Skip to main content

Posts

Showing posts with the label Great writer Mr Lankesh Memorial should be construct in Shimog Distrct

ಶಿವಮೊಗ್ಗ ಜಿಲ್ಲೆಯಲ್ಲಿ ಲಂಕೇಶರ ಸ್ಮಾರಕ ನಿರ್ಮಾಣಕ್ಕೆ ಲಂಕೇಶರ ಅಭಿಮಾನಿಗಳು ಮುಂದೆ ಬರಲಿ.

#ನಮ್ಮ_ಜಿಲ್ಲೆಯ_ಕವಿ_ಬರಹಗಾರ_ಚಲನಚಿತ್ರ_ನಿರ್ದೇಶಕ_ಪತ್ರಕತ೯_ಲಂಕೇಶರ_ಸ್ಮಾರಕ_ಯಾಕೆ_ಇಲ್ಲ !?   ಶಿವಮೊಗ್ಗ ಜಿಲ್ಲೆ ವಿಭಜನೆ ನಂತರ (1998 ರ ನಂತರ) ಲಂಕೇಶರ ಹುಟ್ಟೂರು ದಾವಣಗೆರೆಗೆ ಸೇರಿದ್ದರೂ ಲಂಕೇಶರು ಶಿವಮೊಗ್ಗ ಜಿಲ್ಲೆಯವರೇ ಅನ್ನುವ ಭಾವನೆ ಹಾಗೇ ಉಳಿದಿದೆ.   ಲಂಕೇಶರ ಸ್ಮರಣೆಗಾಗಿ ಅವರ ಅಪಾರ ಅಭಿಮಾನಿ ಬಳಗ ಅವರ ಹುಟ್ಟೂರಿನಲ್ಲಿ ಅಥವ ಶಿವಮೊಗ್ಗದಲ್ಲಿ ಸ್ಮಾರಕ ನಿಮಿ೯ಸಲು ಪ್ರಯತ್ನಿಸಬಾರದೇಕೆ ? ಅವರ ಪುಸ್ತಕ, ಲಂಕೇಶ್ ಪತ್ರಿಕೆಯ ಹಿಂದಿನ ಪ್ರತಿಗಳು, ಅವರ ಪೋಟೋ ಗ್ಯಾಲರಿ, ಅವರ ಚಲನಚಿತ್ರ, ಅವರು ಬರೆದ ಚಲನಚಿತ್ರಗೀತೆಗಳು, ಜಿಲ್ಲೆಯಲ್ಲಿ ಪ್ರಾರಂಭ ಆದ ಸಮಾಜವಾದಿ ಪಕ್ಷ, ರೈತ ಸಂಘದ ಒಡನಾಟ ವಿವರಿಸುವ ದಾಖಲೆಗಳು ಮುಂದಿನ ತಲೆಮಾರಿಗೆ ತಲುಪಿಸ ಬಹುದಲ್ಲವೆ?   ಮೊನ್ನೆ ಲಂಕೇಶರ ಹುಟ್ಟೂರಿನ ಮನೆ ಹಿತ್ತಲಿನ ಬೃಹತ್ ಹುಡೇವು ಚಿತ್ರ ಪೋಸ್ಟ್ ಮಾಡಿ ಈ ಬಗ್ಗೆ ಲಂಕೇಶರು ಎಲ್ಲಾದರೂ ಉಲ್ಲೇಖಿಸಿದ್ದಾರ? ಎಂಬ ಪ್ರಶ್ನೆಗೆ ಪತ್ರಕತ೯ರಾದ #ಶಶಿ_ಸಂಪಳ್ಳಿ ಲಂಕೇಶರ ಹುಳಿ ಮಾವಿನ ಮರ ಪುಸ್ತಕದಲ್ಲಿ ಬರೆದ ಬಗ್ಗೆ ಮತ್ತು ಒಮ್ಮೆ ಅವರ ಮನೆಗೆ ಹೋದಾಗ ಶಶಿ ಸಂಪಳ್ಳಿ ಈ ಹುಡೇವು ನೋಡಿ ಬಂದ ಬಗ್ಗೆ ನೆನಪಿಸಿದ್ದರು.   ಇನ್ನೊಬ್ಬ ಗೆಳೆಯರಾದ #ಸುಬ್ರಮಣ್ಯ_ಕಲ್ಮನೆ ಹುಳಿ ಮಾವಿನ ಮರದಲ್ಲಿ ಈ ಹುಡೇವು ಬಗ್ಗೆ ಬರೆದ ಪುಟ ನನಗೆ ಕಳಿಸಿದ್ದರು ಅದರಲ್ಲಿ ಲಂಕೇಶರು ಬರೆದದ್ದು... ...