Skip to main content

Posts

Showing posts with the label Ravi Belegere icon of Kannada journalisam

Blog number 1822. ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನ ಆಗಿದ್ದ ರವಿ ಬೆಳೆಗೆರೆ ನಮ್ಮನ್ನಗಲಿ ಮೂರು ವರ್ಷ ಆಯಿತು ಅವರಂತಹ ಇನ್ನೊಬ್ಬ ಪತ್ರಕರ್ತ ಹುಟ್ಟಿ ಬರಲಿಲ್ಲ ಮತ್ತು ಹಾಯ್ ಬೆಂಗಳೂರ್ ಅಂತ ಪತ್ರಿಕೆಯೂ ಇನ್ನೊಂದು ಬರಲಿಲ್ಲ.

#ಮತ್ತೆ_ಮತ್ತೆ_ನೆನಪಾಗುವ_ರವಿಬೆಳೆಗೆರೆ. #ಕನ್ನಡ_ಪತ್ರಿಕೋದ್ಯಮದಲ್ಲಿ_ಸಂಚಲನ_ಮೂಡಿಸಿದ್ದ. #ನ್ಯಾಯದ_ಪರವಾಗಿದ್ದ_ಭ್ರಷ್ಟಾಚಾರಿಗಳಿಗೆ_ಸಿಂಹಸ್ವಪ್ನವಾಗಿದ್ದ. #ರವಿಬೆಳೆಗೆರೆ_ಮತ್ತು_ಹಾಯ್_ಬೆಂಗಳೂರು_ವಾರಪತ್ರಿಕೆ #ಇವತ್ತು_ಅವರ_ಮೂರನೆ_ಸಂಸ್ಮರಣ_ದಿನ #ಜನವರಿ_21_2020ರಲ್ಲಿ_ಆನಂದಪುರಂನ_ನಮ್ಮ_ಸಂಸ್ಥೆಯಲ್ಲಿ_ಕೊನೆಯ_ಬೇಟಿ. #ಹಾಯ್_ಬೆಂಗಳೂರಿನಂತ_ಪತ್ರಿಕೆ #ರವಿಬೆಳೆಗೆರೆಯಂತ_ಬರಹಗಾರ_ಮತ್ತೊಮ್ಮೆ_ಹುಟ್ಟಿ_ಬರಲು_ಸಾಧ್ಯವಾ?   ಹಾಯ್ ಬೆಂಗಳೂರ್ ಗೆ ಕಾಯುವವರೆಷ್ಟು ಮಂದಿ, ಓದಿ ಮುಷ್ಟಿ ಕಟ್ಟಿ "ವಾವ್ ರವಿಬೆಳೆಗೆರೆ " ಅನ್ನುವವರು, ಅಂಕಣ ಓದಿ ಕಣ್ಣೀರಾಗುವವರು, ಈ ಪತ್ರಿಕೆ ಅಂದರೆ ಬೆಚ್ಚಿ ಬೀಳುವವರು... ಹಾಯ್ ಬೆಂಗಳೂರ್ ಸೃಷ್ಟಿಸಿದ ಸಂಚಲನ ಇದರ ಸಂಪಾದಕರಾದ ರವಿಬೆಳೆಗೆರೆ ಎರಡು ದಶಕ ಕರ್ನಾಟಕ ರಾಜ್ಯದಲ್ಲಿ ಗಳಿಸಿದ ಕೀರ್ತಿ ಪತಾಕೆಗಳು ಈ ಹಿಂದೆ ಮತ್ತು ಮುಂದೆ ಬೇರಾವ ಪತ್ರಿಕೆ ಅಥವ ಬರಹಗಾರನೂ ಸೃಷ್ಟಿಯಾಗಿ ಬರಲು ಸಾಧ್ಯವೇ ಇಲ್ಲ ಅನ್ನಿಸುತ್ತದೆ.    ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ನನ್ನನ್ನು ಮುಖಪುಟದಲ್ಲಿ ಪ್ರಕಟಿಸಿ ನನ್ನ ಹೋರಾಟಕ್ಕೆ ಬೆಂಬಲಿಸಿದ್ದರು, ಪಕ್ಷೇತರನಾಗಿ 1999 ರಲ್ಲಿ ಸಾಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸಿದ್ದೆ ಕಾಂಗ್ರೇಸ್ ಕಾಗೋಡು ತಿಮ್ಮಪ್ಪ ಮತ್ತು ಬಿಜೆಪಿ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ವಿರುದ್ದ ಆಗ ಅವರು ಹಾಯ್ ಬೆಂಗಳೂರ್ ಮುಖ ಪುಟದಲ್ಲಿ ನೀಡಿದ ಹೆಡ್ಡಿಂಗ್ #...