Skip to main content

Posts

Showing posts from July, 2019

ಸಾಗರದ ಮಹಾ ಗಣಪತಿ ದೇವಾಲಯದ ಇತಿಹಾಸ

# ಸಾಗರದ ಪುರಾತನ ಗಣಪತಿ ದೇವಸ್ಥಾನದ ಅಚ೯ಕರ 4 ತಲೆಮಾರುಗಳ ಇತಿಹಾಸ ಈಗ ಪುಸ್ತಕವಾಗಿ#   ಎರೆಡು ವಷ೯ದ ಹಿಂದೆ ಸಾಗರದ ಪತ್ರಕತ೯ ಮಿತ್ರ ದೀಪಕ್ ಸಾಗರ್ ಪೋನಾಯಿಸಿ ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿ ದೂರದ ನಾಸಿಕ್ ನಿಂದ ಕರಾವಳಿಯ ಮಂಗಳೂರಿನ ಕದ್ರಿಗೆ ತಲುಪುವ "ಬಾರ ಪಂಥ್ " ಯಾತ್ರೆಯ ಬಗ್ಗೆ ನಾನು ಬರೆದ ಲೇಖನ ಯಾವುದೋ ಒಂದು ಪುಸ್ತಕದಲ್ಲಿ ಬಳಸಿಕೊಳ್ಳಬಹುದಾ? ಎಂದು ಕೇಳಿದ್ದರು, ದಾರಾಳವಾಗಿ ಬಳಸಿಕೊಳ್ಳಿ ಎಂದಿದ್ದೆ ಕಾರಣ ಸುಮಾರು 34 ವಷ೯ ಸಿದ್ದಾಪುರದ ಕಮಲಶಿಲೆ ಹತ್ತಿರದ ಹಲವಾರಿ ಮಠದ ಪಟ್ಟದ ಸ್ವಾಮಿಗಳಾಗಿದ್ದ ಸೋಮನಾಥ ಬಾಬರವರು ಈ ಬಾರ ಪಂಥ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ನನಗೆ ಆದೇಶಿಸಿದ್ದರು.   ನಿನ್ನೆ ಬೆಳಿಗ್ಗೆ ಪತ್ರಕತ೯ರ ದಿನಾಚಾರಣೆಯ೦ದು ದೀಪಕ್ ಸಾಗರ್ ಮತ್ತು ಅವರ ಪತ್ನಿ ಶ್ರೀಮತಿ ಸಹನಾ ಈ ಪುಸ್ತಕ ಗೌರವ ಪ್ರತಿಯಾಗಿ ನೀಡಿದರು.    *ಶ್ರೀಮಹಾಗಣಪತಿ ದೇವಾಲಯದ ಇತಿಹಾಸ* ಎಂಬ ಈ ಪ್ರಸ್ತಕ ಸಾಗರದ ಪುರಾತನ ಮಹಾಗಣಪತಿ ದೇವಸ್ಥಾನದ ಪ್ರದಾನ ಅಚ೯ಕ  ವಿದ್ವಾನ್ ಪಿ.ಎಲ್.ಗಜಾನನ ಭಟ್ ರ ಪುತ್ರಿ ಶ್ರೀಮತಿ ಸಹನಾ ಸಂಪಾದಿಸಿ ಪ್ರಕಟಿಸಿದ್ದಾರೆ.   ಸುಮಾರು ನಾಲ್ಕು ಶತಮಾನದ ಹಿಂದೆ ಕೆಳದಿ ಅರಸರಾದ ವೆಂಕಟಪ್ಪ ನಾಯಕರು (ದೀಘ೯ ಕಾಲ ರಾಜ್ಯ ಬಾರ ಮಾಡಿದ ಅರಸರು) ಈಗಿನ ಸಾಗರ ಪಟ್ಟಣದ ನಿಮಾ೯ತರು (ಸದಾಶಿವ ಸಾಗರ ಆಗಿನ ಹೆಸರು, ಅವರ ಅಜ್ಜ ರಾಜ ಸದಾಶಿವರ ಸ್ಮರಣಾಥ೯) ಗಣಪತಿ ದೇವಾಲಯ ಕೂಡ ಅ

