Blog number 1218. ಹಿರಿಯ ಮಿತ್ರ ರೈಲ್ವೆ ಕಾಮಿ೯ಕ ನಿವೃತ್ತ - ಸಂತೃಪ್ತ ಜೀವನದಲ್ಲಿ ಭದ್ರಾವತಿಯಲ್ಲಿ ನೆಲೆಸಿರುವ ತಾನೂ ನಗುತ್ತಾ ಎಲ್ಲರನ್ನೂ ನಗಿಸುವ ಆಶು ಕವಿ ಸ್ಯೆಯದ್ ಸಾಲಿ ಬೇಟಿ 30 ವರ್ಷದ ನಂತರ
https://youtu.be/MzHEHqZOxAs #ಮೂವತ್ತು_ವರ್ಷದ_ನಂತರ_ಬೇಟಿ #ಸ್ಯೆಯದ್_ಸಾಲಿ_ರೈಲ್ವೆ_ಕಾರ್ಮಿಕರು #ಕಷ್ಟದ_ದಿನಗಳಲ್ಲಿ_ತಮ್ಮ_ಹಾಸ್ಯದ_ಮ್ಯಾನರಿಸಂನಿಂದ_ಎಲ್ಲರ_ಮುಖದಲ್ಲಿ_ನಗು_ತರಿಸುವಾತ, #ಭದ್ರಾವತಿಯಲ್ಲಿ_ನಿವೃತ್ತ_ಸಂತೃಪ್ತ_ಜೀವನದಲ್ಲಿ #ಆ_ಕಾಲದ_ರೈಲ್ವೆ_ಕಾರ್ಮಿಕರ_ಸಂಕಷ್ಟ_ಜೀವನ 1990 ರ ವರೆಗೆ ರೈಲ್ವೆ ಕಾರ್ಮಿಕರ ಜೀವನ ಸುಖಮಯ ಆಗಿರಲಿಲ್ಲ, ರೈಲ್ವೆ ಗ್ಯಾಂಗ್ ಮನ್ ಗಳ ಮತ್ತು ಗೇಟ್ ಮನ್ ಗಳ ಸಂಬಳ ಮಾಸಿಕ 11 ಸಾವಿರ ದಾಟಿರಲಿಲ್ಲ. ಬೆಳಿಗ್ಗೆ ಹೆಗಲ ಮೇಲೆ ದೊಡ್ಡ ಹ್ಯಾಮರ್, ಶಾವೆಲ್, ಸಬ್ಬಲ್ , ಸ್ವಾನರ್ ಗಳನ್ನು ಹೇರಿಕೊಂಡು ತಂಡವಾಗಿ ನಾಲ್ಕು ಕಿಲೋ ಮೀಟರ್ ದೂರದವರೆಗೆ ರೈಲ್ವೆ ಮಾರ್ಗ ಪರಿಶೀಲನೆ, ದುರಸ್ತಿ ಮತ್ತು ಜಲ್ಲಿಕಲ್ಲುಗಳನ್ನು ಸಮತಟ್ಟು ಮಾಡಿ ವಾಪಾಸು 4 ಕಿ.ಮಿ. ನಡೆದು ಬರುವಾಗ ಸಂಜೆ ಆಗುತ್ತಿತ್ತು. ಹಾಸಿದರೆ ಹೊದೆಯಲು ಇಲ್ಲ ಹೊದೆದರೆ ಹಾಸಲಿಲ್ಲ ಎಂಬ ಜಂಜಾಟದ ಜೀವನ ಅವರದ್ದು, ವಾಸಕ್ಕೆ ಕ್ವಾರ್ಟರ್ಸ್ ಮತ್ತು ಚಿಕಿತ್ಸೆಗೆ ಮೈಸೂರಿನ ರೈಲ್ವೆ ಕಾರ್ಮಿಕರ ಆಸ್ಪತ್ರೆ ಅವರಿಗಿದ್ದ ಅವತ್ತಿನ ಸುದಾರಣೆ ಆಗಿತ್ತು. ಪ್ರತಿ ತಿಂಗಳು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಸಂಬಳ ಆನಂದಪುರಂ ರೈಲ್ವೆ ಸ್ಟೇಷನ್ ಗೆ ಬರುತ್ತಿದ್ದ ವಿಶೇಷ ರೈಲಿನಲ್ಲಿ ಬಟಾವಡೆ ಮಾಡುತ್ತಿದ್ದರು, ದಸರಾದಲ್ಲಿ ಇದೇ ರೀತಿ ಬೋನಸ್ ಸಂಬಳ ಕೂಡ. ಈ ಕಾರಣದಿಂದ ರೈಲ್ವ...