Skip to main content

Posts

Showing posts from December, 2017

# ಪರಿಸರ ಹೋರಾಟಗಳು ರಾಜಕೀಯ ಪಕ್ಷಗಳ ಕೈ ಬೋ೦ಬೆ ಆಗುತ್ತಿದೆ.#

# ಪರಿಸರ ಉಳಿಸುವುದರಲ್ಲೂ ಎಡ ಮತ್ತು ಬಲ ಸರಿ ಅಲ್ಲ#    ಕಳೆದ ವಷ೯ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಜೋಗ ಅಭಿವೃದ್ಧಿ ಯೋಜನೆಯಲ್ಲಿ ಜೋಗ ಜಲಪಾತ ಸವ೯ರುತುವಿನ ಜಲಪಾತಕ್ಕಾಗಿ ನೀರು ಮರು ಪೂರಣ ಯೋಜನೆಗೆ ಸಾಗರದ ನಾ.ಡಿಸೋಜರಾದಿಯಾಗಿ ಅನೇಕರು ವಿರೋದ ಮಾಡಿದರು ಆದರೆ ಅನಂತ ಹೆಗಡೆ ಅಶೀಸರ ಈ ಬಗ್ಗೆ ವಿರೋದಿಸಲಿಲ್ಲ.    ಈಗ ಶರಾವತಿ ಕಣಿವೆಯಲ್ಲಿ ಭೂಗಭ೯ ವಿದ್ಯುತ್ ಯೋಜನೆ ಒಂದು (ವರಾಹಿ ಯೋಜನೆಯಂತೆ) ಪ್ರಾರಂಭವಾಗಲಿದ್ದು ಇದಕ್ಕೆ ಅನಂತ ಹೆಗಡೆ ಅಶೀಸರರ ನೇತೃತ್ವದ ಸಂಘಟನೆ ವಿರೋದಿಸುತ್ತಿದೆ ಆದರೆ ನಾ.ಡಿಸೋಜರ ಒಡನಾಡಿಗಳು ವಿರೋದಿಸುತ್ತಿಲ್ಲ.    ಇದೇ ರೀತಿ ಅರಣ್ಯ ಭೂಮಿ ಸಕ್ರಮದಲ್ಲಿ ಕೂಡ ಎರೆಡು ಗುಂಪಾಗಿದ್ದು ಒಂದು ಪರ ಇನ್ನೊಂದು ವಿರೋದ.   ಒಂದೊಂದು ರಾಜಕೀಯ ಪಕ್ಷಗಳ ಪರಿಸರ ಹೋರಾಟದ ದಿಕ್ಕು ಒಂದೊಂದು ಕಡೆ ಮುಖ ಮಾಡಿದೆ ಇದರಿ೦ದ ರಾಜಕೀಯ ಪಕ್ಷಕ್ಕೆ ಲಾಭವಾಗಬಹುದೇ ಹೊರತು ಪರಿಸರಕ್ಕಲ್ಲ.   ಪಶ್ಚಿಮ ಘಟ್ಟದ ಪರಿಸರ ಉಳಿವಿಗೆ ಎಲ್ಲರ ಕಾಳಜಿ ಸ್ವಾಗತೀಯ ಆದರೆ ಪಕ್ಷ, ದಮ೯ಗಳ ಆಧಾರದಲ್ಲಿ ಪರಿಸರ ಹೋರಾಟ ವಿಭಜನೆಯಾಗಿ ಸಾಗುತ್ತಿರುವುದು ಬೇಸರದ ಸಂಗತಿ.