ಎಲ್ಲಿಂದ ಎಲ್ಲಿಗೋ ನಂಟು ಮಾಡುವ ಪೇಸ್ ಬುಕ್

*ಸೋಷಿಯಲ್ ಮೀಡಿಯಾದ ನಂಟು* ಮೊನ್ನೆ ಉಪ್ಪಿನಂಗಡಿಯ ಕಿರಣ್ ಮನ್ನಾಜೆ ಎಂಬ FB ಗೆಳೆಯರು ಪುತ್ತೂರಿನ ಶಂಕರ ಭಟ್ಟರ 2ವಷ೯ದ ಹಿಂದಿನ ಹುಟ್ಟುಹಬ್ಬದ೦ದು ರಿಪ್ಪನ್ ಪೇಟೆಯ ಮಲ್ಲಿಕಾ ವೆಜ್ ಲ್ಲಿ ಬೋಜನ ಮಾಡಿದ ನೆನಪಿನ ಪೋಟೋ ಅಂತ ಹಾಕಿದ್ದರು ಆದರೆ ಅದು ಆನಂದಪುರದ ನಮ್ಮ ಮಲ್ಲಿಕಾ ವೆಜ್ ಎಂದು ಉತ್ತರಿಸಿದ್ದೆ. ಅದಕ್ಕೆ ಅವರು ಈ ಮಾಗ೯ದಲ್ಲಿ ಹೋಗುವಾಗ ಯಾವತ್ತೂ ಇದೇ ರೆಸ್ಟೋರೆಂಟನಲ್ಲಿ ಉಟೋಪಚಾರ ಮಾಡುತ್ತೇವೆ ಇದು ತಮ್ಮದೆಂದು ತಿಳಿದು ಸಂತೋಷ ಆಯಿತು ಅಂತ ಉತ್ತರ ನೀಡಿದ್ದರು.   ಇನ್ನೊಮ್ಮೆ ಈ ಕಡೆ ಬಂದಾಗ ಬೇಟಿ ಮಾಡಲು ವಿನಂತಿಸಿದ್ದೆ, ಇವತ್ತು ಅಕಸ್ಮಿಕವಾಗಿ ಮದ್ಯಾಹನ ಊಟಕ್ಕೆ ನಮ್ಮ ಮಲ್ಲಿಕಾ ವೆಜ್ ಗೆ ತಲುಪಿದ್ದರು , ಪರಸ್ಪರ ಪರಿಚಯಿಸಿಕೊಂಡೆವು ಮೊನ್ನೆಯ ಶಂಕರ ಭಟ್ಟರ ಹುಟ್ಟುಹಬ್ಬಕ್ಕೆ ತಡವಾಗಿ ಶುಭಾಷಯ ತಿಳಿಸಿದೆ ಈ ಎಲ್ಲಾ ನೆನಪಿಗಾಗಿ ನನ್ನ ಆತಿಥ್ಯ ಸ್ವೀಕರಿಸಲು ಒತ್ತಾಯಿಸಿ ಒಪ್ಪಿಸಿದೆ, ಈಗ ಸ್ವಣ೯ವಲ್ಲಿ ಮಠ ತಲುಪಿದವರು ಆತಿಥ್ಯಕ್ಕೆ ಪ್ರತಿ ವಂದನೆ ತಿಳಿಸಿದ್ದಾರೆ.   ಟೇಸ್ಟಿಂಗ್ ಪೌಡರ್, ಅಜಿನೋಮೊಟೊ, ಕೃತಕ ಬಣ್ಣ, ಬಳಸಿದ ಎಣ್ಣೆ, ನಕಲಿ ಚಹಾ ಪುಡಿಗಳನ್ನ ಕಟ್ಟುನಿಟ್ಟಾಗಿ ನಿಷೇದ ಮಾಡಿರುವ ನಮ್ಮ MALLIKA VEG  ಗೆ ದೂರ ದೂರದಿಂದಲೂ ಹುಡುಕಿ ಬರುತ್ತಾರೆ.   ಇವತ್ತಿನ ಅತಿಥಿಗಳನ್ನ ಮುಖತ: ಬೇಟಿ ಮಾಡಿಸಿದಕ್ಕಾಗಿ Facebookಗೆ ಅಭಾರಿ.

* ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ ಪ್ರಬಂದ ಅಂಬುತೀಥ೯*

*ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ. ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.   ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ. ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ. ಮೊನ್ನೆ ಅವರ ಹುಟ್ಟುಹಬ್ಬ ಕೂಡ. ವಕ್ಷ ಸ್ಥಲೆ....... ಅದು ಬೆಳಿಗ್ಗೆ ಜಾಮ ಐದುವರೆ.... ಕಟ್ಟಿನಮಡಿಕೆ ಗಣೇಶ ಭಟ್ರ ಕೊಟ್ಟಿಗೆ. ವಸುಧಮ್ಮ ಜೋರಾಗಿ " ಗಂಗೆ ನಿಂಗೆ ಅವಳೂ ಮಗಳೂ ಕಣೆ... ತಸಾರ ಮಾಡಕಾಗದು..‌ ಒಂಚೂರು ಅವಳಿಗೂ ಮುರ ಕೊಡು.... ಕಿಟ್ಟು ಕಾಲುಮೆಟ್ಟಬ್ಯಾಡ ಕಣೋ.. ಅಯ್ಯೋ ದಾಸಿ ನಿಂಗೀ ಬೆಳಿಗ್ಗೆ ಕುತ್ತಿಗೆ ತೊರ್ಸುತಾ ಕೂತರೆ ಆಯಿತು ನನ್ನ ಕಥೆ ಆಮೇಲ ನೋಡೋಣ.... ಭಾಗಿ ನಿನ್ನ ದೊಡ್ಡ ಮಗಳು  ಶಾರಿಗೆ ಗುಡ್ಡ ದಲ್ಲಿ ಹಾಲು ಕೊಟ್ಟಕೊಂಡು ಬರ್ಬ್ಯಾಡ್ಯೆ‌ ಮಾರಾಯ್ತಿ.... ಮನೇಲಿ ಒಬ್ಬ

ಶರಾವತಿ...?

