Skip to main content

4261.ಹರಗಿ_ಊರಿನ_ಒಂದು_ಸಣ್ಣ_ನಡೆ#ರಾಜ್ಯದಾದ್ಯಂತ_ಬದಲಾವಣೆಗೆ_ಕಾರಣವಾಗುತ್ತಿದೆ..#ಪರಿವರ್ತನೆ_ಜಗದ_ನಿಯಮ.

ಹರಗಿ_ಊರಿನ_ಒಂದು_ಸಣ್ಣ_ನಡೆ
#ರಾಜ್ಯದಾದ್ಯಂತ_ಬದಲಾವಣೆಗೆ_ಕಾರಣವಾಗುತ್ತಿದೆ..
#ಪರಿವರ್ತನೆ_ಜಗದ_ನಿಯಮ. 

  ಶಿವಮೊಗ್ಗ ಜಿಲ್ಲೆಯಲ್ಲಿ ಮದುವೆಯ ನಂತರದ ದುಬಾರಿ ಬೀಗರ ಊಟವಾದ ಬಾಡೂಟ ಹಾಗೂ ಆಡಂಬರದ ಖರ್ಚುಗಳಿಗೆ ಕಡಿವಾಣ ಹಾಕಲು ಇತ್ತೀಚೆಗೆ ಒಮ್ಮತದ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹರಗಿ ಎಂಬ ಊರಿನ ಮುಖಂಡರ ಒಂದು ತೀಮಾ೯ನ ಈಗ ಅನೇಕ ಊರುಗಳಿಗೆ ಪ್ರೇರಣೆ ಆಗುತ್ತಿದೆ.

  #ಶಿವಮೊಗ್ಗ ಜಿಲ್ಲೆಯ ​ಶಿಕಾರಿಪುರ ತಾಲ್ಲೂಕಿನ ಹರಗಿ ಗ್ರಾಮದಲ್ಲಿ ಗ್ರಾಮಸ್ಥರೆಲ್ಲರೂ ಸಭೆ ಸೇರಿ ಬೀಗರ ಊಟವನ್ನು ಸಂಪೂರ್ಣವಾಗಿ ನಿಷೇಧಿಸುವ ಕ್ರಾಂತಿಕಾರಿ ನಿರ್ಧಾರ ಕೆಲ ದಿನಗಳ ಹಿಂದೆ  ಕೈಗೊಂಡಿದ್ದರು.  

 ​ಮುಖ್ಯವಾಗಿ ಕೃಷಿ ಸಂಕಷ್ಟ ಮತ್ತು ಪ್ರತಿಷ್ಠೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹತ್ತಾರು ಕುರಿಗಳನ್ನು ಕೊಯ್ದು ಬಾಡೂಟ ಹಾಕಿಸುವುದನ್ನು ತಪ್ಪಿಸಲು ಈ ನಿಯಮ ಜಾರಿಗೆ ತರಲಾಗಿದೆ.

 ​ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಬೀಗರ ಊಟ ಏರ್ಪಡಿಸಿದರೆ ₹1,00,000 ದಂಡ ಹಾಗೂ ಆ ಊಟಕ್ಕೆ ತೆರಳುವ ಗ್ರಾಮಸ್ಥರಿಗೆ ₹50,000 ದಂಡ ವಿಧಿಸುವ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಗ್ರಾಮ ಸಮಿತಿ ಪ್ರಕಟಿಸಿದೆ.

  ಇದು ರಾಜ್ಯದಾದ್ಯಂತ ವೈರಲ್ ಆಗಿತ್ತು ಇದರಿಂದ ಪ್ರೇರಣೆ ಪಡೆದು ಈ ನಿಟ್ಟಿನಲ್ಲಿ ಯೋಚನೆ ಮಾಡಲು ಅನೇಕ ಊರುಗಳಲ್ಲಿ ಜನ ಪ್ರಾರಂಭಿಸಿದ್ದಾರೆ.

