Blog number 1060. ಟಿಪ್ಪು ಸುಲ್ತಾನರ ಜಯಂತಿ 11- ನವೆಂಬರ್ -2022. ಟಿಪ್ಪು ಸುಲ್ತಾನರ ಖಡ್ಗ ನನ್ನ ಕೈಯಿಗೆ ನೀಡಿದ್ದ ವಿಜಯ ಮಲ್ಯರು ಆ ದಿನ ಸಾಗರದಲ್ಲಿ ನಡೆದ ಮೆರವಣಿಗೆ ಸಭೆ, ಇತಿಹಾಸ ಪುಟದಲ್ಲಿ ಟಿಪ್ಪು ಸುಲ್ತಾನರ ಆನಂದಪುರಂ ಕೋಟೆ - ಮಸೀದಿ - ರಂಗನಾಥ ಸ್ವಾಮಿ ದೇವಾಲಯ ಬೇಟಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಚಿಂತಕರಾದ ಅರವಿಂದ ಚೊಕ್ಕಾಡಿ ಅವರ ಟಿಪ್ಪು ಸುಲ್ತಾನರ ಬಗ್ಗೆಯ ಉಪನ್ಯಾಸ ಸವ೯ಕಾಲಿಕ.
#ಟಿಪ್ಪು_ಸುಲ್ತಾನರ_ಜಯಂತಿ #ಐದು_ವರ್ಷದ_ಹಿಂದೆ_ಖ್ಯಾತ_ಅಂಕಣಗಾರ_ಶಿಕ್ಷಣ_ತಜ್ಞ_ಅರವಿಂದ_ಚೊಕ್ಕಾಡಿ_ಅವರ_ಉಪನ್ಯಾಸ #ಟಿಪ್ಪು_ಸುಲ್ತಾನರ_ಖಡ್ಗ_ಸಾಗರಕ್ಕೆ_ತಂದ_ನೆನಪುಗಳು #ಟಿಪ್ಪು_ಸುಲ್ತಾನರು_ಆನಂದಪುರಂ_ಕೋಟೆ_ಮಸೀದಿ_ರಂಗನಾಥ_ದೇವಸ್ಥಾನ_ಬೇಟಿ_ಇತಿಹಾಸ_ಪುಟದಲ್ಲಿ_ದಾಖಲಾಗಿದೆ. ವಿಜಯ ಮಲ್ಯರವರು ಲಂಡನ್ ನಲ್ಲಿ ಹರಾಜಿನಲ್ಲಿ ಹಿಡಿದ ಟಿಪ್ಪು ಸುಲ್ತಾನರ ಖಡ್ಗ ಸಾಗರದ ಇಂದಿರಾ ಗಾಂಧಿ ಮಹಿಳಾ ಕಾಲೇಜು ಅಂಗಳದಲ್ಲಿ ಹೆಲಿಕಾಪ್ಟರ್ ನಲ್ಲಿ ತಂದಾಗ ಅಲ್ಲಿಂದ ಶಿವಪ್ಪ ನಾಯಕ ವೃತ್ತದಿಂದ ಗಣಪತಿ ದೇವಸ್ಥಾನಕ್ಕೆ ಒಯ್ದು ಪೂಜೆ ಮಾಡಿಸಿ ನಂತರ ಜಾಮಿಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಯಲ್ಲಿ ಮಾರಿಗುಡಿ ದೇವಾಲಯದ ಎದುರಿನಿಂದ ಗಾಂಧಿ ಮೈದಾನದವರೆಗೆ ತಂದು ಅಲ್ಲಿ ಬಹಿರಂಗ ಸಭೆಯಲ್ಲಿ ಟಿಪ್ಪು ಸುಲ್ತಾನರ ಖಡ್ಗ ಸಾರ್ವಜನಿಕರಿಗೆ ಪ್ರದರ್ಶಿಸಿ ನಂತರ ಜನತಾ ಪಕ್ಷದ ವಿದಾನ ಸಭಾ ಅಭ್ಯರ್ಥಿ ಆಗಿದ್ದ ನನ್ನ ಪರ ವಿಜಯ ಮಲ್ಯರವರು ಪ್ರಚಾರ ಭಾಷಣ ಮಾಡಿದ್ದರು ಆ ಸಂದರ್ಭದಲ್ಲಿ ಟಿಪ್ಪು ಸುಲ್ತಾನರ ಐತಿಹಾಸಿಕ ಖಡ್ಗ ನನ್ನ ಕೈಯಲ್ಲಿಟ್ಟಿದ್ದರು ಆಗ ಅದರ ಬೆಲೆ 2 ಕೋಟಿ. ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಆನಂದಪುರಂ ಕೋಟೆ ವಶಪಡಿಸಿಕೊಂಡು ನೂರಾರು ಜನರ ಹತ್ಯೆ ಮಾಡಿದ ಬ್ರಿಟೀಷರನ್ನು ಹೆಡೆಮುರಿ ಕಟ್ಟಿ ಪುನಃ ಆನಂದಪುರಂ ಕೋಟೆ ವಶಪಡಿಸಿಕೊಂಡ ನಂತರ ಮೈಸೂರಿನಿಂದ ಬಿದನೂರು...