ಶರಾವತಿ ಉಳಿಸುವ ಭರದಲ್ಲಿ ಬೆಂಗಳೂರು ವಿರೋದಿಸುವ ಅನೇಕ ಹೇಳಿಕೆಗಳು ನಮ್ಮ ರಾಜದಾನಿ ಬೆಂಗಳೂರಿಗರಿಗೆ ಒಂದು ರೀತಿಯ ಭ್ರಮ ನಿರಸನ, ಮಲೆನಾಡಿಗರು ಬೆಂಗಳೂರನ್ನ ಈ ರೀತಿ ವಿರೋದಿಸುವುದು ಸರಿಯೇ ಅಂತ ಇಲ್ಲಿ೦ದ ಉದ್ಯೋಗ ಅರಸಿ ಅಲ್ಲಿ ನೆಲೆ ಕಂಡ ಅನೇಕರು ಪ್ರತಿಕ್ರಿಯಿಸಿದ್ದಾರೆ, ಅದು ಸರಿ ಕೂಡ ಇಡೀ ರಾಜ್ಯದ ಜನ ರಾಜದಾನಿಗೆ ಅವಕಾಶ ಅರಸಿ ಬರುವಾಗ ಅವರನ್ನೆಲ್ಲ ಉಳಿಸಲಿಕ್ಕಾಗಿ ಬೆಂಗಳೂರು ಕೂಡ ತನ್ನ ಸ್ವoತಿಕೆ ಮತ್ತು ಸಂಪನ್ಮೂಲಗಳನ್ನ ಕಳೆದುಕೊಂಡಿದೆ ಈಗ ಅಲ್ಲಿ ನೀರು ಕೇಳುವವರು ಯಾರು? ಅವರೆಲ್ಲ ನಮ್ಮ ಊರವರೆ ಅಕ್ಕಪಕ್ಕದವರೇ, ಹಾಗಂತ ಅವರೇನು ಶರಾವತಿಯಿಂದಲೇ ನೀರು ತನ್ನಿ ಅಂತ ಹೇಳಿಲ್ಲ, ಕೇಳಿಲ್ಲ!, ಅವರೂ ಕೂಡ ಶರಾವತಿ ಉಳಿಸಲು ಕೈ ಜೋಡಿಸುವವರೇ.   ಶರಾವತಿ ನೀರು ಸಾಗರಕ್ಕೆ ತರುವಾಗ ನಾವಾರು ವಿರೋದಿಸಲಿಲ್ಲ ಇದರಿಂದ ಮಲೆನಾಡಿಗರು ಸ್ವಾಥಿ೯ಗಳಲ್ಲವೇ ಎಂಬ ಬಾವನೆ ಕೂಡ ಬೆಂಗಳೂರು ನಿವಾಸಿಗಳಲ್ಲಿ ಉ೦ಟಾಗಿದೆ.   ಶರಾವತಿ ನದಿ ಉಳಿಯಬೇಕು ಉಳಿಸಬೇಕು ಎಂಬ ಕಾಳಜಿ ಮತ್ತು ಅವಸರದಲ್ಲಿ ಬೆಂಗಳೂರಿಗರನ್ನ ಅವಮಾನಿಸುವಂತ ಕೆಲ ಮಾತುಗಳು ಬಂದಿರುವುದು ಅನೇಕ ತಪ್ಪು ಕಲ್ಪನೆಗೆ ಕಾರಣ ಆಗಿರಬಹುದು ಇದು ಈಗ ಬೆಂಗಳೂರಿಗರು ವಸ೯ಸ್ ಮಲೆನಾಡಿಗರೆಂಬ ಛಾಯ ಯುದ್ದ ಪ್ರಾರಂಭ ಆಗಿದೆ ಇದರಿಂದ ಅವರ ಸವಾಲುಗಳು ಬಹು ಜನರು ಸರಿ ಎಂದು ತಲೆ ತೂಗುವಂತೆ ಪ್ರಯೋಗಿಸುತ್ತಿದ್ದಾರೆ, ಶರಾವತಿ ನದಿ ನೀರು ವಿದ್ಯುತ್ ಉತ್ಪಾದಿಸುವ ಮೊದಲೇ ಸಾಗರಕ್ಕೆ ಹೇಗೆ ಒಯ್ಯಲು ಬಿಟ್ಟರು? ಈಗ

