Skip to main content

Posts

Showing posts with the label Kannur Sitaram at his childhood Cobra always with him

ನಾಗರ ಹಾವಿನೊಂದಿಗೆ ತೊಟ್ಟಿಲ ಬಾಲ್ಯ ಕಳೆದ ಕಣ್ಣೂರು ಸೀತಾರಾಂ ಪ್ರಕರಣ ಆ ಕಾಲದಲ್ಲಿನ ವಿಸ್ಮಯ ಘಟನೆ.

ತೊಟ್ಟಿಲಲ್ಲಿ ನಾಗರ ಹಾವಿನ ಜೊತೆ ಜೋಗುಳವಾಡಿದ ಕಣ್ಣೂರು ಸೀತಾರಾಂ. #1960ರ_ದಶಕದಲ್ಲಿ_ಇಡೀ_ರಾಜ್ಯಕ್ಕೆ_ವಿಸ್ಮಯವಾಗಿದ್ದ_ಪ್ರಕರಣದ_ವ್ಯಕ್ತಿ_ಇವರು #ಪ್ರಜಾವಾಣಿ_ದಿನಪತ್ರಿಕೆಯಲ್ಲಿ_60_ವಷ೯ದ_ಹಿಂದೆ_ಸುದ್ದಿ_ಆದ_ವ್ಯಕ್ತಿ_ಸಂದಶ೯ನ      ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೊಸಕೊಪ್ಪದಲ್ಲಿನ ಒಂದು ರೈತನ ಮನೇಲಿ ದೊಡ್ಡದಾದ ನಾಗರ ಹಾವು ತೊಟ್ಟಲಲ್ಲಿ ಮಲಗಿರುವ ಶಿಶುವಿನ ಜೊತೆ ಸದಾ ಮಲಗಿರುತ್ತೆ ಎಂಬ ಸುದ್ದಿ ಆ ಕಾಲದಲ್ಲಿ ಜನರಿಂದ ಜನರಿಗೆ ಹರಡಿ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ಸುದ್ದಿ ಆಗಿತ್ತ೦ತೆ.   ಇದು ನಾನು ಸಣ್ಣಕ್ಕಿದ್ದಾಗ ನಮ್ಮ ತಂದೆ ಅವರ ಗೆಳೆಯರ ಜೊತೆ ಇದನ್ನೆಲ್ಲ ಮಾತಾಡುವುದು ಕೇಳಿದ್ದೆ ನ0ತರ ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಾಗರ ಹಾವಿನ ಸಹಪಾಟಿ ಆಗಿ ಸುದ್ದಿ ಆಗಿದ್ದ ವ್ಯಕ್ತಿ ತಲಾಷ್ ಮಾಡಿದ್ದೆ.   ಶ್ರೀಮತಿ ಚೆನ್ನಮ್ಮ ಮತ್ತು ಬಡಿಯಪ್ಪ ದಂಪತಿಗಳು ಹೊಸಗುಂದದಿಂದ ಹೊಸಕೊಪ್ಪ ಎಂಬ ಹಳ್ಳಿಗೆ ವಲಸೆ ಬಂದು ಹುಲ್ಲಿನ ಮಾಡಿನ ಮತ್ತು ಬಿದಿರ ತಟ್ಟಿಯ ಗೋಡೆಯ ಗುಡಿಸಲು ಮಾಡಿ ಬಡತನದಿಂದ ಜೀವಿಸುತ್ತಿದ್ದರು ಅವರಿಗೆ ಒಂದು ಹೆಣ್ಣು ಮಗು ಇತ್ತು.   ಇಲ್ಲಿಗೆ ಬಂದ ಮೇಲೆ ಪುತ್ರ ಸಂತಾನವಾಯಿತು ಮಗುವನ್ನು ಮಾತ್ರ ನಾಗರ ಹಾವು ಬಿಟ್ಟು ದೂರ ಹೋಗುತ್ತಿರಲಿಲ್ಲವಂತೆ, ಹಾಲು ಕುಡಿಸುವಾಗ ಮಾತ್ರ ದೂರ ಇರುತ್ತಿತ್ತಂತೆ ಹಾಗಾಗಿ ಮಗುವಿಗೆ ನಾಗರಾಜ ಅ...