Skip to main content

Posts

Showing posts from October, 2017

ವೀಳೆಯದ ಎಲೆ ಕೀಳುವ ಕೈ ಬೆರಳ ಕತ್ತಿ.

#ವೀಳೆಯದ ಎಲೆ ಕತ್ತಿ,Betel leaves knife# ಹಲವಾರು ರೀತಿಯ ಕತ್ತಿ ದೈನಂದಿನ ಜೀವನದಲ್ಲಿ ನೋಡಿದ್ದೇನೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆದರೆ ಈ ಕತ್ತಿ ನೋಡಿದ್ದು ಮಾತ್ರ ಇತ್ತೀಚಿಗೆ    ಹೊಸನಗರದ ಬಿಲ್ ಸಾಗರದ ವಿದ್ಯುತ್ ಚಾಲಿತ ಬೋಟು ಚಲಾಯಿಸುವ ಶಂಕರ ಮೊನ್ನೆ ಬಂದಿದ್ದರು ಅವರು ನನಗೆ ಪರಿಚಯ ಆಗಿದ್ದು ಶಿವಮೊಗ್ಗದ ಸಾಹಸಿ ಆ.ನಾ.ವಿಜೇ೦ದ್ರರಿಂದ ನಮ್ಮ ಊರ ಕೆರೆ ಸ್ವಚ್ಚತೆಗೆ ಇವರು ಮತ್ತು ಇವರ ಡಿಸೇಲ್ ಬೋಟ್ ತಂದಿದ್ದ ಪರಿ ಚಯ.     ಮೊನ್ನೆ ನನ್ನ ಆಪೀಸಿಗೆ ಬಂದು ನನ್ನ ಪರಿಚಯ ಇದೆಯಾ ಅಂದರು, ಅರೆ ಬಿಲ್ ಸಾಗರದ ಶಂಕರ್ ರವರೆ ನಿಮ್ಮನ್ನ ಮರೆಯಲು ಹೇಗೆ ಸಾಧ್ಯ ಅಂತ ಒಳ ಕರೆದು ಕೂರಿಸಿ ಚಹಾ ಆತಿಥ್ಯ ನೀಡಿ ದೂರ ಹೋಗಿದ್ದಿರಿ ಅಂದೆ, ಹೌದು ಬೆಳಿಗ್ಗೆನೆ ಹೊನ್ನಾಳಿಗೆ ಹೋಗಿದ್ದೆ ವೀಳೆಯದೆಲೆ ಕತ್ತಿ ತರಲು ಅಂದರು, ಹಾಗೇ ಅದು ಇದು ಬೇರೆ ವಿಚಾರ ಮಾತಾಡಿ ಹೊರಟರು ಅವಾಗ ಕೇಳಿದೆ ನಿಮ್ಮ ಊರಲ್ಲಿ ಕತ್ತಿ ಮಾಡೋರು ಇಲ್ಲವಾ? ಅಷ್ಟು ದೂರ ಹೋಗಿದ್ದಿರಲ್ಲ ಅಂದಾಗ ಈ ಕತ್ತಿ ರಹಸ್ಯ ಹೊರಬಂತು.     ಇದು ಇಲ್ಲೆಲ್ಲೂ ಸಿಗುವುದಿಲ್ಲ, ಇದಿಲ್ಲದಿದ್ದರೆ ಎಲೆ ಕಟಾವು ಸಾಧ್ಯವಿಲ್ಲ ಅಂದರು. ಅದು ಯಾವ ರೀತಿ ಕತ್ತಿರಿ ಅಂದೆ, ತಡೆಯಿರಿ ತಂದು ತೋರಿಸುತ್ತೇನೆ ಅಂತ ಅವರ ಬೈಕಿನ ಹತ್ತಿರ ಹೋಗಿ ತಂದರು, ನಾನು ನಿತ್ಯ ಬಳಕೆಯ ಬೇರೆ ವಿನ್ಯಾಸದ ಕತ್ತಿ ಅಂತ ಮಾಡಿದ್ದೆ ಆದರೆ ಈ ಕತ್ತಿ ನೋಡಿ ಆಶ್ಚಯ೯ ಆಯಿತು.   ಇದು ಕೈಯ ಬೆರಳಿಗೆ ಅಳವಡಿಸಿಕೊಂಡು ಅಡಿ

Dr N.S.Vishwapathy shastri real astrologer.