​  ಇದು ಈಗ ಶಿವಮೊಗ್ಗ ಜಿಲ್ಲೆಯ #ಸೊರಬ_ತಾಲೂಕಿನ #ಚಿಕ್ಕಶಕುನ ಮತ್ತು #ಶೀಗೇಹಳ್ಳಿ ಎಂಬ ಅವಳಿ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಸಭೆ ನಡೆಸಿ, ಮದುವೆ ನಂತರ ನಡೆಯುವ ಅದ್ಧೂರಿ ಬೀಗರ ಊಟವನ್ನು ನಿಷೇಧಿಸಲು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.  

 ​ಮದುವೆ ಮುಹೂರ್ತಕ್ಕಿಂತ ಬೀಗರ ಊಟಕ್ಕೇ 4 ರಿಂದ 6 ಲಕ್ಷ ರೂಪಾಯಿ ವ್ಯಯವಾಗುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿರುವುದನ್ನು ತಡೆಯಲು ಮತ್ತು ಆ ಹಣವನ್ನು ಮಕ್ಕಳ ಭವಿಷ್ಯ ಹಾಗೂ ಕೃಷಿಗೆ ಉಳಿಸಲು ಈ ಮಾದರಿ ಹೆಜ್ಜೆ ಇಡಲಾಗಿದೆ.

  ​ಸಾಗರ ಗ್ರಾಮಾಂತರ ಮತ್ತು ಹೊಸನಗರ ಗಡಿಭಾಗದ ಕೆಲ ಹಳ್ಳಿಗಳಲ್ಲಿ ವಿಶೇಷವಾಗಿ ದೀವರ ಹಾಗೂ ಒಕ್ಕಲಿಗ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಮದುವೆ ಮಂಟಪದಲ್ಲೇ ಕಾರ್ಯಕ್ರಮ ಮುಗಿಸಬೇಕು, ಮರುದಿನ ಊರಿನಲ್ಲಿ ಪ್ರತ್ಯೇಕವಾಗಿ ದುಬಾರಿ ಬಾಡೂಟ, ಶಾಮಿಯಾನ, ಡಿಜೆ ಹಾಕಿ ಲಕ್ಷಾಂತರ ರೂಪಾಯಿ ಪೋಲು ಮಾಡಬಾರದು ಎಂಬ ಸ್ವಯಂಪ್ರೇರಿತ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ.

 ​ಗ್ರಾಮೀಣ ಭಾಗದ ಆರ್ಥಿಕ ಶಿಸ್ತು ಕಾಪಾಡಲು ಮತ್ತು ಹೆಣ್ಣು-ಗಂಡು ಎರಡೂ ಕಡೆಯ ಪೋಷಕರ ಮೇಲಿನ ಹೊರೆ ಇಳಿಸಲು ಈ ಹಳ್ಳಿಗಳು ಕೈಗೊಂಡಿರುವ ನಿರ್ಧಾರಗಳು ಸುತ್ತಮುತ್ತಲಿನ ಹಳ್ಳಿಗಳಿಗೂ ಮಾದರಿಯಾಗುತ್ತಿವೆ.

 ಮಲೆನಾಡಿನ ಹಲವು ಗ್ರಾಮೀಣ ಭಾಗಗಳಲ್ಲಿ ಮತ್ತು ವಿವಿಧ ಸಮಾಜದ ಸಂಘಟನೆಗಳಲ್ಲಿ ಮದುವೆ ಹಾಗೂ ಬೀಗರ ಊಟ / ರಿಸೆಪ್ಷನ್)ಹೆಸರಿನಲ್ಲಿ ನಡೆಯುವ ಅತಿಯಾದ ಆಡಂಬರ, ದುಂದುವೆಚ್ಚ ಮತ್ತು ಆಹಾರ ವ್ಯರ್ಥವಾಗುವುದನ್ನು ತಡೆಯಲು ಸ್ಥಳೀಯವಾಗಿ ನಿರ್ಬಂಧ ಅಥವಾ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

  ​ಇದು ಯಾವುದೇ ಸರ್ಕಾರಿ ಕಾನೂನಲ್ಲದಿದ್ದರೂ ಸ್ಥಳೀಯ ಗ್ರಾಮಸ್ಥರು, ಸಂಘಗಳು ಹಾಗೂ ಹಿರಿಯರು ಸೇರಿ ಒಮ್ಮತದಿಂದ ಕೈಗೊಂಡ ಕಟ್ಟುನಿಟ್ಟಿನ ನಿರ್ಣಯಗಳು. 

