Skip to main content

Posts

Showing posts with the label R.T.VittalMurthy

Blog number 3361.ಆರ್.ಟಿ. ವಿಠಲ ಮೂರ್ತಿ

https://www.facebook.com/share/p/15fDezGavp/ *#ಆರ್_ಟಿ_ವಿಠಲಮೂರ್ತಿ* *ನನ್ನ ಬಗ್ಗೆ ಬರೆದಿದ್ದಾರೆ ನೋಡಿ....* *....ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು....* .*...ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ,* *ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು.....* *ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆರ್.ಟಿ. ವಿಠಲ ಮೂರ್ತಿ ರಾಜ್ಯದ ರಾಜದಾನಿ ಬೆಂಗಳೂರಿನ ವಿಧಾನ ಸೌದದಲ್ಲಿ ಈಗ ಹಿರಿಯ ಪತ್ರಕರ್ತರು, ರವಿ ಬೆಳಗೆರೆ ಅವರ ಆತ್ಮೀಯ ಗೆಳೆಯರಾಗಿದ್ದವರು.* *ಅವರು ನನ್ನ ಕಥಾ ಸಂಕಲನ ಓದಿ ಬರೆದ ಅಭಿಪ್ರಾಯಗಳು ಇಲ್ಲಿದೆ.* *ನನ್ನ ಹೋರಾಟದ ಜೀವನದಲ್ಲಿ ಅವರ ಉಪಕಾರ ಮರೆಯಲು ಸಾಧ್ಯವೇ ಇಲ್ಲ.* *ನನ್ನ ಹೋರಾಟವಾದ ಸಾಗರ ತಾಲ್ಲೂಕಿನ  ಕೃಷಿ ಇಲಾಖೆಯ ಭ್ರಷ್ಟಾಚಾರ ಬಯಲು ಮಾಡಲು ಅಂದು ಅವರು 17 - ಸೆಪ್ಟೆಂಬರ್-1995ರಲ್ಲಿ ವೈಕುಂಠರಾಜು ಅವರ #ವಾರಪತ್ರಿಕೆ ಯಲ್ಲಿ ಬರೆದ ವರದಿ ದಿನಾಂಕ 6 - ಡಿಸೆಂಬರ್-1995ರಲ್ಲಿ ಆಗಿನ ಕೃಷಿ ಸಚಿವ ಬೈರೇಗೌಡರೆ ಸ್ವತಃ ಬಂದು ತನಿಖೆ ಮಾಡಿ ಅನೇಕ ಅಧಿಕಾರಿಗಳನ್ನು ಅವತ್ತೇ ಜೈಲಿಗೆ ಕಳಿಸಿದ್ದು ನನ್ನ ಹೋರಾಟದ ಗೆಲುವಿಗೆ ಕಾರಣವಾಗಿತ್ತು.* *ಅವರು ಬರೆದ ಕೃತಿ ವಿಮರ್ಶೆ ...