Blog number 1919. ಆನಂದಪುರಂನ ರಂಗನಾಥ ದೇವಾಲಯದಲ್ಲಿ ಗರುಡ ಗಂಭದ ಬುಡದಲ್ಲಿ 517 ವರ್ಷಗಳ ಹಿಂದೆ ಹೊಸಗುಂದ ಸೀಮೆಯ ನಾಯಕರು ದೇವರ ಹರಿವಾಣ ಸೇವೆಗೆ ಎರೆಡು ಗ್ರಾಮಗಳನ್ನು ದತ್ತಿ ನೀಡಿದ ಶಿಲಾ ಶಾಸನ.
#ಆನಂದಪುರಂನ_ರಂಗನಾಥ_ಸ್ವಾಮಿ_ದೇವಾಲಯಕ್ಕೆ_ಕ್ರಿ_ಶ_1507ರಲ್ಲಿ_ಹರಿವಾಣ_ಸೇವೆಗೆ #ಆಗ_ಈ_ದೇವರು_ಕೋಯಿಪುರದ_ತಿರುವೆಂಗಲನಾಥ #ನಂತರ_ಕೋದಂಡರಾಮ_ಟಿಪ್ಪು_ಸುಲ್ತಾನ್_ಆನಂದಪುರಂ_ಕೋಟೆಗೆ_ಬರುವ_ಹಿಂದಿನ_ದಿನ #ರಂಗನಾಥನೆಂದು_ಮರು_ನಾಮಕರಣ #ಎರೆಡು_ಗ್ರಾಮಗಳನ್ನು_ದತ್ತಿ_ಕೊಟ್ಟಿರುವ_ಶಿಲಾಶಾಸನ #ಶಿಲಾಶಾಸನದಲ್ಲಿ_ದಾಖಲಾಗಿರುವ_ವಿವರ #ಆನಂದಪುರಂ_ರಂಗನಾಥದೇವಾಲಯದ_ಗರುಡಗಂಭದಲ್ಲಿ_ಉಲ್ಲೇಖ_ಆಗಿರುವುದು. #ದೇವಾಲಯದ_ನವೀಕರಣದಲ್ಲಿ_ಶಿಲಾಶಾಸನ_ಸ್ಥಳಾಂತರವಾಗಿದೆ #ಈ_ಶಿಲಾಶಾಸನದ_ಪಕ್ಕದಲ್ಲಿ_ಕಾಲಮಾನ_ಮಹತ್ವ_ಮತ್ತು_ಅದರಲ್ಲಿನ_ಉಲ್ಲೇಖ_ಕನ್ನಡದಲ್ಲಿ_ಮಾಹಿತಿ_ಪಲಕ_ಇಡಬೇಕು. #ಈ_ಶಿಲಾಶಾಸನದ_ಸಂರಕ್ಷಣೆಗೆ_ಹೆಚ್ಚಿನ_ಒತ್ತು_ನೀಡಬೇಕು. ಸ್ಥಳಿಯ ಇತಿಹಾಸ ಆಸಕ್ತರು ನಮ್ಮ #ಆನಂದಪುರಂನ_ರಂಗನಾಥ ದೇವಾಲಯದ ಬಗ್ಗೆ ಮಾಹಿತಿ ಕೇಳಿದ್ದಾರೆ ಅವರಿಗಾಗಿ ಈ ಮಾಹಿತಿ ಮತ್ತು ಇದು ಸದ್ಯದಲ್ಲೇ_ಬಿಡುಗಡೆ_ಆಗಲಿರುವ ನನ್ನ #ಆನಂದಪುರಂ_ಇತಿಹಾಸ ಪುಸ್ತಕದಲ್ಲಿ ದಾಖಲು ಆಗಿದೆ. 1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ. ಈ ಗರುಡಗಂಭ 3.5 ಅಡಿ ಎತ್ತರ ಮತ್ತು 2 ಅಡಿ ಅಗಲ ಇದೆ, 18 ಸಾಲಿನಲ್ಲಿ ಅಕ್ಷರಗಳಿದೆ. ಒಂದು ಕಾಲದಲ್ಲಿ ಶ್ರೀ ರಂಗನಾಥ ದೇವಾಲಯದ ಒಳ ಆವರಣದಲ್ಲಿ ದೇವಾಲಯದ ದ್ವಜ ಸ್ಥಂಭದ ಕ...