  ಇತ್ತೀಚಿನ ವರ್ಷಗಳಲ್ಲಿ ಇಂತಹ ಮಹತ್ವದ ಬದಲಾವಣೆಗೆ ಮುಂದಾಗಿರುವ ಮಲೆನಾಡಿನ ಪ್ರಮುಖ ಪ್ರದೇಶಗಳು ಮತ್ತು ಸಮಾಜಗಳಲ್ಲಿ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ಭಾಗದ ಕೆಲವು ಗ್ರಾಮೀಣ ಭಾಗಗಳಲ್ಲಿ ಮದುವೆಯ ನಂತರ ಮಾಡುವ ಭರ್ಜರಿ ಮಾಂಸಾಹಾರಿ/ಸಸ್ಯಾಹಾರಿ ಬೀಗರ ಊಟದ ಸಭಾಭವನ ಸಂಸ್ಕೃತಿಗೆ ಸ್ವಯ೦ ಮಿತಿ ಹೇರಲಾಗುತ್ತಿದೆ.

 ಊರಿನಲ್ಲೇ ಸರಳವಾಗಿ ಮದುವೆ ಮಾಡಬೇಕು, ಹೊರಗಿನಿಂದ ಬೃಹತ್ ಕ್ಯಾಟರಿಂಗ್ ತರಿಸಿ ಸಾಲದ ಸುಳಿಗೆ ಸಿಲುಕಬಾರದು ಎಂಬ ಎಚ್ಚರಿಕೆ ಮೂಡಿಸಲಾಗುತ್ತಿದೆ.

​ಹಲವು ಊರುಗಳಲ್ಲಿ ಗ್ರಾಮಸ್ಥರು ಸಭೆ ಸೇರಿ, "ಮದುವೆ ಮತ್ತು ಬೀಗರ ಊಟ ಒಂದೇ ದಿನ ಅಥವಾ ಒಂದೇ ಮಂಟಪದಲ್ಲಿ ಮುಗಿಯಬೇಕು, ಮರುದಿನ ಪ್ರತ್ಯೇಕ ಆಡಂಬರದ ಔತಣಕೂಟ ಬೇಡ" ಎಂಬ ಲಿಖಿತ ಒಪ್ಪಂದಗಳನ್ನು ಮಾಡಿಕೊಂಡ ಉದಾಹರಣೆಗಳಿವೆ.

​ #ಶಿರಸಿ, #ಸಿದ್ದಾಪುರ ಮತ್ತು #ಯಲ್ಲಾಪುರ ಇತ್ಯಾದಿ ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಮತ್ತು ಒಕ್ಕಲಿಗ/ನಾಮಧಾರಿ ಸಮುದಾಯಗಳ ಗ್ರಾಮೀಣ ಸಂಘಟನೆಗಳು ಶಿರಸಿ ಮತ್ತು ಸಿದ್ದಾಪುರ ಗ್ರಾಮಾಂತರ ಭಾಗಗಳಲ್ಲಿ ಮದುವೆಗಳಲ್ಲಿ ಹೆಚ್ಚುತ್ತಿದ್ದ ಭಕ್ಷ್ಯಗಳ ಸಂಖ್ಯೆ (ಮೆನು), ದುಬಾರಿ ಅಲಂಕಾರ ಹಾಗೂ ಪ್ರತ್ಯೇಕ ರಿಸೆಪ್ಷನ್‌ಗಳಿಗೆ ಕಡಿವಾಣ ಹಾಕಲು ನಿಯಮಾವಳಿ ರೂಪಿಸುತ್ತಿದ್ದಾರೆ.

​ ಊಟದಲ್ಲಿ ಇಂತಿಷ್ಟೇ ಪದಾರ್ಥಗಳು ಇರಬೇಕು, ಬಫೆ ಪದ್ಧತಿಗಿಂತ ಸಾಂಪ್ರದಾಯಿಕ ಪಂಕ್ತಿಯೇ ಲೇಸು ಎಂಬ ನಿಯಮವನ್ನು ಕೆಲವು ಊರುಗಳಲ್ಲಿ ಜಾರಿಗೆ ತರಲಾಗಿದೆ.

