Blog number 2009. ಕೆಳದಿ ಅರಸರ ಕಾಲದಿಂದ ತೆರಿಗೆ ಇಲ್ಲದ ಗೋಕರ್ಣದ ಉಪ್ಪು... ಸಾಣೆ ಕಟ್ಟಾ ಉಪ್ಪು ಎಂಬ ಹೆಸರು ಬರಲು ಕಾರಣವಾದ ಸಾನು ನಾಯಕ ನಿರ್ಮಿಸಿದ ಒಡ್ಡು
#ಗೋಕರ್ಣದ_ಸಾಣಿಕಟ್ಟಾ_ಉಪ್ಪಿನ_ಕಥೆ. #ಸಾನು_ನಾಯ್ಕ_ಕಟ್ಟಿದ_ಒಡ್ಡು_ಈ_ಉಪ್ಪಿಗೆ_ಈ_ಹೆಸರು_ಬರಲು_ಕಾರಣ #ಈ_ಹೆಸರು_ಬರಲು_ಕಾರಣ_ಪುರುಷನ_ಗೌರವಿಸೋಣ. #ಗೇರುಸೊಪ್ಪೆಯ_ಜೈನಕುಲದ_ಕಾಳುಮೆಣಸಿನ ರಾಣಿ_ಚೆನ್ನಬೈರಾದೇವಿ_ಆಡಳಿತದಲ್ಲಿ #ಕೆಳದಿ_ಅರಸರ_ಕಾಲದಲ್ಲಿ_ಗೋಕರ್ಣದ_ಉಪ್ಪಿಗೆ_ಯಾವುದೇ_ತೆರಿಗೆ_ಇರಲಿಲ್ಲ #ಆದರೆ_ನಂತರ_ಮೈಸೂರು_ಸಂಸ್ಥಾನ_ಗೋಕರ್ಣ_ಉಪ್ಪಿಗೆ_ತೆರಿಗೆ_ಪ್ರಾರಂಭಿಸಿತ್ತು #ಪ್ರೆಂಚ್_ಕ್ರಾಂತಿ_ಮಹಾತ್ಮಗಾಂಧಿ_ಅವರ_ಉಪ್ಪಿನ_ಸತ್ಯಾಗ್ರಹ_ಇತಿಹಾಸದ_ಅನೇಕ_ಯುದ್ದಗಳು_ಉಪ್ಪಿಗಾಗಿ #ವಾರ್ಷಿಕ_10ರಿಂದ_15ಸಾವಿರ_ಟನ್_ಉಪ್ಪು_ಉತ್ಪಾದಿಸುವ #ದಿ_ನಾಗರಬೈಲು_ಸಾಲ್ಟ್_ಕೋಆಪರೇಟಿವ್_ಸೊಸೈಟಿ #ಸಾಣಿಕಟ್ಟಾ_ಅಯೋಡಿನ್_ಯುಕ್ತ_ಒಂದು_ಕೇಜಿ_ಉಪ್ಪಿನ_ಬೆಲೆ_20_ರೂಪಾಯಿ. ಎಂಟು ಸಾವಿರ ವರ್ಷಗಳಿಂದ ಉಪ್ಪಿನ ಉಲ್ಲೇಖ ದಾಖಲೆ ಆಗಿದೆ, ಉಪ್ಪಿನ ಗಣಿಯಿಂದ, ಉಪ್ಪುನೀರಿನ ಸರೋವರ ಮತ್ತು ಸಮುದ್ರದಿಂದ ಉಪ್ಪು ಸಂಸ್ಕರಿಸಿ ಬಳಸುವ ಪದ್ಧತಿಗಳು ಇದೆ. ಪುರಾತನ ಕಾಲದಲ್ಲಿ ಉಪ್ಪು ಕರೆನ್ಸಿ ರೀತಿ ವಿನಿಮಯ ಆಗುತ್ತಿತ್ತಂತೆ, ಉಪ್ಪಿಗಾಗಿ ಯುದ್ಧಗಳಾಗಿದೆ, ಪ್ರೆಂಚ್ ಕ್ರಾಂತಿಗೆ ಉಪ್ಪು ಕಾರಣವಾಗಿದೆ. ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಉಪ್ಪಿನ ಕರ ನಿರಾಕರಣೆಯ ಉಪ್ಪಿನ ಸತ್ಯಾಗ್ರಹ ದೇಶದಾದ್ಯಂತ ಸ್ವಾತಂತ್ರ್ಯ ಚಳವಳಿಗೆ ಬಿರುಸು ತಂದಿತ್ತು. ಕೆಳದಿ ಅರಸರ ಕಾಲ...