Skip to main content

Posts

Showing posts with the label Tender bomboo shoot special Biryani is favourite for all ages people and it's easy to prepare

Blog number 890. ಕಳಲೆ ಬಿರಿಯಾನಿ ಎಲ್ಲ ಜಮಾನದವರಿಗೂ ಪೆವರಿಟ್ ಮತ್ತು ಸುಲಭವಾಗಿ ತಯಾರಿಸಬಹುದು

#ಕಳಲೆ_ಪ್ರಿಯರಿಗಾಗಿ_ಇನ್ನೊಂದು_ರೆಸಿಪಿ #ಸಂಪ್ರದಾಯಿಕ_ಕಳಲೆ_ಪದಾರ್ಥ_ಈಗಿನ_ತಲೆಮಾರಿಗೆ_ಇಷ್ಟವಿಲ್ಲ_ಯಾಕೆ? #ಅವರಿಗಾಗಿ_ಇಲ್ಲಿದೆ_ಕಳಲೆ_ಬಿರಿಯಾನಿ_ರೆಸಿಪಿ.   ನಿನ್ನೆ ಕಳಲೆ ಗಟ್ಟಿ ಗಸಿಯ ಪಲ್ಯ ಮತ್ತು ಅಕ್ಕಿ ರೊಟ್ಟಿಯ ಸಂಪ್ರದಾಯಿಕ ಅಡುಗೆಯ ಬಗ್ಗೆ ಪೋಸ್ಟ್ ಮಾಡಿದ್ದೆ ಮತ್ತು ಅನೇಕ ಗ್ರೂಪಿನಲ್ಲಿ ಶೇರ್ ಮಾಡಿದ್ದೆ ಅದರಲ್ಲಿ ಕೆಲವರು ಈಗಿನ ಜಮಾನದ ಮಕ್ಕಳು ಈ ಸಂಪ್ರದಾಯಿಕ ಕಳಲೆ ಪಲ್ಯ, ಸಾರು ಮತ್ತು ಮಜ್ಜಿಗೆ ಹುಳಿ ಯಾಕೋ ಇಷ್ಟ ಮಾಡುತ್ತಿಲ್ಲ ಅಂದಿದ್ದರು.   ಅವರಿಗಾಗಿ ಇಲ್ಲಿ ಕಳಲೆ ಬಿರಿಯಾನಿ ರೆಸಿಪಿ ಹಾಕಿದ್ದೇನೆ ನೋಡಿ.     ಸ್ವಲ್ಪ ದೊಡ್ಡ ಸ್ಲೈಸ್ ಆಗಿ ಕತ್ತರಿಸಿದ ಕಳಲೆ ಮೂರು ದಿನ ನೀರಲ್ಲಿ ನೆನಸಿ ಪ್ರತಿ ದಿನ ನೀರು ಬದಲಿಸಿ ಅದರಲ್ಲಿರುವ ನೈಸರ್ಗಿಕ ಟಾಕ್ಸಿನ್ ನಿವಾರಿಸಿ ನಂತರ ಅಡುಗೆಗೆ ಮೊದಲು ಚೆನ್ನಾಗಿ ತೊಳೆದು ಉಪ್ಪು ಮತ್ತು ಹಳದಿ ಪುಡಿ ಹಾಕಿ ಬೇಯಿಸಿಕೊಳ್ಳಿ ನಂತರ ತಣ್ಣಗಾದ ನಂತರ ನೀರು ಬಸಿದು ಇದಕ್ಕೆ ಮೊಸರು, ಕಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 10 ನಿಮಿಷ ಮ್ಯಾರಿನೇಟ್ ಮಾಡಿ.    ತುಪ್ಪ ಅಥವ ರಿಪೈನ್ಡ್ ಎಣ್ಣೆಯಲ್ಲಿ ನೀರುಳ್ಳಿ / ಟೋಮೋಟೊ ಹುರಿದು ಅದಕ್ಕೆ ಒಂದು ಕಪ್ ಅಕ್ಕಿ ಹಾಕಿ ಹುರಿಯಿರಿ ನಂತರ ಮ್ಯಾರಿನೇಟೆಡ್ ಕಳಲೆ ಸೇರಿಸಿ ಹುರಿಯಿರಿ, ನಿಮಗಿಷ್ಟವಾದ ರೀತಿಯ ಬಿರಿಯಾನಿ ಮಸಾಲೆ ತಯಾರಿಸಿ ಸೇರಿಸಿ ಇದಕ್ಕೆ ಎರೆಡು ಕಪ್ಪು...