ಡಾII ಎನ್.ಎಸ್. ವಿಶ್ವಪತಿ ಶಾಸ್ತಿ ಗಳು ಪ್ರಖ್ಯಾತ ಜೋತಿಷಿಗಳು ಆದರೆ ಪ್ರಚಾರದಿಂದ ದೂರ ದೇವೆಗೌಡರು ಪ್ರದಾನ ಮಂತ್ರಿ ಆದಾಗ ಇವರು ಪ್ರಮುಖರು, ಆದಿಚುಂಚನ ಗಿರಿಯ ಹಿರಿಯ ಸ್ವಾಮಿಗಳಿದ್ದಾಗ ಇವರು ಪ್ರತಿ ವಷ೯ ಅಚ೯ಕ ತರಬೇತಿ ಪ್ರಾರಂಭಿಸಿದ್ದರು, ಈಗಲೂ ಪ್ರತಿ ವಷ೯ ನೂರಾರು ಜನ ಅಚ೯ಕ ತರಬೇತಿ ಹೊಂದುತ್ತಾರೆ ವಿಶೇಶವೆಂದರೆ ಶೂದ್ರರು, ಮುಸ್ಲಿಂರೂ ಹೆಚ್ಚು ತರಬೇತಿಗೆ ಬರುತ್ತಾರೆ.   ನಮ್ಮ ಊರಲ್ಲಿ ಸಿದ್ಧಿವಿನಾಯಕ ದೇವಸ್ಥಾನ ಇವರ ನೇತೃತ್ವದಲ್ಲಿ ಪ್ರಾರಂಭಿಸಿದಾಗ ಸಾಮೂಹಿಕ ಬೋಜನದಲ್ಲಿ ಇವರು ಊಟ ಮಾಡಿದಾಗ ಸ್ಥಳೀಯ ಇವರ ಸ್ವಜಾತಿಯವರು ವಿರೋದಿಸಿದಾಗ ಇವರು ಅವರಿಗೆ ಪ್ರಶ್ನೆ ಮಾಡಿದರು ಏನೆಂದರೆ .....    ನೀವು ಮಸಾಲೆ ದೋಸೆ, ಪಾನಿಪೂರಿ ಹೋಟಲಲ್ಲಿ ತಿಂದಿದೀರಾ ? ಹಾಗಿದ್ದ ಮೇಲೆ ಮಡಿ ಏಕೆ? ಇಲ್ಲಿ ಭಕ್ತರು ಭಕ್ತಿಯಿಂದ ಸ್ನಾನ ಮಾಡಿ ಅಡುಗೆ ಮಾಡಿದ್ದಾರೆ ಜಾತಿ ಕಾರಣದಿಂದ ಇಲ್ಲಿ ಬಿಟ್ಟು ಹೋಟಲ್ಗೆ ಹೋಗ್ತೀರಾ ಅಲ್ಲಿ ಅಡುಗೆ ಮಾಡಿಟ್ಟು ಸ್ನಾನಗೆ ಹೋಗ್ತಾರೆ ಅಲ್ಲಿ ತಿಂತಿರಾ ಇಲ್ಲಿ ಜಾತಿ ಅಂತಿರಾ ಅಂದಿದ್ದರು.    ದೇವರು ಒಲಿದಿದ್ದು ಶೂದ್ರ , ದಲಿತರಿಗೆ ಪುರೋಹಿತರಿಗಲ್ಲ, ನಿಮ್ಮ ಆಹಾರ ಮುಖ್ಯ ಅಲ್ಲ ಭಕ್ತಿ ಮುಖ್ಯ, ಮೀನು ಮಾಂಸ ತಿಂದರೆ ದೇವಸ್ಥಾನಕ್ಕೆ ಹೋಗಬಾರದು ಅನ್ನೋದು ತಪ್ಪು ನೀವು ತಿ೦ದ ಮಾಂಸಹಾರ 48 ಗಂಟೆ ನಿಮ್ಮ ಹೊಟ್ಟೆಯಲ್ಲಿ ಇರುತ್ತೆ ಅಂತ ಹೇಳಿ ನಮ್ಮ ಊರ ಶೂದ್ರ ಭಕ್ತರಲ್ಲಿನ ಮೂಡನಂಬಿಕೆ ಆಚರಣೆ ಕಡಿಮೆ ಮಾಡಿದರು, ಇದೇ ರೀತಿ ಸ್