#ಕವಿಶೈಲದಲ್ಲಿದೆ ತೇಜಸ್ವಿಯವರ ಸಮಾದಿ#

#ತೇಜಸ್ವಿ ಒಂದು ನೆನಪು# ಮೊದಲೆಲ್ಲ ಕವಿಶೈಲಕ್ಕೆ ಹೋದರೆ ಕುವೆಂಪುರವರ ಮನೆ, ಕವಿ ಶೈಲದ ಬಂಡೆ ಮತ್ತು ಕುವೆಂಪುರವರ ಸಮಾದಿ ಸಂದಶಿ೯ಸುತ್ತಿದ್ದೆವು ಈಗ ಕವಿಶೈಲದ ಪ್ರಾರಂಭದಲ್ಲಿಯೆ ಎಡ ಭಾಗದಲ್ಲಿ ತೇಜಸ್ವಿಯವರ ಸಮಾದಿಯನ್ನು ಸಹ ನೋಡಬಹುದು.   ಮೊನ್ನೆ ಕವಿಶೈಲಕ್ಕೆ ಹೋದಾಗ ತೇಜಸ್ವಿ ಸಮಾದಿಗೆ ಬೇಟಿ ನೀಡಿದ್ದೆ, ತೇಜಸ್ವಿಯವರ ಎಲ್ಲಾ ಲೇಖನಗಳ ಮತ್ತು ಅವರ ವಿಚಾರ, ವ್ಯಕ್ತಿತ್ವದ ಅಭಿಮಾನಿಯಾದ ನಾನು ಅವರನ್ನ ಮೊದಲ ಮತ್ತು ಕೊನೆಯ ಬಾರಿಯ ಬೇಟಿ ಮಾಡಿದ್ದು ಕುವೆಂಪುರವರ ಮನೆ ರಾಷ್ಟ್ರಕ್ಕೆ ಅಪಿ೯ಸುವ ದಿನ 2000ನೆ ಇಸವಿಯಲ್ಲಿ.   ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ತೀಥ೯ಹಳ್ಳಿ ತಲುಪಿ ಅಲ್ಲಿಂದ ಎಡಕ್ಕೆ ಹೊರಳಿ ಕೊಪ್ಪ ಮಾಗ೯ದಲ್ಲಿ ತುಂಗಾ ನದಿಯ ಪ್ರಖ್ಯಾತ ಕಮಾನು ಸೇತುವೆ ದಾಟಿ ಕೆಲವು ಕಿ.ಮಿ. ಪ್ರಯಾಣದ ನಂತರ ಎಡ ಬಾಗಕ್ಕೆ ತೆರಳಿದರೆ ಅಲ್ಲಿದೆ ಕವಿಶೈಲು.

ಹೋರಾಟಗಾರ ಗಣಪತಿ ಭಟ್ಟ ಜಿಗಳೆಮನೆ ಜೈಲಿಗೆ ಕಳಿಸಿದ ಸುದ್ದಿ

# ಸುದ್ದಿಯನ್ನ ಸುದ್ದಿ ಮಾಡದ ಈ ಸುದ್ದಿ#    ಇವರಿಬ್ಬರ ಹೆಸರು ಗಣಪತಿ ಭಟ್ಟರು ಜಿಗಳೆಮನೆ ಮತ್ತು ನಿರಂಜನ ಕುಗ್ವೆ ಹಳೆ ಬೇರು ಹೊಸ ಚಿಗುರಿನಂತ ಇವರಿಬ್ಬರ ಜುಗಲ್ ಬಂದಿ.    ಇವರಿಬ್ಬರನ್ನ ಪೇಸ್ ಬುಕ್ನಲ್ಲಿ ಮಾನಹಾನಿ ಮಾಡಿದ್ದಾರಂತ ದೂರು ನೀಡಿಸಿ, ಕಳೆದ ಶನಿವಾರ ಬಂದಿಸಿ ಕೋಟ್೯ ರಜಾದಿನದ ಲಾಭ ಪಡೆದು ಜೈಲಿಗೆ ಕಳಿಸಿ ತಮ್ಮ ದುರುದ್ದೇಶ ಈಡೇರಿಸಿಕೊಂಡ ಈ ಪ್ರಕರಣದ ಹಿಂದೆ ಇವರ ಸಮಾಜದ ಮಠಒಂದರ ಕಾಣದ ಕೈಗಳು ಎನ್ನುವುದು ಬಹಿರಂಗ ಸತ್ಯ.   ಹಿರಿಯರಾದ ಗಣಪತಿ ಭಟ್ಟರು RSS ಪ್ರಚಾರಕರಾಗಿದ್ದವರು, ತುತು೯ ಪರಿಸ್ಥಿತಿ ವಿರೋದಿಸಿ ಜೈಲಿಗೆ ಹೋದವರು ಇವತ್ತಿನವರೆಗೆ ರಾಜಕೀಯಕ್ಕೆ ಬರದವರು ಸಾತ್ವಿಕರು, ವರದಳ್ಳಿಯ ಪವಾಡ ಪುರುಷ ಶ್ರೀಧರ ಸ್ವಾಮಿಯವರ ಶಿಷ್ಯರು.   ನಿರಂಜನ ಕುಗ್ವೆ ಉದಯೋನ್ಮುಖ ವ್ಯಂಗ್ಯಚಿತ್ರಗಾರರು ಇವರ ವ್ಯಂಗ್ಯಚಿತ್ರಗಳನ್ನ ಖ್ಯಾತ ಪಂಜು ಗಂಗೋಲೀಯವರು ಅಭಿನಂದಿಸಿದ್ದಾರೆ.   ಇವರಿಬ್ಬರು ಮಾಡಿದ ಅಪರಾದ ಇವರ ಜಾತಿಗೆ ಸಂಬಂದಪಟ್ಟ ಸ್ವಾಮಿ ಒಬ್ಬರ  ಅತ್ಯಾಚಾರ ಪ್ರಕರಣ ಮತ್ತು ಆ ಮಠದಲ್ಲಿ ಆ ಸಮಾಜದ ಹೆಣ್ಣು ಮಕ್ಕಳಿಗೆ ದೇವರ ಹೆಸರಲ್ಲಿ ಭಕ್ತಿ ಮತ್ತು ಸಂಸ್ಕಾರದ ಭಯ ಬಿತ್ತಿ ಕನ್ಯಾ ಸಂಸ್ಕಾರ ಎಂಬ ಸ್ವಾಮಿಗಳ ಏಕಾಂತ೦ಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕಳಿಸುವ ಕಾಯ೯ಕ್ರಮ ವಿರೋದಿಸಿ ಅಭಿಯಾನ ಪ್ರಾರಂಭಿಸಿದ್ದರು.   ಇವರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಬೆಂಬಲಿಸಿದ್ದಾರೆ ಆದರೆ ಪ್ರತ್ಯಕ್ಷವಾಗಿ ಬೆಂಬಲಿಸಲು ಅವರಿಗೆಲ್

