ಆನಂದಪುರಂ_ರೈಲ್ವೆಸ್ಟೇಶನ್_ವಡೆ_ವಾಸಣ್ಣ ಆನಂದಪುರಂ ರೈಲು ನಿಲ್ದಾಣದ ಹೆಸರು ಪ್ರಸಿದ್ದಿಗೆ ಬಂದಿದ್ದೇ ವಾಸಣ್ಣ ತಯಾರಿಸುತ್ತಿದ್ದ ಬಿಸಿ ಬಿಸಿ ಗರಿ ಗರಿ ಉದ್ದಿನ ವಡೆಯಿಂದ. ಖ್ಯಾತ ಚಲನಚಿತ್ರ ನಟ ಡಾಕ್ಟರ್ #ರಾಜಕುಮಾರ್, ಮುಖ್ಯಮಂತ್ರಿ #ರಾಮಕೃಷ್ಣಹೆಗಡೆ ಕೂಡ ವಾಸಣ್ಣರ ಉದ್ದಿನ ವಡೆ ಸವಿದವರು ಈ ಮಾರ್ಗದಲ್ಲಿ ಆಗಮಿಸುವ ಎಲ್ಲಾ ಸೆಲೆಬ್ರಿಟಿಗಳು -ಜನ ಸಾಮಾನ್ಯರೂ ವಾಸಣ್ಣನ ರೈಲ್ವೆ ಕ್ಯಾಂಟೀನ್ ನ ಉದ್ದಿನ ವಡೆಗೆ ಫಿದಾ ಆಗಿದ್ದರು. ವಾಸಣ್ಣ ದಂಪತಿಗಳು ಡಬಲ್ ಘೋಡಾ ಬ್ರಾಂಡಿನ ಉತ್ಕೃಷ್ಟ ಉದ್ದಿನ ಬೇಳೆ ನೆನೆಸಿ ನಂತರ ಅದನ್ನು ತಿರುವ ಕಲ್ಲಿನಲ್ಲಿ ಕೈಯಲ್ಲಿ ಅರೆದು ಕಟ್ಟಿಗೆ ಒಲೆಯಲ್ಲಿ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ಕರಿದು ಮುತ್ತುಗದ ಎಲೆಯಲ್ಲಿ ಹಾಕಿ ಜೊತೆಗೆ ಕಾಯಿ ಚಟ್ನಿ ಸುರಿದು ಕೊಡುತ್ತಿದ್ದರು. ಆ ಕಾಲದಲ್ಲಿ ಗ್ರೈಂಡರ್, LPG ಗ್ಯಾಸ್ ಸ್ಟವ್ ನಮ್ಮ ಊರಿಗೆ ಬಂದಿರಲಿಲ್ಲ. ಆಗ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಒಂದು ರೈಲು ಇನ್ನೊಂದು ಬೆಂಗಳೂರಿಂದ ತಾಳಗುಪ್ಪಕ್ಕೆ ಒಂದು ರೈಲು ಬರುತ್ತಿತ್ತು ಇದೇ ರೀತಿ ರಾತ್ರಿ ಎರೆಡು ರೈಲು ಇವೆಲ್ಲವೂ ಕಲ್ಲಿದ್ದಲು ಉರಿಸಿ ಉುಗಿಯಿಂದ ಚಲಿಸುತ್ತಿದ್ದ ಉಗಿ ಬಂಡಿಗಳಾದ್ದರಿಂದ ಅದಕ್ಕೆ ಬೇಕಾದ ನೀರು ಆನಂದಪುರ0 ನಿಲ್ದಾಣದಲ್ಲೇ ತುಂಬಿಸಿಕೊಳ್ಳ ಬೇಕಾದ್ದರಿಂದ ಹೆಚ್ಚು ಸಮಯ ರೈಲು ನಿಲ್ಲುತ್ತಿತ್ತು. ಪ್ರಯಾಣಿಕರು ವಾಸಣ್ಣನ ಕ್ಯಾಂಟೀನ...