ನೀಟ್_ಪರೀಕ್ಷೆ 2026 ಪ್ರಶ್ನೆ ಪತ್ರಿಕೆಗಳ ಸೋರುವಿಕೆ ಮೂಲಕ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಅನರ್ಹತೆ. ಬದಲಾಗ ಬೇಕಾಗಿದೆ ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತಾಗಬೇಕು. #National_Eligibility_cum_Entrance Test NEET ನ ಪೂರ್ಣ ರೂಪವೆಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಇದನ್ನು ಸಾಮಾನ್ಯವಾಗಿ NEET (UG) ಎಂದು ಕರೆಯಲಾಗುತ್ತದೆ. ಇದರ ಅರ್ಥ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ). ಇದು MBBS, BDS, BAMS, BSMS, BUMS, ಮತ್ತು BHMS ಸೇರಿದಂತೆ ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಭಾರತದಲ್ಲಿ ಪ್ರಾಥಮಿಕ, ಏಕ-ಗವಾಕ್ಷಿ (single window) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ ಇದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಾರ್ಷಿಕವಾಗಿ ನಡೆಸುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಈ ವರ್ಷದ NEET 2026 ಮರು ಪರೀಕ್ಷೆ ನಡೆಸಲಿದ್ದಾರೆ. ಮೇ 12, 2026 ರಂದು NTA ಘೋಷಿಸಿದಂತೆ ಹೊಸ ದಿನಾಂಕಗಳು ಮತ್ತು ಪರಿಷ್ಕೃತ ಪ್ರವೇಶ ಪತ್ರದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತಾರೆ. ಸರ್ಕಾರ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವನ್ನು ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಿದೆ. NTA...