Skip to main content

Posts

Showing posts with the label Jos Father Mumbalu

4136.ವ್ಯಾಟಿಕನ್_ಟು_ಸಾಗರಜೋಸ್_ಪಾದರ್_ಕನ್ನಡಾಭಿಮಾನಕನ್ನಡ_ಕಲಿತ_ಪಾದ್ರಿಗಳು

ವ್ಯಾಟಿಕನ್_ಟು_ಸಾಗರ ಜೋಸ್_ಪಾದರ್_ಕನ್ನಡಾಭಿಮಾನ ಕನ್ನಡ_ಕಲಿತ_ಪಾದ್ರಿಗಳು   ಡಾಕ್ಟರ್ ಪಿ.ವಿ. ಜೋಸೆಪ್ ಅವರನ್ನ ಇಲ್ಲಿಯವರು ಕರೆಯುವುದು ಜೋಸ್ ಪಾದರ್ ಅಂತ ಈಗ ಕೇರಳದಲ್ಲಿ ನಿವೃತ್ತ ಜೀವನ ಸವೆಸುತ್ತಿದ್ದಾರೆ, ಇವರು ವಿಶೇಷ ವ್ಯಕ್ತಿ ಇವರ ಸಾಧನೆ ಅಮೋಘ,ಯಾವುದೇ ಪ್ರಸಿದ್ಧಿಗಾಗಿ, ಪ್ರಶಸ್ತಿ ಸನ್ಮಾನಗಳಿಗಾಗಿ ಸೇವೆ ಮಾಡಿದವರಲ್ಲ ಅದರಿಂದ ಇವರು ಬಲು ದೂರ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದ ಮುಂಬಾಳಿಗೆ ಬಂದು ಗೋಕುಲ್ ಪಾರಂ ಸ್ಥಾಪಿಸಿ ಸಾಗರ ತಾಲೂಕಿನಲ್ಲಿ ಇವರು ಮಾಡಿದ ದೂರದೃಷ್ಟಿಯ social economical development program ಬಗ್ಗೆ ಎಷ್ಟು ಹೇಳಿದರೂ ಕಡಿಮೆ.   ಇವರು ಜನಿಸಿದ್ದು ಕೇರಳದಲ್ಲಿ ಮಾತೃ ಭಾಷೆ ಮಲೆಯಾಳಂ, ಇವರ ವಿದ್ಯಾಭ್ಯಾಸ ಕ್ರೈಸ್ತರ ಪರಮೊಚ್ಚ ಧರ್ಮಗುರು ಪೋಪ್ ಇರುವ ವ್ಯಾಟಿಕನ್ ನಲ್ಲಿ.    ಕೃಷಿ ಮತ್ತು ಮಹಾತ್ಮಾ ಗಾಂಧಿ ಇವರ ಉನ್ನತ ಶಿಕ್ಷಣದ ವಿಷಯಗಳು, ಇವರು ಕರ್ನಾಟಕಕ್ಕೆ ಬಂದು ನಂಜನಗೂಡಿನಲ್ಲಿ ಆರಾಧ್ಯ ಎಂಬುವವರಿಂದ ಕನ್ನಡ ಬಾಷೆಯ ಅಕ್ಷರಾಭ್ಯಾಸ ಮಾಡಿ ನಂತರ ಒಂದನೆ ತರಗತಿ, ಎರಡನೆ ತರಗತಿ ಮಕ್ಕಳ ಜೊತೆ ಕುಳಿತು ಪಾಠ ಕಲಿತು ನಂತರ ಕನ್ನಡ ಬರೆಯಲು ಮತ್ತು ಓದಲು ಕಲಿತ ದಿನಗಳ ನೆನಪು ಮಾಡಿಕೊಂಡಿದ್ದಾರೆ ಈ ಸಂದರ್ಶನದಲ್ಲಿ.     ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದರೂ ನನ್ನ ಮಕ್ಕಳನ್ನ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಿಸಿದ್ದೆ ಆಗಲೇ...