Skip to main content

Posts

Showing posts with the label Anandapuram Patel's and Shanubhogas

ಭಾಗ - 15, ಆನಂದಪುರಂ ಭಾಗದ ಕೊನೆಯ ಅವಧಿಯ ಪಟೇಲರು ಮತ್ತು ಶ್ಯಾನುಬೋಗರುಗಳು

#ಭಾಗ_15 #ಸ್ವಾತಂತ್ರ್ಯಪೂರ್ವದ_ಆನಂದಪುರಂನ_ಕೊನೆಯ_ಪಟೇಲರು_ಶಾನುಬೋಗರು #ಆನಂದಪುರದ_ಪಟೇಲರಾಗಿದ್ದ_ಪೋಸ್ಟ್_ಈರಣ್ಣರ_ತಂದೆ_ವೀರಭದ್ರಶೆಟ್ಟರು #ಯಡೇಹಳ್ಳಿ_ಪಟೇಲರಾಗಿದ್ದ_ಸೋಮಶೇಖರಗೌಡರು #ಆಚಾಪುರ_ಪಟೇಲರಾಗಿದ್ದ_ಮುರುಗೆಪ್ಪಗೌಡರು #ಮಲಂದೂರಿನ_ಪಟೇಲರಾಗಿದ್ದ_ಚೆನ್ನಪ್ಪಗೌಡರು #ಹೊಸೂರಿನ_ಪಟೇಲರಾಗಿದ್ದ_ಉಳ್ಳೂರು_ಶ್ರೀಕಂಠಯ್ಯ #ಶ್ಯಾನುಬೋಗರಾದ_ವಿಜೇಂದ್ರರಾಯರು_ಮತ್ತು_ಗುಂಡಾಜೋಯಿಸರು.     1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬ್ರಿಟೀಷ್ ಆಡಳಿತದ ಪಟೇಲ್ ಗಿರಿ ಮತ್ತು ಶ್ಯಾನುಬೋಗಿಕೆ ಅಂತ್ಯ ಕಂಡಿತು ಆಗ ಆನಂದಪುರದಲ್ಲಿ ಪಟೇಲರಾಗಿದ್ದವರು ವೀರಭದ್ರ ಶೆಟ್ಟರು ಇವರು ಪೋಸ್ಟ ಈರಣ್ಣರ ತಂದೆ, ಪೋಸ್ಟ್ ಈರಣ್ಣರ ಮಗ ಚಂದ್ರು ಈಗ ಆನಂದಪುರದ ಬಸವನ ಬೀದಿ ಮನೇನಲ್ಲಿ ವಾಸ ಇದ್ದಾರೆ.   ವೀರಭದ್ರ ಶೆಟ್ಟರು ಶ್ರೀಮಂತರು ಆಗಿದ್ದರು ಆ ಕಾಲದಲ್ಲಿ ಆನಂದಪುರಂಗೆ ಮೊದಲ ಲಾರಿ ಖರೀದಿಸಿ ತಂದಿದ್ದವರು ಇವರಿಗೆ ಶ್ಯಾನುಬೋಗರು ಹುಲಿಮರಡಿ ಗುಂಡಾ ಜೋಯಿಸರೆಂದೇ ಕರೆಯುವ ಕೃಷ್ಣಸ್ವಾಮಿ ಜೋಯಿಸರು.   ಕೃಷ್ಣಸ್ವಾಮಿ ಜೋಯಿಸರು ತೀರ್ಥಹಳ್ಳಿ ತಾಲ್ಲೂಕಿನ ಆರಗ ಮೂಲದವರು ಇವರ ತಂದೆ ಹುಚ್ಚರಾಯಸ್ವಾಮಿಗೆ ಮೂವರು ಮಕ್ಕಳು. ದೊಡ್ಡವರು ಕೃಷ್ಣ ಸ್ವಾಮಿ ಜೋಯಿಸರು, ಎರಡನೆಯವರು ಸೂಯ೯ನಾರಾಯಣ ಜೋಯಿಸರು ಮತ್ತು ಮೂರನೆಯವರು ನಾಗರಾಜ ಜೋಯಿಸರು.    ಕೃಷ್ಣಸ್ವಾಮಿ ಜೋಯಿಸರು ಆನಂದಪುರಂ ಪಟೇಲರಾದ ವೀರಭದ್ರ...