​ #ಚಿಕ್ಕಮಗಳೂರು ಜಿಲ್ಲೆಯ #ಮೂಡಿಗೆರೆ, #ಕಳಸ ಮತ್ತು #ಕೊಪ್ಪ ಭಾಗದ ಗ್ರಾಮಗಳ
​ಕೊಡವ,ಒಕ್ಕಲಿಗ ಹಾಗೂ ಇತರ ಸ್ಥಳೀಯ ಸಮಾಜಗಳ ಕೆಲವೆಡೆ ಕಾಫಿ ಬೆಳೆಗಾರರು ಮತ್ತು ಸಾಮಾನ್ಯ ರೈತ ಕುಟುಂಬಗಳು ಆಡಂಬರದ ಪೈಪೋಟಿಗೆ ಬಿದ್ದು ಸಾಲಗಾರರಾಗುವುದನ್ನು ತಪ್ಪಿಸಲು ಸಮಾಜದ ಹಿರಿಯರು ಮಧ್ಯಪ್ರವೇಶಿಸಿದ್ದಾರೆ.

 ​ಮದುವೆಯ ಮರುದಿನದ ಮಾಂಸದೂಟದ ಆಡಂಬರಕ್ಕೆ ಮಿತಿ ಹೇರಿ, ಮದ್ಯಪಾನ ಮತ್ತು ದುಬಾರಿ ಸಂಗೀತ ಸಂಜೆಗಳನ್ನು ನಿಷೇಧಿಸುವ ತೀರ್ಮಾನಗಳನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದ ಹಿರಿಯರ ಸಮಿತಿಗಳು ಕೈಗೊಂಡಿವೆ.

​ #ಕರಾವಳಿ-ಮಲೆನಾಡು ಗಡಿ ಭಾಗ #ಬೆಳ್ತಂಗಡಿ, #ಕಾರ್ಕಳ ಗ್ರಾಮಾಂತರ ​ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರೇರಿತ ಸ್ವಸಹಾಯ ಸಂಘಗಳು ಮತ್ತು ಗ್ರಾಮ ವಿಕಾಸ ಸಮಿತಿಗಳಿರುವ ಊರುಗಳಲ್ಲಿ "#ಸರಳ_ವಿವಾಹ" ಆಂದೋಲನಕ್ಕೆ ಒತ್ತು ನೀಡಲಾಗಿದ್ದು, ಬೀಗರ ಊಟಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದರ ವಿರುದ್ಧ ಸಾರ್ವಜನಿಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

​ಈ ನಿರ್ಬಂಧಗಳಲ್ಲಿ ಸಾಮಾನ್ಯವಾಗಿರುವ ಪ್ರಮುಖ ನಿಯಮಗಳು ​ಪದಾರ್ಥಗಳ ಮಿತಿ, ಊಟದ ಮೆನುವಿನಲ್ಲಿ ಕೇವಲ ನಿಗದಿತ ಸಿಹಿ ಮತ್ತು ಸೀಮಿತ ಭಕ್ಷ್ಯಗಳಿಗೆ ಮಾತ್ರ ಅವಕಾಶ.

#ಮದ್ಯಪಾನ_ನಿಷೇಧ.
ಬೀಗರ ಊಟದ ನೆಪದಲ್ಲಿ ನಡೆಯುವ ಮದ್ಯದ ಪಾರ್ಟಿಗಳನ್ನು ಕಡ್ಡಾಯವಾಗಿ ಊರಿನಿಂದ ಹೊರಗಿಡುವುದು.

#ಸಮಯ_ಮತ್ತು_ಸ್ಥಳ.
 ದುಬಾರಿ ಕಲ್ಯಾಣ ಮಂಟಪಗಳ ಬದಲಾಗಿ ಊರಿನ ದೇವಸ್ಥಾನ, ಛತ್ರ ಅಥವಾ ಮನೆಯಂಗಳದಲ್ಲೇ ಸೀಮಿತ ಜನರಿಗೆ ಔತಣ ನಡೆಸುವುದು.