ಮಲೆನಾಡಿನ ಸಾದಕ ಡಾಕ್ಟರ್ ವಿಗ್ನೇಶ್ ಮOಚಾಲೆ

# ಇರುವುದನ್ನ ಬಿಟ್ಟು ಇಲ್ಲದ್ದು ಹುಡುಕುವ ಮಲೆನಾಡಿಗರು ಮರೆತಿರುವ ಈ ವ್ಯಕ್ತಿಯ ಶಕ್ತಿ# ಇವರು ಡಾII ವಿಫ್ನೇಶ್ ಮಂಚಾಲೆ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ದುಡಿದವರು, ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ 777 ಎಕರೆ ಜಮೀನು ಯಾವುದೇ ತೊಂದರೆ ವಿರೋದವಿಲ್ಲದೆ ಪಡೆದು ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಕಾರಣಕತ೯ರು.   ಇವರ ಅಣ್ಣ ಡಾII ತಿಮ್ಮಪ್ಪ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಮ್ಮ ಸಾಗರ ತಾಲ್ಲೂಕಿಗೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀತಿ೯ ತಂದವರು, ಇವರ ತಮ್ಮ ಸಾಗರದ ಲಾಲ್ ಬಹುದೂರು ಪದವಿ ಕಾಲೇಜಿನ ಗಣಿತ ಪ್ರಾಧ್ಯಾಪಕರು.   ಇವರು ನಮ್ಮ ದೇಶದ ಪ್ರಖ್ಯಾತ ಒತ್ತಡ ನಿವಾ೯ಹಣೆ(stress Management) ತರಬೇತುದಾರರು ಮತ್ತು ಅಪ್ತ ಸಲಹೆಗಾರರು ಹಾಗಂತ ಇದು ಸ್ಥಳೀಯ ಜಿಲ್ಲೆಯವರಿಗೆ ಗೊತ್ತಿಲ್ಲ ಅವರು ಹೇಳಿಕೊಳ್ಳುವುದಿಲ್ಲ.   ಇವರು ಈಗ ಹಿಮಾಚಲಪ್ರದೇಶದ ಪಲಾ೦ಪುರದ ಕೃಷಿ ವಿಶ್ವವಿದ್ಯಾಲಯದಲ್ಲಿನ ಪ್ರೋಪಸರ್ ಗಳಿಗೆ ಮತ್ತು ವಿದ್ಯಾಥಿ೯ಗಳಿಗೆ ಒತ್ತಡ ನಿವ೯ಹಣೆ ಮತ್ತು ಆಪ್ತ ಸಲಹೆಗಾಗಿ ತರಬೇತಿಗಾಗಿ ಇವರನ್ನ ಅಲ್ಲಿಗೆ ಕರೆಸಿದ್ದಾರೆ ನಂತರ ಶಿಮ್ಲಾ ಕೃಷಿ ವಿಶ್ವವಿದ್ಯಾಲಯದಲ್ಲಿ ಕೂಡ.   ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಅಹ೯ತೆ ಇರುವ ಥೆರಪಿಸ್ಟ ಮತ್ತು ಟ್ರಯಿನರ್ ಆಗಿರುವ ಇವರು ಇಂತಹ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ತರಬೇತಿ ನೀಡಿದ್ದಾರೆಂದು ಹಿಮಾಚಲದ ಕೃಷಿ ವಿದ್ಯಾಲಯದ ಗೆಳೆಯ

