# ಇರುವುದನ್ನ ಬಿಟ್ಟು ಇಲ್ಲದ್ದು ಹುಡುಕುವ ಮಲೆನಾಡಿಗರು ಮರೆತಿರುವ ಈ ವ್ಯಕ್ತಿಯ ಶಕ್ತಿ#
ಇವರು ಡಾII ವಿಫ್ನೇಶ್ ಮಂಚಾಲೆ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ದುಡಿದವರು, ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ 777 ಎಕರೆ ಜಮೀನು ಯಾವುದೇ ತೊಂದರೆ ವಿರೋದವಿಲ್ಲದೆ ಪಡೆದು ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಕಾರಣಕತ೯ರು.
ಇವರ ಅಣ್ಣ ಡಾII ತಿಮ್ಮಪ್ಪ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಮ್ಮ ಸಾಗರ ತಾಲ್ಲೂಕಿಗೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀತಿ೯ ತಂದವರು, ಇವರ ತಮ್ಮ ಸಾಗರದ ಲಾಲ್ ಬಹುದೂರು ಪದವಿ ಕಾಲೇಜಿನ ಗಣಿತ ಪ್ರಾಧ್ಯಾಪಕರು.
ಇವರು ನಮ್ಮ ದೇಶದ ಪ್ರಖ್ಯಾತ ಒತ್ತಡ ನಿವಾ೯ಹಣೆ(stress Management) ತರಬೇತುದಾರರು ಮತ್ತು ಅಪ್ತ ಸಲಹೆಗಾರರು ಹಾಗಂತ ಇದು ಸ್ಥಳೀಯ ಜಿಲ್ಲೆಯವರಿಗೆ ಗೊತ್ತಿಲ್ಲ ಅವರು ಹೇಳಿಕೊಳ್ಳುವುದಿಲ್ಲ.
ಇವರು ಈಗ ಹಿಮಾಚಲಪ್ರದೇಶದ ಪಲಾ೦ಪುರದ ಕೃಷಿ ವಿಶ್ವವಿದ್ಯಾಲಯದಲ್ಲಿನ ಪ್ರೋಪಸರ್ ಗಳಿಗೆ ಮತ್ತು ವಿದ್ಯಾಥಿ೯ಗಳಿಗೆ ಒತ್ತಡ ನಿವ೯ಹಣೆ ಮತ್ತು ಆಪ್ತ ಸಲಹೆಗಾಗಿ ತರಬೇತಿಗಾಗಿ ಇವರನ್ನ ಅಲ್ಲಿಗೆ ಕರೆಸಿದ್ದಾರೆ ನಂತರ ಶಿಮ್ಲಾ ಕೃಷಿ ವಿಶ್ವವಿದ್ಯಾಲಯದಲ್ಲಿ ಕೂಡ.
ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಅಹ೯ತೆ ಇರುವ ಥೆರಪಿಸ್ಟ ಮತ್ತು ಟ್ರಯಿನರ್ ಆಗಿರುವ ಇವರು ಇಂತಹ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ತರಬೇತಿ ನೀಡಿದ್ದಾರೆಂದು ಹಿಮಾಚಲದ ಕೃಷಿ ವಿದ್ಯಾಲಯದ ಗೆಳೆಯರೊಬ್ಬರು ಪೋನ್ ಮುಖಾಂತರ ತಿಳಿಸಿದಾಗ ನನಗೆ ಹೆಮ್ಮೆ ಅನ್ನಿಸಿತು ಡಾII ವಿಘ್ನೇಶರು ನಮ್ಮ ತಾಲ್ಲೂಕಿನವರು ನಮ್ಮ ಹಿರಿಯ ಗೆಳೆಯರಾದರೂ ಈವರೆಗೂ ಈ ಬಗ್ಗೆ ಹೇಳಿಕೊಂಡಿರದ ವಿಚಾರ ತಿಳಿದು.
ಎಲೆ ಮರೆಯ ಕಾಯಿಯಂತೆ ಪ್ರಚಾರ ಪ್ರಶಸ್ತಿಯಿಂದ ದೂರವಿರುವ ಇವರಂತ ಯೋಗ್ಯರು ನಮ್ಮ ನಡುವೆ ಇರುವುದು ಆಶ್ಚಯ೯ವೇ ಸರಿ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Congratulations to Dr Vignesh. We are proud of him.
ReplyDeleteGreat, we are proud of him
ReplyDeleteGreat Sir congratulations
ReplyDeleteCongratulations uncle
ReplyDelete