https://youtube.com/shorts/R1kSOjm-2Ck?feature=shared #ಆಗ್ರಾ_ಪೇಠಾ_ಆನಂದಪುರಂನಲ್ಲಿ. #ವಿಶ್ವವಿಖ್ಯಾತ_ತಾಜ್_ಮಹಲು_ನೋಡಲು_ಬರುವವರಿಗಾಗಿ_ಸಿಹಿ_ಮಿಟಾಯಿ #ಆಗ್ರಾದಲ್ಲಿ_ದೊಡ್ಡ_ಪ್ರಮಾಣದಲ್ಲಿ_ಪೇಠಾ_ತಯಾರಾಗುತ್ತೆ #ಮಲೆನಾಡಿನ_ಬೂದುಗುಂಬಳ_ಸಕ್ಕರೆ_ಸೇರಿದ_ಮಿಟಾಯಿಗೆ_ಪೇಠಾ_ಎಂಬ_ಹೆಸರು. #ಇವತ್ತು_ನನ್ನ_ಮಗ_ತಯಾರಿಸಿದ_ಪೇಠಾ_ನೋಡಿ. 1973-74 ರಲ್ಲಿ ನಮ್ಮ ಊರಿನ ಜಗದೀಶಣ್ಣ (ಈಗ ಆನಂದಪುರ೦ನ ಬಸ್ ನಿಲ್ದಾಣದ ಎದುರು ಭಾರತ್ ಕೆಫೆ ಹೋಟೆಲ್ ಮಾಲಿಕರು) ದೈಹಿಕ ಶಿಕ್ಷಕರಾಗಿದ್ದ ಶಿಸ್ತಿನ ಸಿಪಾಯಿ ಎಸ್. ಆರ್.ಕೃಷ್ಣಪ್ಪರ ಶಿಷ್ಯರಾಗಿದ್ದರು, ಅವರು ಬೆಂಗಳೂರಿನ ಸೇವಾದಳದ ರಾಮರಾವ್ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಶರಣಾಗತರಾಗಿದ್ದ ಚಂಬಲ್ ಕಣಿವೆ ಡಕಾಯಿತರ ಪುನರ್ವಸತಿಗಾಗಿ ಪ್ರಾರಂಬಿಸಿದ್ದ ಗಾಂಧೀ ಆಶ್ರಮದಲ್ಲಿ ಸೇವೆ ಮಾಡಲು ಜಗದೀಶಣ್ಣರನ್ನ ಕಳಿಸಿದ್ದರು. ಅವರು ರಜೆಗೆ ಊರಿಗೆ ಬಂದಾಗ ಈ ತಿಂಡಿ ತಂದು ನಮ್ಮ ತಾಯಿಗೆ ನೀಡಿದ್ದು ನನಗೆ ನೆನಪಿದೆ. ಅವತ್ತು ನನ್ನ ತಾಯಿಯ ಗೆಳತಿಯರಾದ ಬೀಬಕ್ಕ,ಗುಲಾಬಿ, ಕ್ರಿಸ್ತಿನಕ್ಕ ಮತ್ತು ಅವರ ಮಗಳು ರೀತಕ್ಕ ಎಲ್ಲಾ ಸೇರಿಕೊಂಡು ಕವಡೆ ಮಣೆ ಆಡುತ್ತಿದ್ದರು, ಎಲ್ಲರೂ ಅದೇ ಮೊದಲ ಬಾರಿ ಈರೀತಿಯ ಸಿಹಿ ತಿಂಡಿ ನೋಡಿದ್ದು ಮತ್ತು ತಿಂದಿದ್ದು. ಜಗದೀಶಣ್ಣ ಒಂದು ಪ್ರಶ್ನೆ ಕೇಳಿದರು ಇದು ...