TIPPU SULTHAN AND ANANDAPURAM

#ಟಿಪ್ಪೂವಿನ ಬಗ್ಗೆ ನಮ್ಮ ಊರಿನ ಚರಿತ್ರೆ ನೋಡಿ#     ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಕೋಟೆಯನ್ನ ಬ್ರಿಟಿಷರು ಟಿಪ್ಪು ವಿನ ಹೈದರ್ ಖಾನ್ ರಿಂದ ವಶಪಡಿಸಿಕೊಂಡು ಅವರ ಧ್ವಜ ಹಾರಿಸುತ್ತಾರೆ ನಂತರ ಸುಂದರವಾದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕೋಟೆಯ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ( ಕಾರಣ ಬ್ರಿಟಿಷ್ ಸೈನಿಕರ ಅನಾಚಾರ ) ಈ ವಿಚಾರ ತಡವಾಗಿ ಟಿಪ್ಪೂವಿಗೆ ಗೊತ್ತಾಗುತ್ತದೆ ತಕ್ಷಣ ಶ್ರೀರಂಗಪಟ್ಟಣದಿಂದ ಸೈನ್ಯದ ತುಕಡಿ ಕಳಿಸಿ ಬ್ರಿಟಿಷ್ ಸೈನಿಕರನ್ನ ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಯಿಂದ ಅವರನ್ನೆಲ್ಲ ಕೊಲ್ಲುತ್ತಾನೆ (ಇದು ಗೆಜೆಟೆಯರ್ ನಲ್ಲಿ ದಾಖಲಾದ ವಿಷಯ) .      ಇದೇ ಟಿಪ್ಪು ಆನಂದಪುರದ ಮಾಗ೯ವಾಗಿ ಬಿದನೂರು ಕೋಟೆಗೆ ಸಂಚಾರ ಹೋಗುವಾಗ ಆನಂದಪುರದ ಮಸೀದಿಗೆ ಪ್ರಾಥ೯ನೆ ಸಲ್ಲಿಸುತ್ತಾರೆ ಅಂತ ಹಿಂದಿನ ದಿನ ಸುದ್ದಿಯಾದಾಗ ಆನಂದಪುರದ ಅಗ್ರಹಾರದ ಪುರೋಹಿತರು ಹೆದರುತ್ತಾರೆ, ರಾತ್ರೋರಾತ್ರಿ ಶ್ರೀ ರಾಮ ದೇವರನ್ನ ಶ್ರೀರಂಗನಾಥ ಎಂದು ಮರು ನಾಮಕರಣ ಮಾಡಿ ಮರುದಿನ ಮಸೀದಿಗೆ ಬರುವ ಟಿಪ್ಪುವಿಗೆ ಸ್ವಾಗತ ಮಾಡಿ ತಮ್ಮ ದೇವಾಲಯಕ್ಕೆ ಆಹ್ವಾನಿಸುತ್ತಾರೆ, ಟಿಪ್ಪು ಯಾವ ದೇವರು ಅಂತ ಕೇಳಿದಾಗ ಶ್ರೀರಂಗನಾಥ ಅಂದಾಗ ಅಚ್ಚಾ ಚಲೋ ಅಂತ ಹೇಳಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ , ಪುರೋಹಿತರಿಗೆ ಮತ್ತು ಇಡೀ ಅಗ್ರಹಾರಕ್ಕೆ ದೇಣಿಗೆ ನೀಡಿದ ಚರಿತ್ರೆ ಇದೆ.      ಒಂದು ಊರಿನಲ್ಲಿ ನಡೆದ

P.R.SOMAN MEMORIAL PERSON.

