ಕೊರಾನಾ ಲಾಕ್ ಡೌನ್ ಡೈರಿ 2020 ಬಡವರು ಗ್ರಾಮೀಣ ಪ್ರದೇಶದಲ್ಲಿ ಇಲ್ಲವಾ? ನಿತ್ಯ ಪೇಟೆ ಪ್ರದೇಶದಲ್ಲಿ ಆಹಾರದ ಕಿಟ್ ವಿತರಣೆ ಉದ್ದೇಶ ಏನು? ಇಂತಹ ಪ್ರಚಾರ ಕಾಯ೯ಕ್ರಮದಲ್ಲಿ ಕೊರಾನ ವೈರಸ್ ಹರಡುವ ಸಂಭವ ಇಲ್ಲವೇ?
#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_18 #ದಿನಾ0ಕ_20_ಏಪ್ರಿಲ್_2020 *ಬಡವರು ಹಳ್ಳಿಗಳಲ್ಲಿ ಇಲ್ಲವೆ? ಪಟ್ಟಣಗಳಲ್ಲಿ ಮಾತ್ರವೇ? * ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಿದ್ದು, ಚುನಾವಣೆ ಮು೦ದೆ ಹೋಗಿದ್ದು ಮತ್ತು ಮೀಸಲಾತಿಗೆ ಸುಗ್ರೀವಾಜ್ಞ ಮಾಡಿದ್ದರಿಂದ ಹಳ್ಳಿಗಳಲ್ಲಿ ಪ್ರಚಾರಕ್ಕಾಗಿ ದಾನ ಮಾಡುವವರು ಇಲ್ಲವಾಗಿರ ಬಹುದಾ? ಇಂತಹ ಒಂದು ಅನುಮಾನ ಕಾಡುತ್ತಿದೆ ಏಕೆಂದರೆ ನಿತ್ಯ ಪತ್ರಿಕೆ, ಸಾಮಾಜಿಕ ಜಾಲ ತಾಣದಲ್ಲಿ ಇಂತಹ ಸ೦ಘ ಅಥವ ಸಂಸ್ಥೆ ಮುಖಂಡರು 600 ಜನರಿಗೆ - 1000 ಜನರಿಗೆ ಆಹಾರದ ಕಿಟ್ ನೀಡಿದರು ಎಂಬ ಸುದ್ದಿ, ಮರುದಿನ ಅಲ್ಲಿಯೇ ಇನ್ನೊಂದು ಸಂಸ್ಥೆ ವಿತರಣೆ ಹೀಗೆ ನಿರಂತರ ದಾನಿಗಳಿ೦ದ ಆಹಾರದ ಕಿಟ್ ವಿನಿಯೋಗದ ಕಾಯ೯ಕ್ರಮ ನಡೆದಿದೆ. ಸಕಾ೯ರದಿ೦ದ ನಿತ್ಯ ಹಾಲು ಮದ್ಯದಲ್ಲಿ ರಾಜಕಾರಣಿಗಳು ರೈತರಿOದ ತರಕಾರಿ ಖರೀದಿಸಿ ತರಕಾರಿ ವಿತರಣೆ ಕೂಡ ನಡೆದಿದೆ. ಮಧ್ಯಾಹನ ಉಚಿತ ಊಟ ಕೂಡ ಪ್ರಾರಂಭ ಆಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಗೌಜು ಇಲ್ಲ ಇಲ್ಲದವರಿಗೆ ಬೇಕಾಗಿದ್ದು ಖರೀದಿಸಲು ಸಂಪಾದಿಸುತ್ತಾರೆ ಅವರೆಲ್ಲರಿಗೆ ಸದ್ಯ ಸ್ವ ಸಹಾಯ ಸಂಘ, ಮೈಕ್ರೊ ಪೈನಾನ್ಸ್ ಮತ್ತು ದಮ೯ಸ್ಥಳ ಸಂಘಗಳ ವಾರದ ಹಣದ ಕಂತು ಕಟ್ಟುವುದು ತಾತ್ಕಾಲಿಕವಾಗಿ ಮುಂದೆ ಹೋಗಿದ್ದು ದೊಡ್ಡ ನಿರಾಳ ಅನ್ನಿಸಿದೆ. ಸಕಾ೯ರದ ಪಡಿತರ ಅವರಿಗೆ ದೊಡ್ಡ ಪಾಲಿನ ಕೊಡುಗೆ ಆಗಿದೆ, ಒಂದೆರೆಡು ತಿ...