ಈ_ಸಾವು_ನ್ಯಾಯವೇ?
ನಮ್ಮೂರ ಯುವ ಉದ್ಯಮಿ ಜಾವೀದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬೇಸರ ತರಿಸಿತು.
ಸಾಗರ ತಾಲೂಕಿನ ಆನಂದಪುರಂನ #ವಾಜೀದ್_ಸಾಹೇಬರು ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷರಾಗಿದ್ದವರು ಅವರು ಆನಂದಪುರಂನ ಅಭಿವೃದ್ಧಿಗೆ ಶ್ರಮಿಸಿದವರು ಮತ್ತು ಪ್ರಸಿದ್ಧ ವ್ಯಕ್ತಿ ಆದವರು.
ಇವರ ಪುತ್ರರಾದ #ಜಾವೀದ್ ಆನಂದಪುರಂನಲ್ಲಿ ಹಾರ್ಡವೇರ್ ಮತ್ತು ಪೈಂಟ್ ಗಳ ದೊಡ್ದ ವ್ಯಾಪಾರಸ್ಥರಾಗಿದ್ದವರು.
ಮೊನ್ನೆ ಶಿಕಾರಿಪುರದಲ್ಲಿ ಜಾಗದ ರಿಜಿಸ್ಟ್ರೇಶನ್ ಗೆ ಹೋದವರು ವಾಪಾಸು ಬರುವಾಗ ಬೈಕಿನಿಂದ ಬಿದ್ದು ತಲೆಗೆ ಪೆಟ್ಟಾಗಿ ನಂತರ ಶಿವಮೊಗ್ಗ ಮತ್ತು ಬೆಂಗಳೂರಿಗೆ ಒಯ್ದರೂ ಫಲಕಾರಿ ಆಗಲಿಲ್ಲ.
ಇವರದ್ದೇ ಕಾರು ಇದ್ದರೂ ಇವರು ಬೈಕಲ್ಲಿ ಪ್ರಯಾಣಿಸಿದ್ದಾರೆ.
ಈಗಿನ ಯುವ ಜನಾಂಗ ಬೈಕ್ ಸವಾರಿ ಮಾಡುವುದು ಬಿಡುವುದೇ ಒಳಿತು, ಮಾಡಿದರೂ ಸರಿಯಾದ ಹೆಲ್ಮೆಟ್ ಸರಿಯಾಗಿ ಹೆಲ್ಮೆಟ್ ಬೆಲ್ಟ್ ಹಾಕಿ ಧರಿಸಬೇಕು.
ಇವತ್ತು ಖ್ಯಾತ ತಜ್ಞ ಈಜು ತರಬೇತಿದಾರರಾದ ಸಾಗರದ #ಹರೀಶ್_ನವಾತೆ ಪೋನ್ ಮಾಡಿ ಯುವ ಉದ್ಯಮಿ ಜಾವೀದ್ ಅಪಘಾತದಿಂದ ಮೃತರಾದ ಸುದ್ದಿ ಕೇಳಿ ಫೋನಾಯಿಸಿದ್ದರು, ಅವರು ಆನಂದಪುರಂನ #ಚಂಪಕ_ಸರಸ್ಸುವಿನಲ್ಲಿ ನಮ್ಮೂರ ಯುವಕರಿಗೆ ಈಜು ತರಬೇತಿ ನೀಡುವಾಗ ಉದ್ಯಮಿ ಜಾವೇದ್ ನೀಡಿದ ಸಹಕಾರ ಸ್ಮರಿಸಿದ್ದರು.
ಈಜು ತರಬೇತಿದಾರರಿಗೆ ಸುರಕ್ಷಸಾಮಗ್ರಿ ತಯಾರಿಸಲು ಜಾವೇದ್ ತಮ್ಮ ಗೋಡಾನಿನ ಬೀಗ ಅವರ ಕೈಯಲ್ಲೇ ಕೊಟ್ಡಿದ್ದರಂತೆ ಮತ್ತು ಆನಂದಪುರಂನ ಯುವಕರ ಈಜು ತರಬೇತಿ ಕಾರ್ಯಕ್ರಮಕ್ಕೆ ಕೈತುಂಬಾ ದೇಣಿಗೆ ಕೂಡ ನೀಡಿದ್ದರೆಂದು ಸ್ಮರಿಸಿದ್ದರು.
ಇಹಲೋಕ ತ್ಯಜಿಸಿದ ಯುವ ಉದ್ಯಮಿ ಜಾವೇದರಿಗೆ ದೇವರು ಸದ್ಗತಿ ಸ್ವರ್ಗ ಪ್ರಾಪ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#harishnavathe #swimming #champakasarassu #javed #vajidsab #anandapuram #hardwear
#paints
Comments
Post a Comment