​ ಈ ನಿಯಮ ಮೀರಿ ದುಂದುವೆಚ್ಚ ಮಾಡಿದ ಕುಟುಂಬಗಳಿಗೆ ಸಾಮಾಜಿಕ ಕಾರ್ಯಗಳಲ್ಲಿ ಗ್ರಾಮಸ್ಥರ ಅಸಹಕಾರ ಅಥವಾ ಸಾಂಕೇತಿಕ ದಂಡ ವಿಧಿಸುವ ಕ್ರಮಗಳೂ ಕೆಲವು ಹಳ್ಳಿಗಳಲ್ಲಿ ಪ್ರಾರಂಬಿಸುತ್ತಿದ್ದಾರೆ.

    ಸಣ್ಣದಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹರಗಿ ಗ್ರಾಮದ ಒಂದು ತೀರ್ಮಾನಕ್ಕೆ ಈ ರೀತಿ ರಾಜ್ಯದಾದ್ಯಂತ ಪ್ರೇರಣೆ ಆಗಿರುವುದು ಸಮಾಜ ಸುದಾರಣೆಗೆ ಒಂದು ಹೊಸ ಆಯಾಮ ನೀಡಿದೆ.

   ಇದನ್ನು ಜಾತಿ ಸಂಘಟನೆಗಳು, ಜನಪರ ಹೋರಾಟದ ವೇದಿಕೆಗಳು ಹೆಚ್ಚು ಪ್ರಚಾರ ನೀಡಿ ಪ್ರೋತ್ಸಾಹ ನೀಡಬೇಕು.ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಇತ್ಯಾದಿ ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಮತ್ತು ಒಕ್ಕಲಿಗ/ನಾಮಧಾರಿ ಸಮುದಾಯಗಳ ಗ್ರಾಮೀಣ ಸಂಘಟನೆಗಳು ಶಿರಸಿ ಮತ್ತು ಸಿದ್ದಾಪುರ ಗ್ರಾಮಾಂತರ ಭಾಗಗಳಲ್ಲಿ ಮದುವೆಗಳಲ್ಲಿ ಹೆಚ್ಚುತ್ತಿದ್ದ ಭಕ್ಷ್ಯಗಳ ಸಂಖ್ಯೆ (ಮೆನು), ದುಬಾರಿ ಅಲಂಕಾರ ಹಾಗೂ ಪ್ರತ್ಯೇಕ ರಿಸೆಪ್ಷನ್‌ಗಳಿಗೆ ಕಡಿವಾಣ ಹಾಕಲು ನಿಯಮಾವಳಿ ರೂಪಿಸುತ್ತಿದ್ದಾರೆ.

​ ಊಟದಲ್ಲಿ ಇಂತಿಷ್ಟೇ ಪದಾರ್ಥಗಳು ಇರಬೇಕು, ಬಫೆ ಪದ್ಧತಿಗಿಂತ ಸಾಂಪ್ರದಾಯಿಕ ಪಂಕ್ತಿಯೇ ಲೇಸು ಎಂಬ ನಿಯಮವನ್ನು ಕೆಲವು ಊರುಗಳಲ್ಲಿ ಜಾರಿಗೆ ತರಲಾಗಿದೆ.

​ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ ಮತ್ತು ಕೊಪ್ಪ ಭಾಗದ ಗ್ರಾಮಗಳ
​ಕೊಡವ,ಒಕ್ಕಲಿಗ ಹಾಗೂ ಇತರ ಸ್ಥಳೀಯ ಸಮಾಜಗಳ ಕೆಲವೆಡೆ ಕಾಫಿ ಬೆಳೆಗಾರರು ಮತ್ತು ಸಾಮಾನ್ಯ ರೈತ ಕುಟುಂಬಗಳು ಆಡಂಬರದ ಪೈಪೋಟಿಗೆ ಬಿದ್ದು ಸಾಲಗಾರರಾಗುವುದನ್ನು ತಪ್ಪಿಸಲು ಸಮಾಜದ ಹಿರಿಯರು ಮಧ್ಯಪ್ರವೇಶಿಸಿದ್ದಾರೆ.

 ​ಮದುವೆಯ ಮರುದಿನದ ಮಾಂಸದೂಟದ ಆಡಂಬರಕ್ಕೆ ಮಿತಿ ಹೇರಿ, ಮದ್ಯಪಾನ ಮತ್ತು ದುಬಾರಿ ಸಂಗೀತ ಸಂಜೆಗಳನ್ನು ನಿಷೇಧಿಸುವ ತೀರ್ಮಾನಗಳನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದ ಹಿರಿಯರ ಸಮಿತಿಗಳು ಕೈಗೊಂಡಿವೆ.

