ ಆ ‘ಅಧಿಕಾರ’ಕ್ಕೇನು ಬೆಲೆ?.
ಅಧಿಕಾರ ಎನ್ನುವುದು ಸ್ವಂತಕ್ಕೆ ಶಾಲು ಹೊದಿಸಿಕೊಳ್ಳುವ ಅಥವಾ ಜೇಬು ತುಂಬಿಸಿಕೊಳ್ಳುವ ಸವಲತ್ತಲ್ಲ; ಅದು ಕಷ್ಟದಲ್ಲಿರುವ ಕಣ್ಣೀರು ಒರೆಸುವ, ನ್ಯಾಯ ಒದಗಿಸುವ ಜವಾಬ್ದಾರಿ.
ತಾನು ನಡೆದುಬಂದ ಹಾದಿಯನ್ನು ಮರೆತು, ತನ್ನ ಗೆಲುವಿಗಾಗಿ ಬೆವರು ಸುರಿಸಿದವರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರ ಕೇವಲ ಒಂದು ನಿರ್ಜೀವ ಕಾಗದದ ತುಂಡಷ್ಟೇ.
ಯಾರು ಅಧಿಕಾರದಲ್ಲಿದ್ದಾಗ ದುರ್ಬಲರ, ಕಷ್ಟದಲ್ಲಿದ್ದವರ ಕೈಹಿಡಿಯುವುದಿಲ್ಲವೋ, ಅವರ ಅಧಿಕಾರ ಮುಗಿದ ಮೇಲೆ ಸಮಾಜ ಅವರನ್ನು ನೆನಪಿಟ್ಟುಕೊಳ್ಳುವುದೂ ಇಲ್ಲ, ಗೌರವಿಸುವುದೂ ಇಲ್ಲ.
ಬೆಟ್ಟ ಹತ್ತಿದಾಗ ಕೈಹಿಡಿದವರನ್ನು ಬೆಟ್ಟದ ತುದಿಗೆ ತಲುಪಿದ ಮೇಲೆ ಮರೆಯಬಾರದು.
ಗೆಲುವಿನಲ್ಲಿ ಮುತ್ತಿಕೊಳ್ಳುವ ನೂರಾರು ಜನರ ನಕಲಿ ಹೊಗಳಿಕೆಗಿಂತ, ಸೋತಾಗ ಹೆಗಲ ಮೇಲೆ ಕೈಯಿಟ್ಟು "ನಾನಿದ್ದೇನೆ, ಮುನ್ನಡೆ" ಎಂದು ಧೈರ್ಯ ತುಂಬುವ ಒಬ್ಬ ವ್ಯಕ್ತಿ ಸಾಕು.
ಅಧಿಕಾರ ಇವತ್ತು ಬರುತ್ತದೆ, ನಾಳೆ ಹೋಗುತ್ತದೆ ಆದರೆ ಕಷ್ಟದಲ್ಲಿದ್ದಾಗ ಮಾಡಿದ ಉಪಕಾರ ಮತ್ತು ತೋರಿದ ಮನುಷ್ಯತ್ವ ಮಾತ್ರ ಶಾಶ್ವತವಾಗಿ ಉಳಿಯುತ್ತದೆ.
#election #zp #tp #panchayat
Comments
Post a Comment