# ಶ್ರದ್ದಾ೦ಜಲಿಗಳು# ಪಿ.ಆರ್. ಸೋಮನ್ ನಿವೃತ್ತ ಸೈನಿಕರು, ಕೇರಳ ಮೂಲದವರಾದರೂ ಜೀವನದ ಹೆಚ್ಚಿನ ಅವದಿ ಸಾಗರ ಪಟ್ಟಣದಲ್ಲಿ, ಇವರ ಅಣ್ಣ ಬಾಲ ಕೃಷ್ಣ ಮೇಸ್ತ್ರೀ ಸಾಗರದಲ್ಲಿ ಹೆಸರಾಂತ ಗುತ್ತಿಗೆದಾರರಾಗಿದ್ದರು.   ಸಾಗರದ ತೀ.ನಾ.ಶ್ರೀನಿವಾಸರ ಜೊತೆ 1990ರಲ್ಲಿ ಮೊದಲ ಭೇಟಿ ಅವತ್ತು ಅವರ ಮನೆಯಲ್ಲಿನ ಪ್ರತಿ ವಸ್ತು, ಪೀಟೋ ಪರಣಗಳನ್ನ ಅತ್ಯಂತ ಶಿಸ್ತು ಬದ್ದವಾಗಿ ಜೋಡಿಸಿದ್ದು ನೋಡಿ ಸೋಜಿಗ ಪಟ್ಟಿದ್ದೆ.    ಕಾಂಗ್ರೇಸ್ ಪಕ್ಷವನ್ನ ಪುನರ್ ಸಂಘಟಿಸಿ ಪುನಃ ಬಹಳ ವಷ೯ಗಳ ನಂತರ ಕಾಗೋಡರನ್ನ ಕರೆತರುವ ಆಹಮದ್ ಆಲೀ ಖಾನರ ಯೋಜನೆಯಲ್ಲಿ ಪಿ.ಆರ್.ಸೋಮನ್ ತುಂಬಾ ಶ್ರಮವಹಿಸಿದ್ದರು.   1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸ್ಪದಿ೯ಸಿದ್ದಾಗ ಬೆಂಬಲಿಸಿ ಅವರ ಟ್ರಾಕ್ಸ್ ಒಂದನ್ನ ಪ್ರಚಾರಕ್ಕಾಗಿ ಉಚಿತವಾಗಿ ನೀಡಿದ್ದನ್ನ ನಾನು ಯಾವತ್ತೂ ಮರೆತಿಲ್ಲ.   ಇವರ ಶ್ರೀಮತಿ ಅತಿಥಿ ಸತ್ಕಾರದಲ್ಲಿ ಪತಿಯ ಆರೈಕೆಯಲ್ಲಿ ಮುಂದು ಈ ಆದಶ೯ ದಂಪತಿಗಳಿಗೆ ಇರುವ ಇಬ್ಬರು ಗಂಡು ಮಕ್ಕಳು ಕೂಡಾ ಸಜ್ಜನರು.   ಸಾಗರದ ರಾಜಕಾರಣದಲ್ಲಿ ಪಿ.ಆರ್.ಸೋಮನ್ ಮತ್ತು ದಿ II ಕೋಯಾರ ಹೆಸರು ಚಿರ ಸ್ಥಾಯಿ ಪಕ್ಷ ಯಾವುದೇ ಇರಲಿ, ಇಬ್ಬರೂ ಕೇರ೪ ಮೂಲದವರಾದರೂ ಅವರ ಕಾಯ೯ಕ್ಷೇತ್ರ ಕನ್ನಡ ನಾಡಾದ ಸಾಗರ ಆಗಿತ್ತು. ಇವತ್ತಿನ ಪತ್ರಿಕೆಯಲ್ಲಿ ಸೋಮನ್ ವಿದಾಯ ಓದಿ ವಿಷಾದದಿಂದ ಈ ಸಂತಾಪ ಬರೆದೆ, ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗು ಅವರ ಕುಟುಂಬಕ್ಕೆ ದುಖ:

