Blog number 2213. ಛತ್ರಪತಿ ರಾಜಾರಾಮ ಮಹಾರಾಜರು ಕೆಳದಿ ರಾಣಿ ಚೆನ್ನಮ್ಮರ ಆಶ್ರಯದಲ್ಲಿ ತಂಗಿದ್ದ ರಹಸ್ಯ ಅರಮನೆ ಬಿದನೂರು ನಗರದ ಅರಮನೆ ಕೊಪ್ಪದಲ್ಲಿದೆ.
#ಬಿದನೂರು_ನಗರ_ಸಮೀಪದ_ಅರಮನೆಕೊಪ್ಪದ_ರಹಸ್ಯ_ಅರಮನೆ #ಛತ್ರಪತಿಶಿವಾಜಿಮಹಾರಾಜರ_ಮಗ_ಛತ್ರಪತಿರಾಜಾರಾಮಮಹಾರಾಜ #ಕೆಳದಿ_ರಾಣಿಚೆನ್ನಮ್ಮ_ಆಶ್ರಯದಲ್ಲಿದ್ದದ್ದು_ಈ_ರಹಸ್ಯ_ಅರಮನೆಯಲ್ಲಿ #ಖ್ಯಾತ_ಮರಾಠಿ_ಟೀವಿ_ಎಬಿಪಿ_ಮಾಜಾ_ಡಾಕ್ಯುಮೆಂಟರಿ_ಮಾಡಿ_21_ಮಾಚ್೯_2021_ಪ್ರಸಾರ_ಮಾಡಿದೆ. #ಈಗ_ಶಿವಮೊಗ್ಗ_ಜಿಲ್ಲೆ_ಇತಿಹಾಸ_ಎಕ್ಸ್_ಫ್ಲೋರ್_ಮಾಡುತ್ತಿರುವ #ಖ್ಯಾತ_ಕನ್ನಡದ_ಡಿಜಿಟಲ್_ಮಾಧ್ಯಮ_ಇದನ್ನು_ಸರಣಿಯಾಗಿ_ಪ್ರಕಟಿಸುತ್ತಿದೆ #ಖ್ಯಾತ_ಇತಿಹಾಸ_ಸಂಶೋದಕ_ಅಂಬ್ರಯ್ಯಮಠ_ಮತ್ತು_ಈ_ಅರಮನೆಯ_ವಾಸಿ #ಮಂಜುನಾಥ_ಭಟ್ಟರು_ವಿವರಣೆ_ನೀಡಿದ್ದಾರೆ #ಇತಿಹಾಸ_ಆಸಕ್ತರಿಗಾಗಿ_ಮಾಹಿತಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಚೆನ್ನಗಿರಿ ಸಮೀಪದ ಹೊದಿಗೆರೆಯಲ್ಲಿದೆ, ಇವರ ಮಗ ಛತ್ರಪತಿ ರಾಜಾರಾಮ ಮಹಾರಾಜರನ್ನು ಕೆಳದಿ ರಾಣಿ ಚೆನ್ನಮ್ಮ ಆಶ್ರಯ ನೀಡಿ ರಹಸ್ಯವಾಗಿ ಬಚ್ಚಿಟ್ಟ ಮನೆ ಬಿದನೂರು ನಗರದ ಸಮೀಪದ ಅರಮನೆ ಕೊಪ್ಪದಲ್ಲಿದೆ. ವಿಶೇಷ ಅಂದರೆ ಬಿದನೂರಿನಿಂದ 17 ಕಿಮಿ ದೂರದ ಮತ್ತಿ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ಕೊಪ್ಪ ಎಂಬಲ್ಲಿ (ಕೊಲ್ಲೂರು ಮಾಗ೯ದಲ್ಲಿ) ಹಾಲಿ ಮಂಜುನಾಥ ಭಟ್ಟರ ಸುಪದಿ೯ಯಲ್ಲಿರುವ ಬೃಹತ್ ಮನೆ (ಒಂದು ಕಾಲದಲ್ಲಿ ಅರಮನೆ) ಯಲ್ಲಿ ಸುಮಾರು ಎರೆಡು ವರ್ಷ ಛತ್ರಪತಿ ರಾಜಾರಾಮ ಮಹಾರಾಜರನ್ನ ರಾಣಿ ಚೆನ್ನಮ್ಮ ರಹಸ್ಯವಾಗಿ ರಕ್ಷಿಸಿದ್ದಳು, ಈ ಕಾಲದಲ್ಲಿಯೆ ಛತ್ರಪತಿ ರಾಜಾರಾಮರು ...