Blog number 2022. ನಮ್ಮ ರಾಜ್ಯದ ವೃತ್ತಿಯಲ್ಲಿ ವೈದ್ಯರಾಗಿರುವ ಬರಹಗಾರರೂ ಆಗಿರುವ ಕಾಗಿನೆಲೆಯ ಡಾಕ್ಟರ್ ಪ್ರಕಾಶ್ ಬಾರ್ಕಿ ಅವರು ನಮ್ಮ ದೇಶದ ನರ್ಮದಾ ನದಿ ಪರಿಕ್ರಮಣ ತಮ್ಮ ಸೈಕಲ್ ಮೇಲೆ ನೆರವೇರಿಸಿದ್ದಾರೆ ಇವರ ಪರಿಕ್ರಮಣದ ಲೇಖನಗಳ ಕಂತುಗಳಾಗಿ ಆಕೃತಿ ಕನ್ನಡ ಡಾಟ್ ಕಾಮ್ ನಲ್ಲಿ ಪ್ರಕಟವಾಗುತ್ತಿದೆ.
ನರ್ಮದಾ_ನದಿ_ಪರಿಕ್ರಮಣ #ಇದು_ನದಿ_ಪುರಾಣ #ಕಾಗಿನೆಲೆಯ_ವೈದ್ಯರೂ_ಬರಹಗಾರರಾದ_ಡಾಕ್ಟರ್_ಪ್ರಕಾಶ್_ಬಾರ್ಕಿ_53_ದಿನಗಳಲ್ಲಿ_ಪೂರೈಸಿದ್ದಾರೆ #ಆಕೃತಿ_ಕನ್ನಡ_ಡಾಟ್_ಕಾಂ_ಇದನ್ನು_ಕಂತುಗಳಾಗಿ_ಪ್ರಕಟಿಸುತ್ತಿದೆ #ಇವತ್ತಿಗೆ_23ನೇ_ಕಂತು_ಹಿಂದಿನ_ಕಂತುಗಳನ್ನು_ಓದುವ_ಲಿಂಕ್_ನೀಡಿದ್ದಾರೆ. #ತುಂಬಾ ಕುತೂಹಲಕಾರಿ ಅನುಭವದ ಲೇಖನ ಮಾಲೆ ತಪ್ಪದೆ ಓದಿ ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೩) March 24, 2024 aakrutikannada ಗುಹೆಯ ಒಳಗೆಲ್ಲಾ ತಂಪು ತಂಪು. ಉದ್ದನೆಯ ಗುಹೆ. ಬಾವಲಿಗಳದ್ದೆ ಸಾಮ್ರಾಜ್ಯ. ಬೃಹತ್ ಬಂಡೆಯ ಅಡಿಯ ಗುಹೆಯಲ್ಲಿ “ಮುನಿಗಳು ತಪಸ್ಸು ಮಾಡುತ್ತಿದ್ದ ರೀತಿ ಕಂಚಿನ ಮೂರ್ತಿ ರಚಿಸಲಾಗಿದೆ. ಗುಹೆಯ ಇನ್ನಷ್ಟು ಒಳಗೆ ಹೋದರೆ ತಾಯಿ ನರ್ಮದೆಯ ಮೂರ್ತಿಯಿದ್ಧು ಸದಾ ಪೂಜೆ ಸಲ್ಲುತ್ತಿರುತ್ತೆ. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ… ಅಮರ ಕಂಟಕ್’ದ ಮೃತ್ಯುಂಜಯ ಆಶ್ರಮದಲ್ಲಿ ತುಂಬಾ ಜನ ಪರಿಕ್ರಮವಾಸಿಗಳು ಉಳಿದುಕೊಂಡಿದ್ದರು. ಅದಕ್ಕೆ ಬೆಳಿಗ್ಗೆ 4 ಗಂಟೆಗೆಲ್ಲಾ ಗಲಗಲ ಸದ್ದು. ಎಚ್ಚರವಾಯಿತು.. ಸರಿ.. ಸ್ನಾನಕ್ಕೆ ಅಂತಾ ಹೊರಟಿದ್ದು “ರಾಮ ಘಾಟ್”ಗೆ. ಮೃತ್ಯುಂಜಯ ಆಶ್ರಮದ ಎದುರಿಗಿದ್ದ ಘಾಟ್ ಇದು. ನಾನು ಘಾಟ್’ಗೆ ಹೋಗಿ ತಲುಪುವುದರೊಳಗೆ ಅಲ್ಲಿಯೂ ಸ್ನಾನ ಮಾಡುತ್ತಿದ್ದರು. ಚಳಿ ವಿಪರೀತ. ಆವಾಗ ತಾಪಮಾನ 9 ಡಿಗ್ರಿ. ಚಳಿಗಾಳಿಗ...