ಮಲೆನಾಡಿನ ಪಶ್ಚಿಮ ಘಟ್ಟದ ಸ್ವಾದಿಷ್ಟ ಆಹಾರ

* ಮಲೆನಾಡಿನ ಸ್ವಾದಿಷ್ಟ  ಆಹಾರಕ್ಕೆ ಬೆಲೆ ಕಟ್ಟಲಾಗುವುದೇ?* ಇವತ್ತು ಬೆಳಿಗ್ಗೆ ನಮ್ಮ ಅಡುಗೆ ಮನೆಯಲ್ಲಿ ವಿಶೇಷ ಅಡುಗೆಯ ಘಮ.... ಕಾರಣ     ಕಳಲೆ ಪಲ್ಯದೊಂದಿಗೆ ತಟ್ಟೆ ಇಡ್ಲಿ, ಕೆಸುವಿನ ಎಲೆಯ ಪತ್ರೊಡೆ, ಹುರುಳಿಕಾಳಿನ ಹುಳ್ಳಿ ಕಟ್ಟು, ಹಲಸಿನ ಹಣ್ಣು, ಜೊತೆಗೆ ಅಕ್ಕಿ ಹಪ್ಪಳ, ಮಾವಿನ ಮಿಡಿ ಉಪ್ಪಿನ ಕಾಯಿ, ಹಲಸಿನ ಸಿಹಿ ಹಪ್ಪಳ, ಸಂಡಿಗೆ ಮೆಣಸು ಹೀಗೆ ಮಲೆನಾಡಿನ ಪಶ್ಚಿಮ ಘಟ್ಟದ ಆರಿದ್ರಾ ಮಳೆಯಲ್ಲಿ  ಊಟಕ್ಕೆ ಒಂದು ಸ್ವಾದಿಷ್ಟವಾದ ಪಾರಂಪರಿಕವಾದ ರುಚಿ, ಘಮಗಳು   ಆವರಿಸಿತ್ತು.   ಹಣ ಕೊಟ್ಟರೂ ಸಿಗದ, ಮಲೆನಾಡಿಗರಿಗೆ ಮಾತ್ರ ಗೊತ್ತಿರುವ ಈ ಆಹಾರಗಳು ಇವತ್ತು ಮಲೆನಾಡಿಗರ ಅಡುಗೆ ಮನೆಗಳಿಂದಲೂ ನಿಗ೯ಮಿಸಿದೆ ಇವುಗಳ ಜಾಗಕ್ಕೆ ರೆಡಿಮೇಡ್ ಮಸಾಲದಿಂದ ಹಿಡಿದು ಮ್ಯಾಗಿವರೆಗೆ ಅಕ್ರಮಿಸಿದೆ.   ಅಸಲಿಗೆ ಇವುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ! ಆದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇವುಗಳನ್ನ ಸಂಗ್ರಹಿಸಿ ಹೆಚ್ಚು ಖಚಿ೯ಲ್ಲದೆ ರುಚಿಯಾದ ಅಡುಗೆ ತಯಾರಿಸಬಹುದು.   ಇದು ಶುಚಿ ರುಚಿ ಜೊತೆಗೆ ನೈಸಗಿ೯ಕವಾಗಿ ಸಿಗುವ ಸಾವಯವ ಆಹಾರ ಪದಾಥ೯ ಕೂಡ.

ಸಾಗರ ತಾಲ್ಲೂಕಿನ ಜೇನು ಮಿತ್ರ ನಾಗೇ೦ದ್ರ ಸಾಗರ್

*ಗೆಳೆಯ ನಾಗೇಂದ್ರ ಸಾಗರರಿOದ ನಮ್ಮ ಮನೆಯ ಜೇನುಗಳ ಕ್ಷೇಮ ವಿಚಾರಣೆ *   ನಾಗೇ೦ದ್ರ ಸಾಗರ್ ಸಾಗರ ತಾಲ್ಲೂಕಿನ ಜೇನು ಸಹಕಾರ ಸಂಘದ ಅಧ್ಯಕ್ಷರು ಅವರಿ೦ದ 6 ಜೇನು ಪೆಟ್ಟಿಗೆ ಖರೀದಿಸಿದ್ದೇನೆ ಇವತ್ತು ಮಳೆಗಾಲ ಪ್ರಾರ೦ಭ ಆದ್ದರಿಂದ ಬಂದು ಜೇನಿನ ಬಂದುಗಳ ಮಿಲಾ ಕತ್ ಮಾಡಿದರು.   10 ರಿಂದ 15 ಜೇನುಗಳು ಅವರಿಗೆ ಮುತ್ತಿಕ್ಕಿದವು, ಮಳೆಗಾಲ ಆಹಾರ ಕೊರತೆ ಇರುವುದರಿಂದ ವಾರಕ್ಕೆ ಎರಡು ದಿನ ಸಕ್ಕರೆ ಪಾಕ ಇಡಲು ತಿಳಿಸಿದ್ದಾರೆ. ಅವರ ಸೆಲ್ ನಂಬರ್ 9449501613, ಸಂಜೆ 7.30 ರ ನಂತರ ಅವರನ್ನ ಸಂಪಕಿ೯ಸ ಬಹುದು.