Blog number 1244.NEXT IS BEST ಎಂಬ ಆಂಗ್ಲ ಗಾದೆ ಮತ್ತು ಕನ್ನಡದ ಅಕ್ಕಿ ತಿನ್ನುವವನು ಹೋದರೆ ತೌಡು ತಿನ್ನುವವನು ಬರುತ್ತಾನೆ ಎಂಬ ಗಾದೆಗಳ ತರ್ಕ.
#Next_is_Best_ಎಂಬ_ಆಂಗ್ಲ_ಗಾದೆ #ಅಕ್ಕಿ_ತಿನ್ನೋನು_ಹೋದರೆ_ತೌಡು_ತಿನ್ನೋನು_ಬರ್ತಾನೆ_ಎಂಬ_ಕನ್ನಡ_ಗಾದೆ #ಬದಲಾವಣೆಗೆ_ಹೆದರದ_ಬದಲಾಯಿಸಲು_ದೈರ್ಯ_ಮಾಡದಂತ_ಈ_ಗಾಧೆಗಳು #ಅತ್ಯುತ್ತಮಗುಣಮಟ್ಟದ_ಬ್ಲಾಕ್_ಪಿನಾಲ್_ಪ್ಲೋರ್_ಕ್ಲೀನರ್_ಬ್ಲೀಚಿಂಗ್_ಪೌಡರ್_ಹೊಸ_ಸರಬರಾಜುದಾರರು. ವ್ಯವಹಾರದಲ್ಲಿ ಪ್ರತಿನಿತ್ಯವೂ ಹೊಸ ತನ ಬದಲಾವಣೆ ಸಹಜ ಇದರ ಮಧ್ಯೆ ದಿಡೀರ್ ಆಗಿ ಕೈ ಕೊಟ್ಟು ಹೋಗುವ ಕೆಲಸಗಾರರು, ಸರಬರಾಜುದಾರರು, ಗ್ರಾಹಕರುಗಳಿಂದ ಆ ಕ್ಷಣದಲ್ಲಿ ಪಿಚ್ಚೆನ್ನಿಸುತ್ತದೆ, ನೆನಪಿನ ಸುರುಳಿ ಹಿಂದಕ್ಕೆ ತಿರುಗಿಸಿ ಛೇ ಹೀಗೇಕೆ ಆಯಿತು? ನನ್ನದು ತಪ್ಪಾಯಿತಾ? ಅಂತೆಲ್ಲ ಯೋಚಿಸಿದರೆ ಖಂಡಿತಾ ನನ್ನ ತಪ್ಪು ಪೈಸೆ ಅಷ್ಟು ಇಲ್ಲ... ನನ್ನಿಂದ ಓಡಿ ಹೋದವ ಅನೇಕ ರೀತಿ ಸಹಾಯ ಸೌಲಭ್ಯ ಲಾಭ ಪಡೆದವನೇ... ಮತ್ಯಾಕೆ ಬಿಟ್ಟು ಹೋದ? ಗೊತ್ತಿಲ್ಲ. ಕಷ್ಟದ ದಿನಗಳಲ್ಲಿ ಇದ್ದವ ಬಿಟ್ಟು ಹೋದ ಯಾಕೆ? ಅಥವ ಲಾಭ ಇದ್ದಾಗ ಇದ್ದವನು, ಕಷ್ಟ ಬಂದಾಗ ಹೋದನೇಕೆ?. ಇಷ್ಟು ವರ್ಷ ಲಾಭ ಪಡೆದವ ಇವತ್ಯಾಕೆ ರಿಜಿಡ್ ಆಗಿ ದೂರಾದಾ?... ಅವನ ಮಗಳ ಮದುವೆಗೆ ಸಹಾಯ ಪಡೆದಿದ್ದ..ಅವನಿಗೆ ಕಾಯಿಲೆ ಆದಾಗ .... ಕಷ್ಟ ಆದಾಗ .....ಅವನ ಜೊತೆ ನಾನಿರಲಿಲ್ಲವೆ? ನನ್ನ ಸಹಾಯ ಸಹಕಾರ ಆತನಿಗೆ ನೆನಪಿಲ್ಲಾವಾ?... ಹೀಗೆಲ್ಲ ಎಲ್ಲರೂ ಅವರವರ ಜೀವನದಲ್ಲಿ ಪ್ರಶ್ನೆ ಮಾಡಿಕೊಳ್ಳುವುದು ಇದ್ದೆ ಇದೆ, jealous ನಿಂದ ದೂರ ...