Blog number 1892. ಕವನಗಳನ್ನು ಬರೆದು ಭದ್ರಾವತಿ ಆಕಾಶವಾಣಿಯಲ್ಲಿ ಅನೇಕ ಬಾರಿ ವಾಚನ ಮಾಡಿರುವ ಆನಂದಪುರಂ ಡೆಪ್ಯೂಟಿ ರೇಂಜ್ ಪಾರೆಸ್ಟ್ ಆಫೀಸರ್ ಭದ್ರೇಶ್ ಆನಂದಪುರಂ ಹೋಬಳಿಯಲ್ಲಿ ಸಂಚರಿಸುತ್ತಿದ್ದ ಕಾಡಾನೆ ಸ್ಥಳಾಂತರದ ತಂಡದಲ್ಲೂ ಕಾರ್ಯನಿರ್ವಹಿಸಿದ್ದರು.
#ಇವತ್ತು_ಬೆಳಿಗ್ಗೆ_ಡೆಪ್ಯುಟಿ_ರೇಂಜ್_ಪಾರೆಸ್ಟ್_ಆಫೀಸರ್_ಭದ್ರೇಶ್_ಬಂದಿದ್ದರು. #ಇವರು_ಸಾಹಿತಿಗಳೂ_ಆಗಿದ್ದಾರೆ_ಆಕಾಶವಾಣಿಯಲ್ಲಿ_ಅನೇಕ_ಬಾರಿ_ಕವನ_ವಾಚನ_ಮಾಡಿದ್ದಾರೆ. #ಇವರೆಲ್ಲ_ಕಳೆದ_ಹದಿನೈದು_ದಿನಗಳಿಂದ_ಆನಂದಪುರಂ_ಹೋಬಳಿಯ_ಸುತ್ತ_ಮುತ್ತ_ಇದ್ದ #ಕಾಡಾನೆಗಳನ್ನು_ಶೆಟ್ಟಿಹಳ್ಳಿ_ಅಭಿಯಾರಣ್ಯಕ್ಕೆ_ಸ್ಥಳಾಂತರಿಸುವ_ಕೆಲಸದಲ್ಲಿದ್ದರು. #ಕಾಡಾನೆಗಳು_ಸುಗಮವಾಗಿ_ದಿನಾಂಕ_28_ಡಿಸೆಂಬರ್_2023ರ_ಬೆಳಗಿನ_ಜಾವ #ರಿಪ್ಪನಪೇಟೆ_ಅಯನೂರು_ರಾಜ್ಯಹೆದ್ದಾರಿ_9ನೇ_ಮೈಲಿಕಲ್ಲಿನಲ್ಲಿ_ದಾಟಿದ_ಶುಭ_ಸುದ್ದಿ_ತಿಳಿಸಿದರು. #ಯಾರಿಗೂ_ಹಾನಿ_ಮಾಡದೆ_ಕಾಡಾನೆಗಳೂ_ಸುರಕ್ಷಿತವಾಗಿ_ಹಿಂದುರಿಗಿದೆ. ನನ್ನ ತಾವರೇಹಳ್ಳಿಯ ರಬ್ಬರ್ ಪ್ಲಾಂಟೇಶನ್ ನ ರಬ್ಬರ್ ಮರಗಳನ್ನು ಕಠಾವು ಮಾಡಿದ್ದು ಉಪಗ್ರಹದ ಮೂಲಕ ಅರಣ್ಯ ಇಲಾಖೆ ಗ್ರಹಿಸಿದ್ದು ಈ ಬಗ್ಗೆ ಸೂಕ್ತ ಮಾಹಿತಿಗಾಗಿ ಈ ಪ್ರದೇಶದ ಡೆಪ್ಯೂಟಿ ರೇಂಜ್ ಪಾರೆಸ್ಟರ್ ಆಫೀಸರ್ ಭದ್ರೇಶ್ ಅವರಿಗೆ ಅರಣ್ಯಇಲಾಖೆ ಮಾಹಿತಿ ಕೇಳಿದ್ದರಿಂದ ನನ್ನ ಜಮೀನಿನ ಪಹಣಿ ಇತ್ಯಾದಿ ಮಾಹಿತಿ ಪಡೆಯಲು ಅವರು ಮತ್ತು ಅವರ ಸಿಬ್ಬಂದಿ ಬಂದಿದ್ದರು. ನೂತನ ತಂತ್ರಜ್ಞಾನದಲ್ಲಿ ದೊಡ್ಡ ಅರಳಿ ಮರ ಬಿದ್ದರೆ, ಬಿದಿರು ಮಟ್ಟಿ ಬೆಂಕಿಗೆ ಆಹುತಿ ಆದರೂ ಅರಣ್ಯ ಇಲಾಖೆಗೆ ತಕ್ಷಣ ತಿಳಿಯುವಂತ ಸ್ಯಾಟಲೈಟ್ ವ್ಯವಸ್ಥೆ ಇರುವುದು ತಿಳಿದು ಖುಷಿ ಆಯಿತು. ಇವರೆಲ್ಲರೂ ಕಳೆದ 15 ದಿನದಿಂದ ಅಂಬ್ಲಿಗೊಳ ...