Skip to main content

Posts

Showing posts with the label KusumaSoraba

3476. ಕುಸುಮಸೊರಬ

#ನಿಮ್ಮ_ಜೋಗಜಲಪಾತ_ಪ್ರವಾಸದ_ಮಾರ್ಗದಲ್ಲಿದೆ #ಬಂಗಾರ_ಕುಸುಮ_ಜಲಪಾತ #ದೇಶದ_ಏಕೈಕ_ಪರಿಸರವಾದಿ_ಹೆಸರಿನ_ಜಲಪಾತ  #ಗೇರುಸೊಪ್ಪೆ_ಸಮೀಪದ_ಕೆಪ್ಪ_ಜೋಗಕ್ಕೆ_ಪರಿಸರವಾದಿಗಳು  #ಖ್ಯಾತ_ಪರಿಸರ_ಹೋರಾಟಗಾರ್ತಿ_ಡಾಕ್ಟರ್_ಕುಸುಮ_ಸೊರಬ_ಹೆಸರು  #ಚಿರಸ್ಥಾಯಿಗೊಳಿಸುವ_ಕೆಲಸವಾಗಿ_ಬಂಗಾರ_ಕುಸುಮ_ಜಲಪಾತ_ಎಂದು_ನಾಮಕರಣ_ಮಾಡಿದ್ದಾರೆ. #mavinagundi #jogfalls #bangarakusumafalls  #kusumasoraba #honnavara    ನೀವು ಜೋಗ್ ಫಾಲ್ಸ್ ನೋಡಿದ ನಂತರ ಸಮೀಪದ #ಮಾವಿನಗುಂಡಿ ವೃತ್ತದಿಂದ ಗೇರುಸೊಪ್ಪ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 30 ಕಿಲೋ ಮೀಟರ್ ಪ್ರಯಾಣಿಸಿದರೆ ಸಮೀಪದ ಮಾಸ್ತಿಕಾಂಬಾ ದೇವಾಲಯದ ಸಮೀಪ ಬಲಭಾಗದಲ್ಲಿದೆ #ಬಂಗಾರ_ಕುಸುಮ_ಜಲಪಾತ.    ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಎಲ್ಲರಿಗೂ ಪಕ್ಕದ ಸಹ್ಯಾದ್ರಿ ಗಿರಿ ಶ್ರೇಣಿಯಿಂದ ದುಮುಕುವ ಈ  ಜಲಪಾತ ಈ ಮಾರ್ಗದಲ್ಲಿ ಮಳೆಗಾಲ ಪೂರ್ತಿ ಮತ್ತು ಜನವರಿ ತಿಂಗಳ ತನಕ ಜಲಪಾತದ ಸುಂದರ ದೃಶ್ಯ ನೋಡಲು ಸಿಗುತ್ತದೆ.   ಈ ಜಲಪಾತದ ಹೆಸರಿನ ನಾಮಫಲಕ ಅಲ್ಲೆಲ್ಲೂ ಇಲ್ಲವಾದ್ದರಿಂದ ಈ ಜಲಪಾತ ನೋಡಿದವರಿಗೆ ಇದರ ಹೆಸರು ಗೊತ್ತೇ ಇಲ್ಲ.      ಈ ಜಲಪಾತಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಹರಿದು ಬರುವ ಹೊಳೆ ಮಳೆಗಾಲದಲ್ಲಿ ಜಲಪಾತವಾಗಿ ಶರಾವತಿ ನದಿಗೆ ಸೇರಿ ಅರಬೀ ಸಮುದ್ರ ಸೇರುತ್ತದೆ.  ...