ಸೈOಟ್ ಮೇರಿಸ್ ಐಲ್ಯಾಂಡ್ ಮಲ್ಪೆ

# St MARY'S ISLAND MALPE# # ಸೈOಟ್ ಮೆರೀಸ್ ಐಲ್ಯಾ೦ಡ್# ಕರಾವಳಿಯ ಉಡುಪಿ ಸಮೀಪದ ಮಲ್ಪೆ ಬಂದರಿನ ಹಿಂಬಾಗ ಪ್ರವಾಸೋದ್ಯಮ ಇಲಾಖೆ ಸೈOಟ್ ಮೆರೀಸ್ ಐಲ್ಯಾಂಡ್ ಗೆ ಹೋಗಲು ಪ್ರವಾಸಿ ಬೋಟುಗಳಲ್ಲಿ ಪ್ರತಿ ಪ್ರವಾಸಿಗೆ ರೂಪಾಯಿ 250 ಪಡೆದು ಕರೆದೊಯುತ್ತಾರೆ, ಸಮುದ್ರದಲ್ಲಿ 20 ನಿಮಿಷ ಪ್ರಯಾಣದ ನಂತರ ಸಣ್ಣ ದೋಣಿಗೆ ಪ್ರಯಾಣಿಕರನ್ನ ವಗಾ೯ಯಿಸುತ್ತಾರೆ. (ಕಾರಣ ದೊಡ್ಡ ಬೋಟುನಿಂದ ಇಳಿಯಲು ಜಟ್ಟಿ ಇಲ್ಲಿ ನಿಮಾ೯ಣವಾಗಿಲ್ಲ). 40 ಎಕರೆ ಪ್ರದೇಶದ ಈ ಪ್ರಶಾಂತವಾದ ದ್ವೀಪ ವಾಸ್ಕೋಡಗಾಮ ಬಂದು ತಂಗಿದ್ದರಿಂದ ಅವರಿಂದ ಈ ಹೆಸರು ಬಂದ ಬಗ್ಗೆ ಮಾಹಿತಿ ಪಲಕವಿದೆ.    ಟಾಯಿಲೆಟ್, ಬಾತ್ ರೂಂ, ಉಪಹಾರ ಮಂದಿರವಿದೆ, ಅಲ್ಲಲ್ಲಿ ನೆರಳಿಗಾಗಿ ಕುಟಿರಗಳನ್ನ ನಿಮಿ೯ಸಿದ್ದಾರೆ.    ಪ್ರವಾಸಿಗಳಿಗೆ ಈಜಾಡಲು ಆಯ್ದ ಬೀಚ್ನಲ್ಲಿ ರಕ್ಷಣಕವಚಗಳು ಲಭ್ಯವಿದೆ, ಲೈಪ್ ಗಾಡ್೯ಗಳನ್ನ ನೇಮಿಸಿದ್ದಾರೆ.   ಹಾಗಾಗಿ ಶಾಲಾ ವಿದ್ಯಾಥಿ೯ಗಳನ್ನ ರಜಾ ಪ್ರವಾಸಕ್ಕೆ ಶಿಕ್ಷಕರು ಇಲ್ಲಿಗೆ ಕರೆದೊಯ್ತಾರೆ, ಅದ೯ ದಿನದ ಈ ಸಮುದ್ರಯಾನ, ದ್ವೀಪ ಪ್ರವಾಸ ಹೊಸ ಅನುಭವ ನೀಡುತ್ತದೆ.