#ಮುಟ್ಟಿನ ಬಗ್ಗೆ ಸಮಾಜದ ಮೂಡನಂಬಿಕೆ#

# ಮುಟ್ಟಿನ ಬಗ್ಗೆ ಮಹಿಳೆಯರಿಗೆ ಜಾಗೃತಿ# ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯಲ್ಲಿ ದೀಪಾವಳಿ ಹಬ್ಬದಲ್ಲಿ ಗ್ರಾಮಗಳಲ್ಲಿ ಗಾಮದ ಹಬ್ಬ / ನೋನಿ ಎಂಬ ಸಾಮೂಹಿಕವಾಗಿ ಗ್ರಾಮದ ಎಲ್ಲಾ ದೇವಾನು ದೇವತೆಗಳಿಗೆ (ಇದು ಕೆಲ ಕಡೆ ನೂರಕ್ಕೂ ಹೆಚ್ಚು ) ಪೂಜೆ ನಂತರ ಬಲಿ ನೀಡುವ ಕ್ರಮ ಇದೆ. ಮೇಲ್ಜಾತಿಯವರು ಈ ಪೂಜೆಗೆ ಸಹಕರಿಸುತ್ತಾರೆ, ಬಲಿಗೆ ತರುವ ಕೋಳಿ ಕುರಿಗೆ ತಮ್ಮ ಪಾಲಿನ ಹಣ ಗ್ರಾಮದ ಜನ ನಿದ೯ರಿಸಿದಂತೆ ನೀಡುತ್ತಾರೆ ಆದರೆ ಬಲಿ ಮಾಂಸದ ಪಾಲು ಅವರ ಮನೆಯ ನಿಷ್ಟ ಕೆಲಸಗಾರನಿಗೆ (ಶೂದ್ರನಿಗೆ) ನೀಡುವಂತೆ ಹೇಳುತ್ತಾರೆ. ದೀಪಾವಳಿ ನಂತರ ಕೆಲ ದಿನ ಈ ನೋನಿ ನಡೆಯುತ್ತದೆ ಇದಕ್ಕೆ ಆಚರಣೆಯ ಕ್ರಮ ಹೇಳುವವ ಊರಿನ ಮುಖಂಡ ಅಥವ ಹಿರಿಯ ಇಲ್ಲಿಯೂ ಬಹುಸಂಖ್ಯಾತ ಜಾತಿಯವರ ಮಾತು ಹೆಚ್ಚು ಕೃತಿಗೆ.   ಇಲ್ಲಿ ಜಾತಿ ಮಡಿ ಇಲ್ಲ ಆದರೆ ಹುಟ್ಟು / ಸಾವುಗಳ ಸೂತಕ ಇದೆ ಹಾಗೆಯೆ ಮುಟ್ಟು ಸದರಿ ದಿನ ಆದರೆ ಈ ಪೂಜ ಕಾಯ೯ಕ್ರಮ ಮುಂದೂಡಲಾಗುತ್ತೆ, ಇಲ್ಲಿ ಬಾಡೂಟದ ಗಮ್ಮತ್ತು ಇರುವುದರಿಂದ ಈ ಕಾಯ೯ಕ್ರಮ ಮುಂದೂಡಲು ಹೆಚ್ಚಿನವರಿಗೆ ಇಷ್ಟ ಇರುವುದಿಲ್ಲ ಅದಕ್ಕಾಗಿ ಸೂತಕಗಳನ್ನೇ ನಿವಾರಿಸಿಕೊಳ್ಳುವ ಹೊಸ ಯೋಜನೆ ಆಚರಣೆಯಲ್ಲಿದೆ ಅದೇನೆ೦ದರೆ ಮುಟ್ಟಾಗುವ ಮುನ್ನವೆ ಹೆಣ್ಣು ಮಕ್ಕಳು ಹಳ್ಳಿ ತೊರೆದು ನೋನಿ ಇಲ್ಲದ ಹಳ್ಳಿಯ ನೆಂಟರ ಮನೆಗೆ ಹೋಗಬೇಕು.   ಇದನ್ನ ಸಾಗರದ ಖ್ಯಾತ ರಂಗಭೂಮಿ ಕಲಾವಿದೆ, ಕಡಿದಾಳು ಶಾಮಣ್ಣರ ಶಿಷ್ಯೆ ಪ್ರತಿಭಾ ರಾಘವೇ೦ದ್ರ ವಿವಿದ ಸಂಘಟನೆಗಳ ನೆರವಿನ