ಹೊಳಲೂರು_ನಾಗಪ್ಪನವರು
#ಬೀಮನಕೋಣೆ_PLDBಯಲ್ಲಿದ್ದವರು.
ಇವತ್ತು ಬೆಳಿಗ್ಗೆ ಶಿವಮೊಗ್ಗದ ಹೊಳಲೂರಿನಿಂದ ನಾಗಪ್ಪನವರು ಮತ್ತು ಅವರ ಗೆಳೆಯರಾದ ಎಂ.ಪಾಲಕ್ಷಪ್ಪ, ಜಿ.ವಿ.ಲೋಕೇಶಪ್ಪ ಗೌಡರು, ಎ.ಆರ್. ಕುಮಾರ್ ನನ್ನ ಆಫೀಸಿಗೆ ಬಂದಿದ್ದರು.
ಇವರೆಲ್ಲ ಗೆಳೆಯರು ಸಾಗರ ತಾಲೂಕಿನ ಸಿಗಂದೂರು ಸೇತುವೆ ನೋಡಲು ಬಂದಿದ್ದರು.
ನಾಗಪ್ಪನವರು ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಬೀಮನಕೋಣೆಯ ಪಿ.ಎಲ್.ಡಿ.ಬಿ. ಬ್ಯಾಂಕಿನಲ್ಲಿ ಅನೇಕ ವರ್ಷ ಸಲ್ಲಿಸಿದ್ದಾರೆ ಆದ್ದರಿಂದ ಇವರು ನಮ್ಮ ತಾಲ್ಲೂಕಿನಲ್ಲಿ ಚಿರಪರಿಚಿತರು.
ರೈತರಿಗೆ ಆ ಕಾಲದಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳು ಸಾಲ ನೀಡುತ್ತಿರಲಿಲ್ಲ ಆದ್ದರಿಂದ ರೈತರು ಪಿ.ಎಲ್.ಡಿ. ಬ್ಯಾಂಕಿಗೆ ಅನಿವಾರ್ಯವಾಗಿ ಹೋಗಲೇ ಬೇಕಿತ್ತು ಆದ್ದರಿಂದ ಪ್ರತಿಯೊಂದು ರೈತರಿಗೂ ಈ ಬ್ಯಾಂಕ್ ಮತ್ತು ಅದರ ಸಿಬ್ಬಂದಿ ಚಿರಪರಿಚಿತರಾಗಿರುತ್ತಿದ್ದರು.
ಆಗ ಬ್ಯಾಂಕಿನ ಮ್ಯಾನೇಜರ್ ಆಗಿದ್ದ ಹಂದಿಗೋಳ್ ಸಾಹೇಬರು ಮತ್ತು ನಾಗಪ್ಪನವರ ಕಾಲದಲ್ಲಿ ಈ ಬ್ಯಾಂಕಿನಲ್ಲಿ ಪ್ರತಿ ನಿತ್ಯ ಜನ ಜಂಗುಳಿ ಇರುತ್ತಿತ್ತು ಈಗ ಕಾಲ ಬದಲಾಗಿದೆ ಹೊಸ ಬೃಹತ್ ಬ್ಯಾಂಕ್ ಕಟ್ಟಡ ನಿರ್ಮಾಣವಾಗಿದೆ ಆದರೆ ಅಲ್ಲಿ ಖಾಲಿ ಖಾಲಿ ಕಾರಣ ಈಗ ರಾಷ್ಟ್ರೀಯ ಬ್ಯಾಂಕ್ ಗಳು ರೈತರಿಗೆ ಭರಪೂರ ಸಾಲ ನೀಡುತ್ತಿದೆ.
ಈಗ 76 ರ ವಯಸ್ಸಿನಲ್ಲಿರುವ, ನಿವೃತ್ತರಾಗಿ ಹೊಳಲೂರಿನಲ್ಲಿ ಅವರಿಗೆ ಪಿತ್ರಾರ್ಜಿತವಾಗಿ ಬಂದ ಅಡಿಕೆ ತೋಟ ನೋಡಿಕೊಂಡಿದ್ದಾರೆ, ಅವರ ಊರಿನ ಗೆಳೆಯರು ಇವರಿಗೆ ಹುಟ್ಟಿದ ಊರಿನಲ್ಲೇ ಇರಬೇಕೆಂದು ಒತ್ತಾಯ ಮಾಡಿದ್ದರಿಂದ ಹೊಳಲೂದಿನಲ್ಲಿಯೇ ನೆಲೆಸಿದ್ದಾರೆ.
ಏಕೈಕ ಪುತ್ರ ಐಸಿಐಸಿ ಬ್ಯಾಂಕಿನಲ್ಲಿದ್ದ ದೊಡ್ಡ ಹುದ್ದೆ ಬಿಟ್ಟು ಬಂದು ತಂದೆ ಜೊತೆ ಅಡಿಕೆ ಕೃಷಿಯಲ್ಲಿ ತೊಡಗಿದ್ದಾರೆ ಇದೆಲ್ಲ ಮಾತಾಡುತ್ತಾ ನನ್ನ ಕಾಫಿ ಅತಿಥ್ಯ ಸ್ವೀಕರಿಸಿ ಗೆಳೆಯರ ಜೊತೆ ಸಿಗಂದೂರು ಸೇತುವೆ ನೋಡಲು ಹೋಗಿದ್ದಾರೆ.
#sagar #bimamakone #pldb #holaluru #nagappa #handigol #siganduru #bridge
Comments
Post a Comment