​ #ಕರಾವಳಿ-ಮಲೆನಾಡು ಗಡಿ ಭಾಗ #ಬೆಳ್ತಂಗಡಿ, #ಕಾರ್ಕಳ ಗ್ರಾಮಾಂತರ
​ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರೇರಿತ ಸ್ವಸಹಾಯ ಸಂಘಗಳು ಮತ್ತು ಗ್ರಾಮ ವಿಕಾಸ ಸಮಿತಿಗಳಿರುವ ಊರುಗಳಲ್ಲಿ "ಸರಳ ವಿವಾಹ" ಆಂದೋಲನಕ್ಕೆ ಒತ್ತು ನೀಡಲಾಗಿದ್ದು, ಬೀಗರ ಊಟಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದರ ವಿರುದ್ಧ ಸಾರ್ವಜನಿಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

​ಈ ನಿರ್ಬಂಧಗಳಲ್ಲಿ ಸಾಮಾನ್ಯವಾಗಿರುವ ಪ್ರಮುಖ ನಿಯಮಗಳು ​ಪದಾರ್ಥಗಳ ಮಿತಿ, ಊಟದ ಮೆನುವಿನಲ್ಲಿ ಕೇವಲ ನಿಗದಿತ ಸಿಹಿ ಮತ್ತು ಸೀಮಿತ ಭಕ್ಷ್ಯಗಳಿಗೆ ಮಾತ್ರ ಅವಕಾಶ.

#​ಮದ್ಯಪಾನ_ನಿಷೇಧ.
ಬೀಗರ ಊಟದ ನೆಪದಲ್ಲಿ ನಡೆಯುವ ಮದ್ಯದ ಪಾರ್ಟಿಗಳನ್ನು ಕಡ್ಡಾಯವಾಗಿ ಊರಿನಿಂದ ಹೊರಗಿಡುವುದು.

#ಸಮಯ_ಮತ್ತು_ಸ್ಥಳ.
 ದುಬಾರಿ ಕಲ್ಯಾಣ ಮಂಟಪಗಳ ಬದಲಾಗಿ ಊರಿನ ದೇವಸ್ಥಾನ, ಛತ್ರ ಅಥವಾ ಮನೆಯಂಗಳದಲ್ಲೇ ಸೀಮಿತ ಜನರಿಗೆ ಔತಣ ನಡೆಸುವುದು.

​ ಈ ನಿಯಮ ಮೀರಿ ದುಂದುವೆಚ್ಚ ಮಾಡಿದ ಕುಟುಂಬಗಳಿಗೆ ಸಾಮಾಜಿಕ ಕಾರ್ಯಗಳಲ್ಲಿ ಗ್ರಾಮಸ್ಥರ ಅಸಹಕಾರ ಅಥವಾ ಸಾಂಕೇತಿಕ ದಂಡ ವಿಧಿಸುವ ಕ್ರಮಗಳೂ ಕೆಲವು ಹಳ್ಳಿಗಳಲ್ಲಿ ಪ್ರಾರಂಬಿಸುತ್ತಿದ್ದಾರೆ.

    ಸಣ್ಣದಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹರಗಿ ಗ್ರಾಮದ ಒಂದು ತೀರ್ಮಾನಕ್ಕೆ ಈ ರೀತಿ ರಾಜ್ಯದಾದ್ಯಂತ ಪ್ರೇರಣೆ ಆಗಿರುವುದು ಸಮಾಜ ಸುದಾರಣೆಗೆ ಒಂದು ಹೊಸ ಆಯಾಮ ನೀಡಿದೆ.

   ಇದನ್ನು ಜಾತಿ ಸಂಘಟನೆಗಳು, ಜನಪರ ಹೋರಾಟದ ವೇದಿಕೆಗಳು ಹೆಚ್ಚು ಪ್ರಚಾರ ನೀಡಿ ಪ್ರೋತ್ಸಾಹ ನೀಡಬೇಕು.

#socialawarness #bigarauta #harigevillage
#simplemarriege

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...