Blog number 1333. ನೆಂಪೆ ದೇವರಾಜರ ಬೇಟಿಯಲ್ಲಿ 2000 ಇಸವಿಯಲ್ಲಿ ನಾವೆಲ್ಲ ಸೇರಿ ಕಾಗೋಡು ಸುವರ್ಣ ಜ್ಯೋತಿ ಕಾಗೋಡಿನಿಂದ ಕಡಿದಾಳು ಮಂಜಪ್ಪರ ಸಮಾದಿವರೆಗೆ ಜಾಥಾದಲ್ಲಿ ಒಯ್ದ ನೆನಪು
#ನೆಂಪೆದೇವರಾಜ್_ಮತ್ತು_ನನ್ನ_ಬೇಟಿ #ಇಪ್ಪತೈದು_ವರ್ಷದ_ನಂತರ #ಸಾಮಾಜಿಕ_ಜಾಲತಾಣದಲ್ಲಿ_ನಿತ್ಯ_ಸಂವಾದದಲ್ಲಿದ್ದೇವೆ. #ನೆಂಪೆದೇವರಾಜ್_ಆದ್ಯಾಪಕ_ಪತ್ರಕರ್ತ_ಸಾಹಿತಿ_ಜನಪರಹೋರಾಟಗಾರ_ರಾಜಕಾರಣಿ_ಕೃಷಿಕ_ಹೀಗೇ_ಸಾಗುತ್ತದೆ_ಸಾಲು.... #ಕಾಗೋಡು_ಹೋರಾಟದ_ಕಾಗೋಡು_ಸುವರ್ಣ_ಜ್ಯೋತಿ_ಜಾತಕ್ಕೆ_ತಡೆಯುವ_ಪ್ರಯತ್ನ_ನಡೆದಿತ್ತು #ರಿಸರ್ವ್_ಪೋಲಿಸ್_ವಾಹನದ_ರಕ್ಷಣೆಯಲ್ಲಿ_ಕಾಗೋಡು_ಸುವರ್ಣ_ಜ್ಯೋತಿ_ಉದ್ಫಾಟನೆ #ಸಾಗರ_ತಾಲ್ಲೂಕಿನ_ಕಾಗೋಡಿನಿಂದ_ತೀರ್ಥಹಳ್ಳಿಯ_ಕಡಿದಾಳು_ಮಂಜಪ್ಪರ_ಸಮಾದಿವರೆಗೆ #ಇದೆಲ್ಲ_ನೆನಪುಗಳಾಯಿತು. 1997 ರಲ್ಲಿ ನೆಂಪೆ ದೇವರಾಜ್ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ವಾಸವಾಗಿದ್ದರು ಕಾರಣ ಅವರ ಪತ್ನಿ ಸಮೀಪದ ಗರ್ತಿಕೆರೆಯ ಪ್ರೌಡ ಶಾಲೆಯಲ್ಲಿ ಉದ್ಯೋಗ ಮಾಡುತ್ತಿದ್ದರು, ನೆಂಪೆ ದೇವರಾಜ್ ರಿಪ್ಪನ್ ಪೇಟೆಯಿಂದ ನಿತ್ಯ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಪತ್ರಿಕೋದ್ಯಮ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗುತ್ತಿದ್ದರು ಆ ಸಂದರ್ಭದಲ್ಲಿ ನನ್ನ ರಾಜಕೀಯ ಹೋರಾಟಗಳ ಚರ್ಚೆ ಮಾಡುತ್ತಿದ್ದ ಕೇಂದ್ರ ರಿಪ್ಪನ್ ಪೇಟೆ ಆಗಿತ್ತು ಅಲ್ಲಿನ ಅನೇಕ ಜನಪರ ಮುಖಂಡರು ನನಗೆ ಸಲಹೆ-ಸಹಕಾರ ನೀಡುತ್ತಿದ್ದರು. ರಿಪ್ಪನ್ ಪೇಟೆಯಲ್ಲಿ ಪತ್ರಕರ್ತ ತ. ಮ.ನರಸಿಂಹರ ಬ್ಯಾಚುಲರ್ ಹೊಂನಲ್ಲಿ ನೆಂಪೆ ದೇವರಾಜ್ ಕೆಲವು ಬಾರಿ ಸೇರಿದ್ದೆವು. ನಂತರ ಸುಮಾರು 25 ವರ್ಷದ ನಂತರವೇ ಮೊನ್...