Skip to main content

Posts

Showing posts with the label value added organiccolostrum Powder and Tablets available in markettr

ಗಿಣ್ಣದ ಔಷದಯುಕ್ತ ಲಾಭಗಳು ಅನೇಕ, ರುಚಿಕರವಾದ ಗಿಣ್ಣದ ಹಾಲಿನ ಮೌಲ್ಯವರ್ದಿತ ಸಾವಯವ ಗಿಣ್ಣದ ಹಾಲಿನ ಪುಡಿ ಮತ್ತು ಮಾತ್ರೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

#ಗಿಣ್ಣ_ಕನ್ನಡದಲ್ಲಿ #ಜನ್ನುಪಾಲು_ತೆಲುಗಿನಲ್ಲಿ #ಕಾವಾ೯_ಮರಾಠಿ_ಮತ್ತು_ಹಿಂದಿಯಲ್ಲಿ #ಕೌವ್_ಕೊಲಸ್ಟ್ರಮ್_ಇಂಗ್ಲೀಷನಲ್ಲಿ. #ಗಿಣ್ಣದಲ್ಲಿ_ಏನೇನೆಲ್ಲ_ಇದೆ. #ಆತ್ಮಹತ್ಯೆಯೆ೦ಬ_ಹತಾಷೆ_ಮನಸ್ಸಿಂದ_ದೂರ_ಮಾಡುವ_ಶಕ್ತಿ_ಗಿಣ್ಣಕ್ಕಿದೆ. #ಆಯುರ್ವೇದದಲ್ಲಿ_ಪೀಯುಷ್_ಅಂದರೆ_ಅಮೃತ_ಎಂಬ_ಹೆಸರು_ಗಿಣ್ಣಕ್ಕೆ    ಕಿರಿಯ ಗೆಳೆಯ ಉತ್ಸಾಹಿ ಶ್ರಮ ಜೀವಿ #ಮಡವಳ್ಳಿ_ಆದರ್ಶ ನನಗಾಗಿ ಮೊನ್ನೆ ಎಮ್ಮೆ ಗಿಣ್ಣ ತಂದು ಕೊಟ್ಟಿದ್ದರು.   ಗಿಣ್ಣ ಅಂದರೆ ನನಗೆ ಅತ್ಯಂತ ಇಷ್ಟ ಇದರಲ್ಲಿ ಅನೇಕ ಬಗೆಯ ಗಿಣ್ಣ ಮಾಡುತ್ತಾರೆ.   ಭಾರತೀಯ ಆಯುರ್ವೇದದಲ್ಲಿ ಇದಕ್ಕೆ ಅಮೃತ ಎಂಬ ಸಂಸ್ಕೃತದ ಪೀಯೂಷ್ ಎಂಬ ಹೆಸರಿದೆ.   ಭಾರತೀಯರಲ್ಲಿ ಮೇಲ್ವರ್ಗದ ಕೆಲ ಜಾತಿಗಳು ಎಮ್ಮೆ ಮತ್ತು ದನದ ಗಿಣ್ಣದ ಹಾಲು ಬಳಕೆ ನಿಷೇದವಿದೆ, ಹನ್ನೊಂದು ದಿನದ ತನಕ ಆಮೆ (ಸೂತಕ ) ಎಂದು ಗಿಣ್ಣದ ಹಾಲು ಕರುಗಳಿಗೆ ಬಿಡುವ ಸಂಪ್ರದಾಯವಿದೆ, ಈ 11 ದಿನದ ಹಾಲು  ಹುಟ್ಟಿದ ಕರುಗಳಿಗೆ ತುಂಬಾ ಆರೋಗ್ಯ ವೃದ್ಧಿ ನೀಡುವ ಹಾಲು ಎಂಬುದು ಒಂದು ಕಾರಣ ಇರಬಹುದು.    ವೀರಶೈವ ಲಿಂಗಾಯಿತರಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ ಅದಕ್ಕೆ ಗಾದೆಯೂ ಇದೆ ಗಿಣ್ಣ ಮಾಡಿದರೆ ಶತ್ರು ಕೂಡ ಮಿತ್ರನಾಗಿ ಬರುತ್ತಾನೆ ಎಂಬ ಅರ್ಥವಿದೆ.   ಹೈಪ್ರೋಟೀನ್, ರೋಗ ನಿರೋದಕ ಶಕ್ತಿ, ನರ ದೌರ್ಬಲ್ಯ ಸರಿಪಡಿಸುವ, ಎಳೆಯ ಮಕ್ಕಳು ಮತ್ತು...