Blog number 1319. ಗೋರಕಪುರದ ನಾಥಪಂಥದ ಮಹಾಂತರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಪ್ರತಿ 12 ವರ್ಷಕ್ಕೊಮ್ಮೆ ನಾಸಿಕ್ ಕುಂಭ ಮೇಳದ ಅಂತಿಮ ದಿನ ಹೊರಟು ಪಶ್ಚಿಮ ಘಟ್ಟದ ನಡುವೆ ಪಾತ್ರ ದೇವತೆ ತಲೆಯ ಮೇಲೆ ಹೊತ್ತು ನಡೆಯುತ್ತಾ ಮಂಗಳೂರಿನ ಕದ್ರಿ ತಲುಪುವ ಬಾರಾಪಂತ್ ಯಾತ್ರೆಯಲ್ಲಿ ಭಾಗವಹಿಸಿದ್ದರಾ?
ಗೋರಕ್ನಾಥರ ನಾಥಪಂತದ ಗೋರಕ್ಪುರದ ಸಂತ ಯೋಗಿ ಆದಿತ್ಯನಾಥರ ಸ್ಥಾನ ದೊಡ್ಡದು ಜಾತ್ಯತೀತ ಪರಂಪರೆಯ ಈ ಪಂಥ 5000 ವಷ೯ಕ್ಕೂ ಹಿಂದಿನ ಪರಂಪರೆ ಎಂಬ ನಂಬುಗೆ ಇದೆ, ಮನುವಾದ ಇಲ್ಲಿ ಆಚರಣೆ ಇಲ್ಲ, ಮಾಂಸಹಾರ, ಮಧ್ಯಪಾನ ಮತ್ತು ದೂಮಪಾನ ಇವರಿಗೆ ವಜ೯ ಇಲ್ಲ. ಕನಾ೯ಟಕದಲ್ಲಿನ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ, ಕುಂದಾಪುರ ಸಮೀಪದ ಹಲವಾರಿ ಮಠ ಮತ್ತು ಮಂಗಳೂರಿನ ಕದ್ರಿ ಮಠಗಳು ಇವರ ಅಧೀನವಾದದ್ದು. ಪ್ರತಿ 12 ವಷ೯ಕೊಮ್ಮೆ ನಾಸಿಕ ಕುಂಭಮೇಳದಿಂದ ಪ್ರಾರ೦ಭವಾಗಿ ಮಂಗಳೂರಿನ ಕದ್ರಿವರೆಗೆ ಪಶ್ಚಿಮ ಘಟ್ಟದ ಅರಣ್ಯದಲ್ಲಿ 6 ತಿಂಗಳು ಪಾದಯಾತ್ರೆಯಲ್ಲಿ ಬರುವ ಬಾರಾ ಪಂಥ ಜೋಂಡಿ ಯಾತ್ರೆಗೆ ಈ ಸಂತರೇ ಅಧಿಪತಿಗಳು. ನಾಥಪಂಥದಲ್ಲಿ ಯೋಗಿ ಆಗಿ 86 ಜನ್ಮ ಎತ್ತಿದರೆ ಮಾತ್ರ ಒಂದು ಸಾರಿ ಈ ಬಾರ ಪಂಥ ಜೋOಡಿಯಲ್ಲಿ ಅವಕಾಶ ಸಿಗುತ್ತೆ ಎನ್ನುವ ನಂಬಿಕೆ ಇವರಲ್ಲಿದೆ. ಯೋಗಿ ಆದಿತ್ಯ ನಾಥರು ಸಂತರಾಗುವ ಮೊದಲು ಈ ಯಾತ್ರೆಯಲ್ಲಿ ಭಾಗವಹಿಸಿದ್ದರೆಂದು ಹೇಳುತ್ತಾರೆ ಅದನ್ನ ಅವರೇ ದೃಡ ಪಡಿಸಬೇಕಷ್ಟೆ. ಇವರ ಹಿನ್ನೆಲೆ ನೋಡದೆ ವಿರೋದಿಸುವುದು ಸರಿಯಲ್ಲ. NATHA PANTH BELONG TO GORAKHNATH GORAKPUR SECT,NONVEG, LIQUOR AND SMOKIN IS NO BAR TO THIS SECT. YOGI ADITY NATH IS HEAD OF THIS SECT, EVERY 12YEAR ONCE GROUP OF YOGIS STARTING YATRA FROM...