Skip to main content

Posts

Showing posts with the label Kannada famous film actor sudeep his kichcha sudeep charitable society (R) adopted Shimoga district Sagara taluk backward village AVIGE but since two years no progress.

Blog number 1014. ನಟ ಸುದೀಪರು ಅವರ ಸಂಸ್ಥೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ (ರಿ) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಂತ್ರಸ್ಥರ ಆವಿಗೆ ಗ್ರಾಮ ದತ್ತು ಪಡೆದು ಎರೆಡು ವಷ೯ ಆಯಿತು ಆದರೆ ಯಾವುದೇ ರೀತಿಯ ಅಭಿವೃದ್ಧಿ ಪ್ರಾರಂಭವಾಗದ ಬಗ್ಗೆ ಜನ ನಿರಾಶರಾಗಿದ್ದಾರೆ.

#ಖ್ಯಾತ_ನಟ_ಸುದೀಪರ_ಗಮನಕ್ಕಾಗಿ #ನಿಮ್ಮ_ಟ್ರಸ್ಟ್_ದತ್ತು_ತೆಗೆದುಕೊಂಡ_ಸಾಗರ_ತಾಲ್ಲೂಕಿನ_ಮುಳುಗಡೆ_ಪ್ರದೇಶದ_ಆವಿಗೆ_ಊರವರ_ವಿನಂತಿ #ಎರೆಡು_ವರ್ಷದ_ಹಿಂದೆ_ದತ್ತು_ಸ್ವೀಕರಿಸಿ_ಬೋರ್ಡ್_ಲಗತ್ತಿಸಿದ_ನಂತರ_ಯಾರು_ಬಂದಿಲ್ಲ. #ನಿಮ್ಮ_ಅಭಿಮಾನಿಗಳೇ_ಇರುವ_ನಿಮ್ಮ_ಜಿಲ್ಲೆ_ಶಿವಮೊಗ್ಗದ_ಸಾಗರ_ತಾಲ್ಲೂಕಿನ_ಆವಿಗೆಯ_ಅಭಿವೃದ್ದಿಗೆ_ಕೈಜೋಡಿಸಿ. #ನಿಮ್ಮ_ಸಂಸ್ಥೆ_ದತ್ತು_ಪಡೆದ_ಆವಿಗೆ_ಶರಾವತಿ_ನದಿಯ_ಹಿನ್ನೀರಿನ_ಜನ.     ಎರೆಡು ವರ್ಷದ ಹಿಂದೆ ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ ಬೆಂಗಳೂರಿನ ಪ್ರಖ್ಯಾತ ರೆಸ್ಟೋರೆಂಟ್ ಸರೋವರದ ಮಾಲಿಕರಾದ ಸಂಜೀವಣ್ಣರ ಪುತ್ರ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಸುದೀಪರ ಟ್ರಸ್ಟ್ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸಮೀಪದ ಆವಿಗೆ ಎಂಬ ಊರನ್ನು ದತ್ತು ಪಡೆದ ಸುದ್ದಿ ಪತ್ರಿಕೆಗಳಲ್ಲಿ ಓದಿ ಸಂತೋಷ ಪಟ್ಟಿದ್ದೆ.   ಈ ಊರಲ್ಲಿ ಜೈನರು ಮತ್ತು ಕುಣುಬಿ ಜನರು ಹೆಚ್ಚಿದ್ದಾರೆ ಇಲ್ಲಿನವರೇ ಆದ ಜೈನ ಮುನಿಗಳು ಪ್ರಖ್ಯಾತರಾಗಿದ್ದಾರೆ ಮತ್ತು ಈ ಊರಲ್ಲಿ ಜೈನ ಮಂದಿರ ಕೂಡ ನಿರ್ಮಾಣ ಆಗಿದೆ.   1999 - 2000 ಇಸವಿಯಲ್ಲಿ ಈ ಊರಿನಲ್ಲಿ ಅಬ್ಬಿ ನೀರಿನ ಸರಬರಾಜು ಕಾಮಗಾರಿಯಲ್ಲಿ ಅವ್ಯವಹಾರ ಆದಾಗ ನಾನು ಹೋಗಿ ನೋಡಿದಾಗ 4 ಇಂಚು ಪೈಪ್ ಎಸ್ಟಿಮೇಟ್ ನಲ್ಲಿ ಇದ್ದು ಭೂಮಿಯಿಂದ 4 ಅಡಿ ಆಳದಲ್ಲಿ ಅಳವಡಿಸುವ ಕಾಮಗಾರಿ ಅಂತಿಮವಾಗಿ ಅದ೯ ಇಂಚು ಕಳಪೆ ಪೈಪು ಊರವರಿಗೆ...