ಪ್ರಕೃತಿ ಮುದ್ರಣದ ಪಿ. ಪುಟ್ಟಯ್ಯ ಶಿವಮೊಗ್ಗ.

ಬಿಳಿ ವಸ್ತ್ರದ ಶುಭ್ರ ಮನಸ್ಸಿನ ಸಮಾಜವಾದಿ ಪುಟ್ಟಯ್ಯ ಇವರನ್ನು ಸನ್ಮಾನಕ್ಕೆ ಅದಾವ ರೀತಿ ಒಪ್ಪಿಸಿದರೋ ಭಗವಂತನೆ ಬಲ್ಲ.ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಡೂರಿನಿಂದ ಶಿವಮೊಗ್ಗಕ್ಕೆ ಬಂದವರಿಗೆ ಸಮಾಜವಾದಿ ಚಳುವಳಿ ಕೈಬೀಸಿ ಕರೆಯಿತು. ಡಾ,ಲೋಹಿಯಾರವರ ಆಂಗ್ರೇಜಿ ಹಟಾವೋ ಚಳುವಳಿಯಲ್ಲ ಸಕ್ರಿಯರಾದರು. ಇದಕ್ಕೂ ಮೊದಲು ಮಲ್ಲಾಡಿ ಹಳ್ಳಿಯ ರಾಘವೇಂದ್ರ ಸ್ವಾಮೀಜಿಯವರಿಂದ ಪ್ರೇರೇಪಿತರಾಗಿ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಎಂಬ ಹಳ್ಳಿಯಲ್ಲಿ ಶಾಲೆಯೊಂದನ್ನು ಆರಂಭಿಸಿದರು.ಅಲ್ಲೇ ಹಾಸ್ಟೆಲ್ ಆರಂಭಿಸಿ ಹಿಂದುಳಿದವರ ಮಕ್ಕಳು ಶಾಲೆಗೆ ಬರುವಂತೆ ಮಾಡಿದರು. ಶಿವಮೊಗ್ಗ ಸಿಟಿಯಲ್ಲಿ ಬೆಳಗ್ಗಿನ ನಾಲ್ಕು ಗಂಟೆಗೆ ಬೇರೆ ಬೇರೆ ಊರುಗಳಿಗೆ ಉದಯವಾಣಿ ಪತ್ರಿಕೆಗಳನ್ನು ವಿಂಗಡಿಸುತ್ತಾ ರಾಜಕಾರಣವನ್ನು ಶುದ್ದಗೊಳಿಸುವ ಬಗ್ಗೆ ಯೋಚಿಸತೊಡಗಿದರು.ಇವರು ತೆರೆದಿದ್ದ ಪ್ರಕೃತಿ ಪ್ರಿಂಟರ್ಸ್ ಹಲವು ಚಳುವಳಿಗಳಿಗೆ ಪ್ರೇರಕವಾಯಿತು. ಸಮಾಜವಾದಿ ಚಳುವಳಿಗಾಗಾರರಂತೂ ಇವರ ಪ್ರಿಂಟಿಂಗ್ ಪ್ರೆಸ್ ಗೆ ಬಹು ಹತ್ತಿರ. ಜನತಾದಳ ಅಧಿಕಾರಕ್ಕೆ ಬಂದಾಗ ಬಹಳ ಮಂದಿ ಸಮಾಜವಾದಿಗಳು ಅಧಿಕಾರದ ಸವಿಯುಂಡರು.ಆದರೆ ಪುಟ್ಟಯ್ಯ ಅದರ ಹತ್ತಿರವೂ ಸುಳಿಯಲಿಲ್ಲ.ಜೆ.ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಇವರಿಗೆ ಅಧಿಕಾರದ ರುಚಿಯಡುಗೆ ತಿನ್ನುವ ಬಹಳಷ್ಟು ಅವಕಾಶಗಳಿದ್ದವು. ಎಲ್ಲವನ್ನು ನಿರಾಕರಿಸಿದರು. ಅದಕ್ಕಿಂತ ಮುಖ್ಯುವಾಗಿ ಅದರ ಹತ್ತಿರವೂ ಹೋಗಲಿಲ್ಲ. ಭಾರತ ರತ್ನದಂತಹ ಅತ್ಯುಚ್ಚವಾದ ಪ್ರಶಸ್ತಿ