Blog number 1310. ಸಾಗರ ಪೋಲಿಸ್ ಠಾಣೆಯ ಮೊದಲ ಲಾಕ್ ಅಪ್ ಡೆತ್ ಪುರಪ್ಪೆಮನೆ ರಾಮನ ಕೊಲೆ, ಗುಂಡೂರಾವ್ ಸರ್ಕಾರದ ಸಚಿವ ಬಂಗಾರಪ್ಪ ಬೇಟಿ, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪ ಅನ್ಯಾಯದ ವಿರುದ್ದ ಹಾಕಿದ ಆ ಘೋಷಣೆ, ಮುಂದೆ .....
https://youtu.be/WCphpbXEcmQ #ಜನಪರ_ಹೋರಾಟಗಾರ_ತೀನಾ_ಶ್ರೀನಿವಾಸ್_ಭಾಗ_3 #ಸಾಗರದ_ಮೊದಲ_ಲಾಕ್_ಅಪ್_ಡೆತ್ #ಪುರಪ್ಪೆಮನೆ_ರಾಮ_ಶವ_ಸಾಗರ_ಠಾಣೆಯಲ್ಲಿ #ಗುಂಡೂರಾವ್_ಸರ್ಕಾರದಲ್ಲಿ_ಮಂತ್ರಿ_ಆಗಿದ್ದ_ಬಂಗಾರಷ್ಟನವರು_ಸಾಗರದ_ಆಸ್ಟತ್ರೆಗೆ #ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ದಿಕ್ಕಾರದ_ಘೋಷಣೆ #ಗರಡಿ_ಗೋಪಾಲ_ಸಹೋದರರ_ಆಕ್ರೋಶ #ಸಾಗರ_ಪಟ್ಟಣದಲ್ಲಿ_ಪೋಲಿಸರಿಂದ_ಲಾಠಿ_ಚಾಜ್೯_ಅಶ್ರುವಾಯು #ವಿದ್ಯಾರ್ಥಿಗಳ_ಮೇಲೂ_ಲಾಠಿ_ಪ್ರಹಾರ #ಮರುದಿನ_ಎಲ್_ಬಿ_ಕಾಲೇಜು_ವಿದ್ಯಾರ್ಥಿಗಳಿಂದ_ಬೃಹತ್_ಪ್ರತಿಭಟನೆ_ಸಾಗರ_ಪೇಟೆ_ಪ್ರಕ್ಷುಬ್ಧ. #ತೀನಾ_ಶ್ರೀನಿವಾಸರ_ನೇತೃತ್ವದಲ್ಲಿ. 1978-79 ಇರಬೇಕು ಆನಂದಪುರಂನಿಂದ ಪ್ರತಿನಿತ್ಯ ಸಾಗರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ನಾವು , ನಾನು 8ನೇ ತರಗತಿ ಇಂಗ್ಲೀಷ್ ಮೀಡಿಯಂ ಮುನ್ಸಿಪಲ್ ಹೈಸ್ಕೂಲ್ ಗೆ ಸೇರಿದ್ದೆ. ರೈಲಿಳಿದು ಪೋಲಿಸ್ ಸ್ಟೇಷನ್ ಸರ್ಕಲ್ ಗೆ ಬರುವಾಗ ಗೊತ್ತಾಯಿತು ಪುರಪ್ಪೆಮನೆಯ ರಾಮ ಎಂಬುವ ಬಡ ಕೃಷಿ ಕಾರ್ಮಿಕನನ್ನು ಕಳ್ಳತನದ ಆರೋಪದಲ್ಲಿ ಸಾಗರ ಪೋಲಿಸ್ ಠಾಣೆಗೆ ತಂದು ಏರೋಪ್ಲೇನ್ ಶಿಕ್ಷೆ ನೀಡಲಾಯಿತಂತೆ ಆಗ ಪೋಲಿಸರ ವಿಪರೀತ ಬಾಯಿ ಬಿಡಿಸುವ ಶಿಕ್ಷೆಯಿಂದ ಪುರಪ್ಪೆಮನೆ ರಾಮನ ಜೀವ ಹೋಯಿತು... ಏರೋಪ್ಲೇನ್ ಏರಿಸಲು ಹಿಂದಿನ ರಾತ್ರಿ ಬಸ್ ಸ್ಟ್ಯಾಂಡ್ ಅಂಬಿಕಾ ಹೋಟೆಲ್ ಬಾವಿ ಹಗ್ಗ ಒಯ್ದಿದ್ದರು... ಇದು ಲಾಕ್ ಅಪ್ ಡೆತ್ ... ರಾಮ...